ತುಮಕೂರು ಜಿಲ್ಲೆಯಲ್ಲಿ 2017ರಲ್ಲಿ ಮಾನಸಿಕ ಅಸ್ವಸ್ಥೆಗೆ ಡ್ರಾಪ್ ನೀಡುವ ನೆಪದಲ್ಲಿ ತನ್ನ ಖಾಸಗಿ ಕಾರಿನಲ್ಲಿ ಅತ್ಯಾಚಾರ ಎಸಗಿದ ಪೊಲೀಸ್ ಅಧಿಕಾರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ 20ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಆರೋಪಿ ಉಮೇಶಯ್ಯಗೆ ಐಪಿಸಿ ಸೆಕ್ಷನ್ 376 (2)/(3) ಮತ್ತು 376(2) (ಎ) (ಎನ್) ಅಡಿಯಲ್ಲಿ ಪ್ರಕರಣ ದಡಿ ಉಮೇಶಯ್ಯಗೆ 1 ಲಕ್ಷ ರೂಪಾಯಿಗಳ ದಂಡ ಕೋರ್ಟ್ ವಿಧಿಸಿದೆ.

ಜನವರಿ 14, 2017ರಲಿ ಘಟನೆ ನಡೆದಿದ್ದು, ಖಾಸಗಿ ವಾಹನದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಉಮೇಶಯ್ಯ ಅತ್ಯಾಚಾರ ಎಸಗಿದ್ದಾನೆ. ಕಾರು ಚಾಲಕ ಈಶ್ವರನನ್ನು ನ್ಯಾಯಾಲಯವು ಪ್ರಕರಣದಿಂದ ಮುಕ್ತಗೊಳಿಸಿದೆ.
ಘಟನೆ ಬೆಳಕಿಗೆ ಬಂದ ಆರಂಭದಲ್ಲಿ ಪೊಲೀಸರು ಪ್ರಕರಣವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಆದರೆ, ಈ ಬಗ್ಗೆ ವ್ಯಾಪಕವಾಗಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನ ದಾಖಲಿಸಿ ಉಮೇಶಯ್ಯನನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು.






