ಬೆಳಗಾವಿ : ಯಾವುದೇ ಕಾರಣಕ್ಕೂ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರ್ವಾನುಮತಗಳೊಂದಿಗೆ ಜಯಭೇರಿ ಬಾರಿಸಲಿದೆ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ರಾಜ್ಯದಲ್ಲಿ ಪಕ್ಷ ಸಂಘಟನೆ ಕಾರ್ಯ ಮಾಡುವಲ್ಲಿ ಬಹಳ ಗಟ್ಟಿಯಾಗಿದೆ. ಫಲಾನಭವಿಗಳಿಗಾಗಿ ನಾಲ್ಕು ರಥಯಾತ್ರೆಗಳನ್ನು ಮಾಡಲಾಗ್ತಿದೆ. ನಿರಂತರವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಚಟುವಟಿಕೆಗಳು ನಡೆಯುತ್ತಲೇ ಇದೆ ಎಂದು ಸಂತೋಷ ವ್ಯಕ್ತಪಡಿಸಿದ್ರು.
ನಮ್ಮ ಕಾರ್ಯಕರ್ತರು ಬಹಳಷ್ಟು ಉತ್ಸಾಹದಲ್ಲಿದ್ದಾರೆ. ಸಂಪೂರ್ಣ ಬಹುಮತದೊಂದಿಗೆ ನಾವು ಗೆಲ್ಲುತ್ತೇವೆ ಎಂಬ ಸಂಪೂರ್ಣ ಆತ್ಮವಿಶ್ವಾಸ ನನಗಿದೆ. ಕಾಂಗ್ರೆಸ್ನವರಿಗೇ ಗ್ಯಾರಂಟಿ ಇಲ್ಲ. ಅಂತದ್ರಲ್ಲಿ ರಾಜ್ಯದ ಜನತೆಗೆ ಗ್ಯಾರಂಟಿ ಕಾರ್ಡ್ ಕೊಡ್ತಿದ್ದಾರೆ. ಆ ಕಾರ್ಡ್ ತೆಗೆದಯಕೊಂಡು ಮತದಾರರು ಉಪ್ಪಿನಕಾಯಿ ಹಾಕಿ ತಿನ್ನಬೇಕಾ..? ಕಾಂಗ್ರೆಸ್ನವರು ಅಧಿಕಾರಕ್ಕೆ ಬರೋದಿಲ್ಲ. ಇದ್ಯಾವುದು ಅನುಷ್ಠಾನ ಕೂಡ ಆಗೋದಿಲ್ಲ. ಕಾಂಗ್ರೆಸ್ನವರು ಕೇವಲ ಜನರನ್ನು ಮರಳು ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ.
ಕಾಂಗ್ರೆಸ್ನವರು ಜನರನ್ನು ಮರಳು ಮಾಡೋಕೆ ಹೊಸ ಮಾರ್ಗ ಹುಡುಕಿದ್ದಾರೆ. ಆದರೆ ರಾಜ್ಯದ ಜನರನ್ನು ಎಲ್ಲಾ ಸಂದರ್ಭದಲ್ಲಿ ಮೋಸ ಮಾಡೋಕೆ ಸಾಧ್ಯವಿಲ್ಲ. ಈ ಬಾರಿ ರಾಜ್ಯದ ಜನತೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.