• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಿಬಿಎ ವ್ಯಾಪ್ತಿಯಲ್ಲಿ 441 ಹೊಸ ಶೌಚಾಲಯಗಳ ನಿರ್ಮಾಣ: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂಗೆ ಹೋದಾಗ, ಅಲ್ಲಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐ ಮೂಲಕ ಪ್ರಶ್ನೆ ಕೇಳಿದೆ : ಡಿಕೆ ಶಿವಕುಮಾರ್..

ಪ್ರತಿಧ್ವನಿ by ಪ್ರತಿಧ್ವನಿ
March 13, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಜಿಬಿಎ ವ್ಯಾಪ್ತಿಯಲ್ಲಿ 441 ಹೊಸ ಶೌಚಾಲಯಗಳ ನಿರ್ಮಾಣ: ಡಿಸಿಎಂ ಡಿ.ಕೆ. ಶಿವಕುಮಾರ್
Share on WhatsAppShare on FacebookShare on Telegram

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 388 ಹಳೆಯ ಶೌಚಾಲಯಗಳ ಜತೆಗೆ ಹೊಸದಾಗಿ 441 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ADVERTISEMENT
Social Media Ban For Children : ಸಿದ್ದರಾಮಯ್ಯ ಅದನ್ನು ಬ್ಯಾನ್ ಮಾಡಿ ನೀವು. #pratidhvani #siddaramaiah

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಆರತಿ ಕೃಷ್ಣ ಅವರು ಜಿಬಿಎ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ, ಜನಸ್ನೇಹಿಯಾಗಿಲ್ಲ, ಎಐ ಬಳಸಿ ಸ್ವಚ್ಛತೆ ಪರಿಶೀಲನೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರು ನಗರದಾದ್ಯಂತ 380 ಸಾರ್ವಜನಿಕ ಶೌಚಾಲಯಗಳಿವೆ. 65 ಶೌಚಾಲಯಗಳನ್ನು ನಿವೃತ್ತ ಪೌರಕಾರ್ಮಿಕರಿಗೆ ನಡೆಸಲು ನೀಡಿದ್ದೇವೆ. 20 ಶೌಚಾಲಯಗಳನ್ನು ವಿಶೇಷ ಚೇತನರು ನಡೆಸುತ್ತಿದ್ದಾರೆ. ಶುಭ್ರ ಬೆಂಗಳೂರು ಯೋಜನೆ ಅಡಿ 60 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

191 ಶೌಚಾಲಯಗಳು ಹೊಸದಾಗಿ ನಿರ್ಮಾಣವಾಗುತ್ತಿವೆ. ಸ್ವಚ್ಚ ಭಾರತ ಮಿಷನ್ ಅಡಿ ಕೇಂದ್ರ ಸರ್ಕಾರ 13.5 ಕೋಟಿ ಹಣ ನೀಡಿದ್ದಾರೆ. ಅದರಲ್ಲಿ 90 ಶೌಚಾಲಯ ನಿರ್ಮಿಸುತ್ತಿದ್ದು, ಬ್ರಾಂಡ್ ಬೆಂಗಳೂರು ಯೋಜನೆಯಡಿ 100 ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಇದು ಮಹಿಳೆಯರಿಗಾಗಿ ನಿರ್ಮಾಣ ಮಾಡಲಾಗುತ್ತಿದೆ. 441 ಹೊಸ ಶೌಚಾಲಯಗಳು ಹಾಗೂ 388 ಹಳೆಯ ಶೌಚಾಲಯಗಳಿವೆ. ಇವುಗಳ ಜತೆಗೆ ಯಾವುದಾದರೂ ನಿರ್ದಿಷ್ಟ ಸ್ಥಳಗಳಲ್ಲಿ ಶೌಚಾಲಯಗಳ ಅಗತ್ಯತೆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅಲ್ಲೂ ಜಾಗ ಲಭ್ಯತೆ ನೋಡಿಕೊಂಡು, ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : BREAKING: ಶಾಸಕ ಭೈರತಿ ಬಸವರಾಜ್ ಗೆ ಜಾಮೀನು!

ಕರ್ನಾಟಕ ಮಾದರಿ ಬಳಸಿ ಅಸ್ಸಾಂ ಚುನಾವಣೆ ಗೆಲ್ಲಬಹುದು ಎಂದು ಎಐ ಹೇಳುತ್ತದೆ..

ಇನ್ನೂ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ರಾಜ್ಯದಲ್ಲಿ ಆಡಳಿತ ಸುಧಾರಣೆ ಕುರಿತು ಕೃತಕ ಬುದ್ಧಿಮತ್ತೆ ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ, “ಈಗ ನಾವೆಲ್ಲರೂ ಕೃತಕ ಬುದ್ಧಿಮತ್ತೆಯ ಹೊಸಯುಗಕ್ಕೆ ಕಾಲಿಡುತ್ತಿದ್ದೇವೆ. ಈ ಬಗ್ಗೆ ಪ್ರಪಂಚದೆಲ್ಲೆಡೆ ಚರ್ಚೆಯಾಗುತ್ತಿದ್ದು, ಪ್ರಧಾನಮಂತ್ರಿಗಳು ಈ ವಿಚಾರವಾಗಿ ದೊಡ್ಡ ಸಮ್ಮೇಳನ ನಡೆಸಿದರು. ಕೋರ್ಟ್ ಗಳಲ್ಲಿ ಇದರ ಬಳಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಬಿಎಸ್ಸಿಯಲ್ಲಿ 3ರಿಂದ 8ನೇ ತರಗತಿವರೆಗೆ ಈ ವಿಚಾರವನ್ನು ಪಠ್ಯದಲ್ಲಿ ಸೇರಿಸಲು ತಿಳಿಸಲಾಗಿದೆ. ಆಡಳಿತದಲ್ಲಿ ಈ ಕೃತಕಬುದ್ಧಿಮತ್ತೆ ಬಳಕೆ ಬಗ್ಗೆ ತೀರ್ಮಾನ ಮಾಡುವ ಮುನ್ನ ದೊಡ್ಡ ಸಂಶೋಧನೆ ಆಗಬೇಕು. ಸಂಶೋಧನೆಯಾಗದೇ ಈ ಬಗ್ಗೆ ತೀರ್ಮಾನ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.

ಪರಿಷತ್ ಸಭಾಪತಿಗಳು ಸದನದ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಗೆ ಹಾಕಿದರೆ ಅಲ್ಲವೇ ಡಿಜಿಟಲ್ ಆಗಿ ರೂಪುಗೊಳ್ಳುವು. ಅದೇ ರೀತಿ ಕೃತಕಬುದ್ಧಿಮತ್ತೆಯಲ್ಲಿ ಹೊಸದಾಗಿ ಏನನ್ನೂ ಸೃಷ್ಟಿ ಮಾಡಲು ಆಗುವುದಿಲ್ಲ. ನೀವು ಅದರಲ್ಲಿ ಏನು ಹಾಕುತ್ತೀರೋ ಅದೇ ಹೊರಗೆ ಬರುತ್ತದೆ. ಈ ವಿಚಾರವಾಗಿ ತೀರ್ಮಾನ ಮಾಡುವುದು ಕಷ್ಟ ಎಂದು ತಿಳಿಸಿದ್ದಾರೆ.

ನಾನು ಭಾಷಣ ವಿಚಾರವಾಗಿ ನನ್ನ ಪಿಎಗೆ ಕರೆ ಮಾಡಿ ಕೇಳುವಾಗ, ನೀವು ಅದನ್ನು ಯಾಕೆ ಕೇಳುತ್ತೀರಿ, ಚಾಟ್ ಜಿಪಿಟಿಯಲ್ಲಿ ಹಾಕಿ ಎಂದು ನನ್ನ ಮಗಳು ಹೇಳಿದಳು. ಆಗ ನನಗೆ ಸಾಕಷ್ಟು ಮಾಹಿತಿಗಳು ಸಿಕ್ಕವು. ನಾನು ಈ ರೀತಿ ಕೃತಕಬುದ್ಧಿಮತ್ತೆ ಬಳಕೆ ವಿಚಾರದಲ್ಲಿ ಸಾಕಷ್ಟು ಪ್ರಯೋಗ ಮಾಡಿದ್ದೇನೆ. ಆದರೆ ನಿಖರತೆ ಇನ್ನಷ್ಟು ಸುಧಾರಿಸಬೇಕಾಗಿದೆ. ಈ ವಿಚಾರದ ಬಗ್ಗೆ ಸಭಾಪತಿಗಳೇ ಸಂಶೋಧನೆ ಮಾಡಲಿ ಎಂದು ಭಾರತಿ ಶೆಟ್ಟಿ ಹಾಸ್ಯ ಚಟಾಕಿ ಬಾರಿಸಿದ್ದಾರೆ.

ಸದನದಲ್ಲಿರುವ ದಾಖಲೆಗಳನ್ನು ಕಂಪ್ಯೂಟರ್ ಗೆ ಅಪ್ ಲೋಡ್ ಮಾಡದೇ ನಿಮಗೆ ಮಾಹಿತಿ ಸಿಗಲು ಹೇಗೆ ಸಾಧ್ಯ? ಕೋರ್ಟ್ ನಲ್ಲಿ ಈ ಹಿಂದೆ ಬಂದಿರುವ ತೀರ್ಪುಗಳನ್ನು ಅಪ್ ಲೋಡ್ ಮಾಡಿದಾಗ ಮಾತ್ರ ಅದರಲ್ಲಿ ಮಾಹಿತಿ ಸಿಗುತ್ತದೆ. ಹಾಗೆಂದು ಅವುಗಳನ್ನೇ ಆಧರಿಸಿ ತೀರ್ಪು ಬರೆಯಲು ಆಗುವುದಿಲ್ಲ” ಎಂದು ವಿವರಿಸಿದ್ದಾರೆ.

ನಾನು ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂಗೆ ಹೋದಾಗ, ಅಲ್ಲಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐ ಮೂಲಕ ಪ್ರಶ್ನೆ ಕೇಳಿದೆ, ಅದಕ್ಕೆ ಅದು ನೀವು ಕರ್ನಾಟಕ ಮಾದರಿ ಅನುಸರಿಸಿ ಅಸ್ಸಾಂ ಚುನಾವಣೆ ಗೆಲ್ಲುತ್ತೀರಿ ಎಂದು ಹೇಳುತ್ತದೆ” ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

Tags: artificial intelligenceBharati ShettyBjp MLCBudget sessionChat GPTcongress karnatakaCouncil SessionDK ShivakumarGBAKarnataka GovernmentKarnataka PoliticsLadies ToiletsPratidhvaniPublic ToiletsToiltes
Previous Post

ಡೊನಾಲ್ಡ್ ಟ್ರಂಪ್ ಗೆ ಛೀಮಾರಿ ಹಾಕಿದ ಸ್ವಂತ ಅಣ್ಣನ ಮಗಳು ಕೇಳಿದ ಪ್ರಶ್ನೆಗಳಿವು!

Next Post

ಯುಗಾದಿ ಹಬ್ಬಕ್ಕೆ ಬಮೂಲ್‌ನಿಂದ ಹಾಲು ಉತ್ಪಾದಕರಿಗೆ ಭರ್ಜರಿ ಗಿಫ್ಟ್ : ಡಿಕೆ ಸುರೇಶ್..

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
Next Post
ಯುಗಾದಿ ಹಬ್ಬಕ್ಕೆ ಬಮೂಲ್‌ನಿಂದ ಹಾಲು ಉತ್ಪಾದಕರಿಗೆ ಭರ್ಜರಿ ಗಿಫ್ಟ್ : ಡಿಕೆ ಸುರೇಶ್..

ಯುಗಾದಿ ಹಬ್ಬಕ್ಕೆ ಬಮೂಲ್‌ನಿಂದ ಹಾಲು ಉತ್ಪಾದಕರಿಗೆ ಭರ್ಜರಿ ಗಿಫ್ಟ್ : ಡಿಕೆ ಸುರೇಶ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada