2 ನೇ ಹಂತದ ಕೊರೋನಾ ಲಸಿಕೆ ಅಭಿಯಾನ – ಲಸಿಕೆ ಪಡೆಯುತ್ತಿರುವ ಪ್ರಧಾನಿ, ಮುಖ್ಯಮಂತ್ರಿ, ಜನಪ್ರತಿನಿಧಿಗಳು
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ 50 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮುಖ್ಯಮಂತ್ರಿಗಳು, ಸಂಸದರು ಹಾಗೂ ಶಾಸಕರು ಎರಡನೇ ಹಂತದ ಲಸಿಕೆ ವಿತರಣೆಯಲ್ಲಿ ಲಸಿಕೆ ಪಡೆಯಲಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.
ಜನವರಿ 16 ರಂದು ಪ್ರಾರಂಭವಾದ ಲಸಿಕೆ ವಿತರಣೆ ಅಭಿಯಾನದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕರೋನಾ ಸೋಂಕಿನ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿತ್ತು. ಆದರೆ, ಲಸಿಕೆಯ ಸುರಕ್ಷತೆಯ ಕುರಿತು ಉದ್ಭವಿಸಿರುವ ಗೊಂದಲದ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಈ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ.
ಎರಡನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಎರಡಕ್ಕಿಂತ ಹೆಚ್ಚು ರೋಗಗಳಿರುವ (comorbidities) ವ್ಯಕ್ತಿಗಳಿಗೆ ಲಸಿಕೆನೀಡಲಾಗುವುದು ಎಂದು ಸರ್ಕಾರ ತಿಳಿಸಿತ್ತು.
ಲಸಿಕೆ ಅಭಿಯಾನದ ಕುರಿತು ಮುಖ್ಯಮಂತ್ರಿಗಳೊಡನೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಹರಿಯಾಣ, ಬಿಹಾರ, ತೆಲಂಗಾಣ ಸೇರಿದಂತೆ ಇತರೆ ರಾಜ್ಯದ ಮುಖ್ಯಮಂತಿಗಳು ಶಾಸಕರು ಸಂಸದರುಗಳು, ಜನಪ್ರತಿನಿಧಿಗಳು ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸೂಚಿಸಿದ್ದಾರೆ.
ಮೊದಲ ಕರೋನಾ ಲಸಿಕೆ ಅಭಿಯಾನದಲ್ಲಿ ಲಸಿಕೆ ತೆಗೆದು ಕೊಳ್ಳುವುದರ ಪ್ರಮಾಣ ಕಡಿಮೆಯಾಗಿದೆ. ಆರೋಗ್ಯ ಕಾರ್ಯಕರ್ತೆಯರು ವೈದ್ಯರು, ದಾದಿಯರು, ಲಸಿಕೆ ತೆಗೆದುಕೊಳ್ಳುವಳ್ಳಿ ಹಿಂಜರೆಯುತ್ತಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಈ ಸಾಂಕ್ರಾಮಿಕ ರೋಗ ಮುಂದಕ್ಕೆ ಯಾವ ಸ್ವರೂಪ ತಾಳುತ್ತೆ ಎಂದು ಹೇಳಲಾಗುವುದಿಲ್ಲ, ಹಿಂಜರಿಯದೆ ದೈರ್ಯದಿಂದ ಲಸಿಕೆ ತೆಗೆದುಕೊಳ್ಳುವಂತೆ ಸರ್ಕಾರದ ಪರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆಂದು ಕೇಂದ್ರ ಸರ್ಕಾರದ ಲಸಿಕೆ ಕಾರ್ಯ ತಂತ್ರದ (ಎನ್ಐಟಿಐ) ಮುಖ್ಯಸ್ಥರಾದ ವಿ.ಕೆ ಪಾಲ್ ಮನವಿ ಮಾಡಿಕೊಂಡಿದ್ದಾರೆಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಸಿಕೆ ಪಡೆದವರಲ್ಲಿ 0.002% ಅಡ್ಡ ಪರಿಣಾಮ ಉಂಟುಮಾಡಿದೆ. 0.18 ರಷ್ಟು ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಮತ್ತೆ 3 ನೇ ಹಂತದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸರ್ಕಾರ ತಿಳಿಸಿದೆ.