• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಭಾರತೀಯರಲ್ಲಿ ಶವಸಂಸ್ಕಾರ: ದೇವದತ್ ಪಟ್ನಾಯಕ್ ಅವರ ಚಿಂತನೆ – ಭಾಗ 2

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
August 10, 2023
in ಅಂಕಣ, ಅಭಿಮತ
0
ಭಾರತೀಯರಲ್ಲಿ ಶವಸಂಸ್ಕಾರ: ದೇವದತ್ ಪಟ್ನಾಯಕ್ ಅವರ ಚಿಂತನೆ – ಭಾಗ 2
Share on WhatsAppShare on FacebookShare on Telegram

ಡಾ. ಜೆ ಎಸ್ ಪಾಟೀಲ.

ADVERTISEMENT

ಟಿಬೆಟ್‌ನ ತಾಂತ್ರಿಕ ಬೌದ್ಧ ಸಿದ್ಧಾಂತದ ಪ್ರಕಾರ ಇದು ಹೆರುಕಾದ ಇನ್ನೊಂದು ರೂಪ ಎನ್ನಲಾಗುತ್ತದೆಯಂತೆ. ಭಾರತಿಯ ಸಂಸ್ಕ್ರತಿಯಲ್ಲಿ ಸಾವನ್ನು ಎಂದಿಗೂ ಮರೆಮಾಚುವ ಅಥವಾ ಮುಚ್ಚಿಡುವ ಕಾರ್ಯಗಳು ಚಾಲ್ತಿಯಲ್ಲಿರಲಿಲ್ಲ. ಬೌದ್ಧ ಕಲೆಯಲ್ಲಿ ಸಿದ್ಧರ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಸಿದ್ಧರು ಯಾವಾಗಲೂ ತಲೆಬುರುಡೆಗಳನ್ನು ಕೈಯಲ್ಲಿ ಹಿಡಿದು ಸ್ಮಶಾನಗಳಲ್ಲಿ ಕುಳಿತುಕೊಳ್ಳುತ್ತಾರೆ. ಸಿದ್ಧ ವಿದ್ಯಾ ಕಲಿಯುವ ವಿದ್ಯಾರ್ಥಿಗಳು ಶವಸಂಸ್ಕಾರದ ಬೂದಿಯನ್ನು ಮೈಯೆಲ್ಲ ಬಳಿದುಕೊಂಡು ಸತ್ತವರ ಮೂಳೆಗಳಿಂದ ಅತಿಮಾನುಷ ಶಕ್ತಿಯನ್ನು ಹುಡುಕುವ ಕಪಾಲಿಕರನ್ನು ನೆನಪಿಸುತ್ತಾರೆ. ವೈದಿಕ ದೇವರುಗಳ ನಾಯಕನಾದ ಇಂದ್ರ ತನ್ನ ಕೈಯಲ್ಲಿ ಸದಾ ವಜ್ರಾಯುಧ ಹಿಡಿದಿರುತ್ತಾನೆ. ಋಷಿ ದಧೀಚಿಯು ಸತ್ತುಹೋದ ಮನುಷ್ಯನ ಬೆನ್ನುಮೂಳೆಯ ಸ್ಥಂಭದಿಂದ ವಜ್ರಾಯುಧ ರಚಿಸಿದ್ದಾನೆಂದು ಪುರಾಣಗಳ ಉಲ್ಲೇಖ ಮಾಡುತ್ತ ಪಟ್ನಾಯಕ್ ಅವರು ಭಾರತೀಯರಲ್ಲಿ ಸಾವಿನ ಕುರಿತು ಇರುವ ನಂಬಿಕೆಯನ್ನು ವರ್ಣಿಸುತ್ತಾರೆ.

ಮಾನವ ತಲೆಬುರುಡೆಯನ್ನು ಖಟ್ವಾಂಗ ಎನ್ನಲಾಗುತ್ತಿದ್ದು ಅದನ್ನು ಶಿವನು ತನ್ನ ಕೈಯಲ್ಲಿ ಹಿಡಿದಿರುತ್ತಾರೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭೂತಾರಾಧನೆ ಅಥವಾ ಪೂರ್ವಜರ ಆತ್ಮಗಳ ಪೂಜಾ ಪದ್ದತಿ ಇನ್ನೂ ಅಸ್ತಿತ್ವದಲ್ಲಿದೆ. ಭೂತಾರಾಧನೆಯಲ್ಲಿ ಸತ್ತು ಹೋದವರು ತಮ್ಮ ಮಕ್ಕಳೊಂದಿಗೆ ವಿಶೇಷ ಮಾಧ್ಯಮಗಳ ಮೂಲಕ ನೇರವಾಗಿ ಮಾತನಾಡುತ್ತಾರೆ ಎನ್ನುವ ನಂಬಿಕೆ ಇದೆ. ತಮಿಳು ಸಾಹಿತ್ಯವು ಪೇ ಅಳ್ವಾರ್ ಮತ್ತು ಭೂತನಾಥ ಅಳ್ವಾರ್, ದೆವ್ವ ಅಥವಾ ಆತ್ಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಹಿಂದೂಗಳು ಸಾವಿಗೆ ಹೆದರುವುದಿಲ್ಲ ಮತ್ತು ಯಾವತ್ತೂ ಸಾವನ್ನು ಮರೆಮಾಚಿ ಇಡುವುದಿಲ್ಲ. ಮೇಲ್ವರ್ಗದ ಹಿಂದೂಗಳು ಸತ್ತಾಗ ಹೊಸದಾಗಿ ಸತ್ತವರ ಭೂತವು ತಾತ್ಕಾಲಿಕವಾಗಿ ಮತ್ತೊಂದು ದೇಹವನ್ನು ಪ್ರವೇಶಿಸಲು ೧೨ ದಿನಗಳವರೆಗೆ ಸಂಕೀರ್ಣವಾದ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಇದರಿಂದಾಗಿ ಸತ್ತವನ ಆತ್ಮವು ವೈತಾರ್ಣಿಯನ್ನು ದಾಟಿ ಮತ್ತೊಂದು ಪ್ರದೇಶವನ್ನು ಪ್ರವೇಶಿಸುತ್ತದೆ ಎನ್ನುವ ನಂಬಿಕೆ ಈಗಲೂ ಇದೆ ಎನ್ನುತ್ತಾರೆ ಪಟ್ನಾಯಕ್.

ವ್ಯಕ್ತಿ ಸತ್ತ ಮೊದಲ ವರ್ಷದಲ್ಲಿ ಪ್ರತಿ ತಿಂಗಳು ಮತ್ತು ಆನಂತರ ಪ್ರತಿ ವರ್ಷಕ್ಕೊಮ್ಮೆ ತಿಥಿ ಆಚರಣೆ ಮಾಡುವ ಪದ್ದತಿ ಹಿಂದೂಗಳಲ್ಲಿ ಇರುವುದರಿಂದ ಅವರು ಸಾವನ್ನು ಮುಚ್ಚಿಡುವುದಿಲ್ಲ ಎನ್ನುವುದು ಪಟ್ನಾಯಕ್ ಅವರ ವಾದ. ಪಟ್ನಾಯಕ್ ಅವರು ವೇದ ಕಾಲದ ಉದಾಹರಣೆಯನ್ನು ನೀಡುತ್ತಾ ಹೇಳುತ್ತಾರೆ; ವೇದಕಾಲದಲ್ಲಿ, ಮನೆಯ ಯಜಮಾನ ತನ್ನ ಮನೆಯಲ್ಲಿ ಮೂರು ಸ್ಥಳಗಳಲ್ಲಿ ಪ್ರತ್ಯೇಕವಾಗಿ ಬೆಂಕಿಯನ್ನು ಉರಿಸುತ್ತಿದ್ದ. ಒಂದು ತನ್ನ ಕುಟುಂಬದ ಒಳಿತಿಗೆ, ಇನ್ನೊಂದು ದೇವತೆಗಳಿಗೆ ಸಂತ್ರಪ್ತಿಪಡಿಸಲು ಹಾಗು ಮತ್ತೊಂದು ತನ್ನ ಪೂರ್ವಜರ ಸ್ಮರಣೆಗಾಗಿ. ಹೊರಚಾಚಿದಂತೆ ತೋರಿಸಿರುವ ಬಲಗೈಯ ಹೆಬ್ಬೆರಳನ್ನು ಬಳಸಿ ಪಿತೃಗಳಿಗೆ ಪಿಂಡ ಸಮರ್ಪಿಸುವ ಪಿಂಡ ಪ್ರಧಾನ ಕಾರ್ಯವನ್ನು ಇಂದಿಗೂ ಮಾಡಲಾಗುತ್ತದೆ. ಸಾವು ಎಲ್ಲಾಕಡೆಗೆ ಇರುತ್ತದೆˌ ಸಾವಿಲ್ಲದ ಸ್ಥಳವೆ ಇಲ್ಲ ˌ ಭೂತಕಾಲವು ವರ್ತಮಾನವನ್ನು ರೂಪಿಸುತ್ತದೆ. ಅದಕ್ಕಾಗಿಯೇ ನಾವು ಪಡೆಯುವ ಜ್ಞಾನವು ಸಾವಿಗೆ ಸಂಬಂಧಿಸಿದ್ದಾಗಿದೆ ಎನ್ನುವುದು ಪಟ್ನಾಯಕ್ ಅವರ ವಾದವಾಗಿದೆ.

ಭಯ ಹುಟ್ಟಿಸುವ ಶಿವನ ಇನ್ನೊಂದು ರೂಪವನ್ನು ಭೈರವ ಎಂದು ಗುರುತಿಸಲಾಗುತ್ತದೆ. ಆತನನ್ನು ದಕ್ಷಿಣಣಾಮೂರ್ತಿ ಎಂದೂ ಕರೆಯಲಾಗುತ್ತದೆ. ಏಕೆಂದರೆ ಹಿಂದೂ ಸಂಪ್ರದಾಯದಲ್ಲಿ ದಕ್ಷಿಣ ದಿಕ್ಕು ಸಾವಿನ ದಿಕ್ಕು ಮತ್ತು ಸ್ಮಶಾನಗಳ ದಿಕ್ಕು. ಹಾಗಾಗಿ ಶಿವ ಮಾತ್ರ ದಕ್ಷಿಣದ ಕಡೆ ಮುಖಮಾಡಿ ಕುಳಿತಿರುವ ಹಿಂದೂಗಳ ಏಕೈಕ ದೇವರು. ಶಿವನು ದಕ್ಷಿಣದ ಕಡೆಗೆ ಮುಖಮಾಡಿ ಕುಳಿತು ದಕ್ಷಿಣ ದಿಕ್ಕಿನಿಂದ ಬರುವಳೆಂದು ನಂಬಿರುವ ದಕ್ಷಿಣ ಕಾಳಿಯನ್ನು ಸ್ವಾಗತಿಸುತ್ತಾನೆ ಎನ್ನುವುದು ಪಟ್ನಾಯಕ್ ಅವರ ವಿವರಣೆ. ಆದರೆ ವೈದಿಕ ಸಂಪ್ರದಾಯದಲ್ಲಿ ಸಾವು ಒಂದು ಸೂತಕ ಮತ್ತು ಅಸಹ್ಯಕರವಾದ ಘಟನೆ. ವೈದಿಕರು ಸಾವಿನ ಸಂಗತಿಯನ್ನು ಅಪವಿತ್ರವೆಂದು ದೂರ ದೂಡುತ್ತಾರೆ. ಆದರೆ ಸಾವು ತಂತ್ರ ವಿದ್ಯೆಯ ಸಂಪ್ರದಾಯದ ಪ್ರಕಾರ ಒಂದು ಶುಭಕರ ಘಟನೆ. ಸಾವೆಂಬ ಅಶುಭ ಘಟನೆಯು ಶಿವನೆಂಬ ದೈವದ ದೃಷ್ಟಿಯಿಂದ ಮತ್ತು ಕಾಳಿಯ ಕೃಪೆಯಿಂದ ಶವವು ಶಿವನಾಗಿ ಮಾರ್ಪಡುತ್ತದೆ ಎನ್ನುವ ನಂಬಿಕೆ ಪುರಾತನ ಭಾರತೀಯರಲ್ಲಿ ಇತ್ತು ಎಂದು ಪಟ್ನಾಯಕ್ ಅವರ ಸಾಧಿಸುತ್ತಾರೆ.

ವಿಕ್ರಮ-ಬೇತಾಳ್ ಎಂಬ ಭಾರತದ ಜನಪ್ರೀಯ ಜಾನಪದ ಕಥೆಯಲ್ಲಿ ರಾಜಾ ವಿಕ್ರಮಾದಿತ್ಯ ನಿರ್ಭಯವಾಗಿ ಶವದಲ್ಲಿರುವ ಬೇತಾಳವನ್ನು ಹೆಗಲ ಮೇಲೆ ಹೊತ್ತಿರುತ್ತಾನೆ. ವಿಕ್ರಮ-ಬೇತಾಳ ಕಥೆಗಳು ಜೀವನದ ಅನೇಕ ಸತ್ಯವನ್ನು ಕಲಿಸುತ್ತವೆ. ಮಹಾಭಾರತದಲ್ಲಿ ವ್ಯಾಸ ಇಡೀ ಶಾಂತಿ ಪರ್ವವೆಂಬ ಅಧ್ಯಾಯವನ್ನು ಸಾವು ಹಾಗು ಶವಗಳಿಗೆ ಮೀಸಲಿಟ್ಟಿದ್ದಾನೆ. ಯುದ್ಧಭೂಮಿಯಲ್ಲಿ ಬಿದ್ದುಕೊಂಡ ಮೃತ ದೇಹಗಳು, ಶವಗಳೆದುರಿಗೆ ಅಳುತ್ತ ಕುಂತಿರುವ ವಿಧವೆಯರು ಮತ್ತು ಅನಾಥ ಮಕ್ಕಳು, ರಕ್ತ ಚೆಲ್ಲಿದ ನೆಲ, ಊಳಿಡುವ ನಾಯಿ ಮತ್ತು ನರಿಗಳು, ಕಾಗೆ-ರಣಹದ್ದುಗಳು, ಗಾಂಧಾರಿ ತನ್ನ ಎದೆ ಬಡೆದುಕೊಂಡು ಅಳುತ್ತ ಕೃಷ್ಣನನ್ನು ಶಪಿಸುವ ದೃಶ್ಯವನ್ನು ಪಟ್ನಾಯಕ್ ಅವರು ಉಲ್ಲೇಖಿಸುತ್ತಾರೆ. ಮುಸ ಪರ್ವದಲ್ಲಿ ಇದೇ ರೀತಿಯ ವಿವರಣೆ ಪುನರಾವರ್ತನೆಯಾಗುತ್ತದೆ ಎನ್ನುವುದನ್ನೂ ಹೇಳುತ್ತಾರೆ. ಸತ್ತುಹೋದ ಯಾದವ ಯೋಧರ ದೇಹಗಳಿಂದ ಆವೃತವಾದ ಕಡಲತೀರದ ದೃಶ್ಯವು ಸಾವನ್ನು ಭಾರತಿಯರು ಮುಚ್ಚಿಡುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎನ್ನುವುದು ಪಟ್ನಾಯಕ್ ಅವರ ವಾದ.

ಹಿಂದೂ ಧರ್ಮದ ಪ್ರಕಾರ ಯುದ್ಧಗಳಲ್ಲಿ ಮಡಿದವರನ್ನು ವರ್ಣಿಸಲು ಪದಗಳಿಲ್ಲ. ವಿ. ಡಿ ಸಾವರಕರ್ ಅವರು “ಹುತಾತ್ಮ” ಎಂಬ ಪದವನ್ನು ಯುದ್ದದಲ್ಲಿ ಮಡಿದವರಿಗಾಗಿಯೇ ಪ್ರಯೋಗಿಸುತ್ತಾರೆ. ಹುತಾತ್ಮ ಪದಕ್ಕೆ ಪರ್ಯಾಯವಾಗಿ “ಶಹೀದ್” ಎಂಬ ಪದವು ಏಕದೇವೋಪಾಸಕ ಧರ್ಮಗಳಲ್ಲಿ ಪ್ರಯೋಗಿಸಲಾಗುತ್ತದೆ. ಆದರೆ ಕೊರೋನ ಸಾವುಗಳು ಮತ್ತು ಆ ಶವಗಳ ಸಾಮೂಹಿಕ ಸಂಸ್ಕಾರದ ದೃಶ್ಯಗಳು ವಿದೇಶಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಿಂದುತ್ವವಾದಿಗಳು ದಿಗಿಲುಗೊಂಡಿದ್ದರು. ಹಿಂದುತ್ವವು ಅವರು ತಮ್ಮ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳಲು ಬಹಳ ಅಳೆದು ತೂಗಿ ಬಳಸುತ್ತಿದ್ದಾರೆ. ಹಿಂದುತ್ವವಾದಿಗಳು ಯುದ್ಧಭೂಮಿಯಲ್ಲಿನ ಕಥೆಗಳನ್ನು ಹೇಳುತ್ತಾ ಖುಷಿಪಡುತ್ತಾರೆ. ಶತೃ ಸೈನಿಕರನ್ನು ಛೇದಿಸುವ ದೃಶ್ಯಗಳನ್ನು ವಾಟ್ಸಾಪ್ ಗುಂಪಿನಲ್ಲಿ ಖುಷಿಯಿಂದ ಹಂಚಿಕೊಂಡು ತಮ್ಮ ದೇಶಭಕ್ತಿಯ ಬದ್ಧತೆಯನ್ನು ಪ್ರದರ್ಶಿಸುತ್ತಾರೆ ಎಂದು ಪಟ್ಮಾಯಕ್ ಬರೆಯುತ್ತಾರೆ.

ಆದರೆ, ಕೊರೋನ ಸೋಂಕಿತರ ಶವಗಳಿಗೆ ಕನಿಷ್ಠ ಗೌರವ ಸಿಗದಿರುವ ಸುದ್ದಿಗಳು ಹರಿದಾಡುವುದನ್ನು ಆತಂಕದಿಂದ ವಿರೋಧಿಸುತ್ತಾರೆ. ಹಿಂದುತ್ವವಾದಿಗಳು ತಾವು ಆರಾಧಿಸುವ ರಾಮ ಮತ್ತು ಕೃಷ್ಣರು ಸದಾ ಬಿಲ್ಲು ಬಾಣಗಳನ್ನು ಹಿಡಿದುಕೊಂಡು ಯುದ್ಧಭೂಮಿಯಲ್ಲಿ ಇರುವುದನ್ನು ಇಷ್ಟಪಡುತ್ತಾರೆ. ಆ ಚಿತ್ರಗಳು ಅವರಿಗೆ ಭೀಕರವಾಗಿ ಕಾಣುವುದಿಲ್ಲ. ಇವರು ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಗಳನ್ನು ಯುದ್ಧಭೂಮಿಯಾಗಿ ನೋಡುವುದಿಲ್ಲ. ರೋಗಿಗಳ ಆರೈಕೆ ಮಾಡುತ್ತ ಅಲ್ಲಿ ಸೋಂಕಿನೊಂದಿಗೆ ಹೋರಾಡಿದ ನೂರಾರು ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಉಳಿದ ಆರೋಗ್ಯ ಕಾರ್ಯಕರ್ತರನ್ನು ಹಿಂದುತ್ವವಾದಿಗಳು ಯೋಧರಂತೆ ನೋಡಲು ಸಾಧ್ಯವಿಲ್ಲ. ಕೊರೋನ ಸೋಂಕು ನಿರ್ವಹಿಸಲು ಆಮ್ಲಜನಕ ಮತ್ತಿತರ ಸೌಲಭ್ಯಗಳನ್ನು ಮಾಡಿಕೊಂಡಿದ್ದರೆ, ಮುಂಚಿತವಾಗಿ ಜನರಿಗೆ ಲಸಿಕೆ ನೀಡಿದ್ದರೆ ಅನೇಕರು ಬದುಕುಳಿಯುತ್ತಿದ್ದರು ಎನ್ನುತ್ತಾರೆ ಲೇಖಕರು.

ಹೀಗೆ ಸತ್ತವರನ್ನು ನಾವು ಏನೆಂದು ಕರೆಯಬೇಕು? ಅವರನ್ನು ವ್ಯವಸ್ಥೆಯ ಬಲಿಪಶುಗಳು ಎಂದು ಕರೆಯಬಹುದೇ ಎಂದು ಪಟ್ನಾಯಕ್ ಪ್ರಶ್ನಿಸುತ್ತಾರೆ. ಹಿಂದುತ್ವವಾದಿಗಳು ಮುಸ್ಲಿಮರ ವಿರುದ್ಧ ಹೋರಾಡುವ ಇಸ್ರೇಲಿಗರನ್ನು ಪ್ರಶಂಸಿಸುತ್ತಾರೆ, ಪ್ರೀತಿಸುತ್ತಾರೆ, ಆದರೆ ಅದೇ ಇಸ್ರೇಲ್ ತನ್ನ ಇಡೀ ದೇಶದ ಜನರಿಗೆ ದಾಖಲೆಯ ರೀತಿಯಲ್ಲಿ ಸೂಕ್ತ ಸಮಯದಲ್ಲಿ ಹೇಗೆ ಲಸಿಕೆ ನಿಡಿತ್ತು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ. ಹಿಂದುತ್ವವಾದಿಗಳ ಆಡಳಿತ ಯಂತ್ರವು ಸರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಸೋಂಕು ಹರಡಿ ದೇಶದ ಜನರ ಸಾವಿಗೆ ಕಾರಣವಾಯಿತು. ಈ ಹಿಂದುತ್ವವಾದಿಗಳು ಆಸ್ಪತ್ರೆಗಳನ್ನು ಯುದ್ದಭೂಮಿಯಾಗಿ ನೋಡಲಿಲ್ಲವಾಗಿ ಇತಿಹಾಸದಲ್ಲಿ ರಾಜಾ ಜೈಚಂದ್ ಪರಕೀಯ ಆಕ್ರಮಣಕಾರರೊಂದಿಗೆ ಕೈಜೋಡಿಸಿ ದೇಶ ಪರಕೀಯರ ವಶವಾಗುವಂತೆ ಮಾಡಿದ್ದ ಪ್ರಸಂಗದಂತೆ ಇಂದು ಹಿಂದುತ್ವವಾದಿಗಳು ವೈರಸ್ಸಿಗೆ ಜನ ಬಲಿಯಾಗುವಂತ ಪೂರಕ ವಾತಾವರಣ ಸ್ರಷ್ಠಿ ಮಾಡಿದ್ದಾರೆ ಎನ್ನುವುದು ಪಟ್ನಾಯಕ್ ಅವರ ವಾದ.

ಭಾರತದಲ್ಲಿ ಕೊರೋನದಿಂದ ಸಂಭವಿಸಿದ ಅಪಾರ ಸಾವು ನೋವುಗಳನ್ನು ಸ್ಥಳಿಯ ಮಾಧ್ಯಮಗಳು ತೋರಿಸಲಿಲ್ಲ. ಏಕೆಂದರೆ ಭಾರತೀಯ ಮಾಧ್ಯಮಗಳು ಆಳುವ ಸರಕಾರದ ಸಾಕು ನಾಯಿಯಂತೆ ವರ್ತಿಸುತ್ತವೆ. ಆದರೆ, ವಿದೇಶಿ ಮಾಧ್ಯಮಗಳು ಆ ದ್ರಶ್ಯಗಳನ್ನು ತೋರಿಸುವ ಮೂಲಕ ಇಲ್ಲಿನ ಆಳುವ ಸರಕಾರದ ಅಸಮರ್ಥತೆ ಮತ್ತು ಸರಕಾರವನ್ನು ಸಮರ್ಥಿಸುವ ಜನರ ವಿಕೃತಿಯನ್ನು ಏಕ ಕಾಲಕ್ಕೆ ಹೊರಗೆಡವಿದ್ದವು. ಚಾಮುಂಡಿ, ಭೈರವ, ಬೇತಾಳ, ಭೂತ, ಪ್ರೇತˌ ಪಿಶಾಚಿ ಮತ್ತು ಸಿದ್ಧರು ಎಲ್ಲರೂ ಇಂದು ಸ್ಮಶಾನದಲ್ಲಿದ್ದಾರೆ. ಅದರ ತದ್ರೂಪ ರಾಜಕಾರಣಿಗಳು ಅಧಿಕಾರದ ಗದ್ದುಗೆ ಅತಿಕ್ರಮಿಸಿ ಕುಳಿತಿದ್ದಾರೆ. ಭಾರತದ ನದಿ ತೀರಗಳಲ್ಲಿನ ಭೀಕರ ಸತ್ಯ ದೃಶ್ಯಗಳು ಹಿಂದುತ್ವವಾದಿಗಳು ನೋಡುವ ಧೈರ್ಯಮಾಡುತ್ತಿಲ್ಲ. ಆ ಧೈರ್ಯದಿಂದ ಅವರು ಅಲ್ಲಿ ಮಡಿದವರನ್ನು ಹುತಾತ್ಮರು ಎಂದು ಘೋಷಿಸಲಿ ಎನ್ನುವುದು ಪಟ್ನಾಯಕ್ ಅವರ ಆಶಯವಾಗಿತ್ತು. ಆದರೆ ಮೋದಿ ಆಡಳಿತ ಮತ್ತು ಹಿಂದುತ್ವವಾದಿಗಳಿಗೆ ಈ ಸತ್ಯ ಅರ್ಥವಾಗಲಿಲ್ಲ ಅಲ್ಲವೆ!

Tags: CultureFuneral in indiaIndiaIndian culture to protect nature
Previous Post

ಕೇರಳ ಇನ್ನು ಮುಂದೆ ಕೇರಳಂ | ನಿಲುವಳಿ ಮಂಡಿಸಿದ ಪಿಣರಾಯಿ

Next Post

ರಾಹುಲ್​ ಗಾಂಧಿ ಮುತ್ತು ಕೊಟ್ಟಿದ್ದು ಸತ್ಯನಾ..? ಉತ್ತರಿಸಲಾಗದೆ ಟ್ರ್ಯಾಪ್​ ಮಾಡಿತಾ..?

Related Posts

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
0

ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ  ಎದ್ದು ಕಾಣುವ ಕಲಾವಿದ ನಾ ದಿವಾಕರ “ ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ...

Read moreDetails

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
ಹೊರಟವರೂ ನೀವೇ.. ಕಾಡುವವರೂ ನೀವೇ..!

ಹೊರಟವರೂ ನೀವೇ.. ಕಾಡುವವರೂ ನೀವೇ..!

December 17, 2025
Next Post
ರಾಹುಲ್​ ಗಾಂಧಿ ಮುತ್ತು ಕೊಟ್ಟಿದ್ದು ಸತ್ಯನಾ..? ಉತ್ತರಿಸಲಾಗದೆ ಟ್ರ್ಯಾಪ್​ ಮಾಡಿತಾ..?

ರಾಹುಲ್​ ಗಾಂಧಿ ಮುತ್ತು ಕೊಟ್ಟಿದ್ದು ಸತ್ಯನಾ..? ಉತ್ತರಿಸಲಾಗದೆ ಟ್ರ್ಯಾಪ್​ ಮಾಡಿತಾ..?

Please login to join discussion

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada