ಬಿಜೆಪಿ ನಾಯಕರಿಗೆ ಅದ್ಯಾವ ಸಮಸ್ಯೆ ತಲೆದೂರಿದ್ಯೋ ಗೊತ್ತಿಲ್ಲ, ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ಕೊಲೆಗಡುಕ, ನಾಥೂರಾಮ್ ಗೋಡ್ಸೆಯನ್ನ ಕೊಂಡಾಡುವಂತ ಪ್ರವೃತ್ತಿಯನ್ನ ಇತ್ತೀಚೆಗೆ ಹೆಚ್ಚು ಮಾಡಿಕೊಂಡು ಬಂದಿದ್ದಾರೆ, ಅದರಲ್ಲೂ ಕೆಲ ಬಿಜೆಪಿ ನಾಯಕರು ಸಂಘ ಪರಿವಾರದ ಕೆಲ ಸಭೆಗಳಲ್ಲಿ ನಿರಂತರವಾಗಿ ನಾಥೋರಾಮ್ ಗೋಡ್ಸೆಯನ್ನ ಹೊಗಳುತ್ತಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿರುತ್ತವೆ.

ಇನ್ನು, ಇದೇ ವಿಚಾರಕ್ಕೆ ನಾಥೂರಾಮ್ ಗೋಡ್ಸೆಯನ್ನು ಕೊಂಡಾಡುವ ಬಿಜೆಪಿ ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲೊಂದನ್ನು ಎಸೆದಿದೆ. ಇದೀಗ ಈ ಸವಾಲನ್ನ ಮೋದಿ ಸ್ವೀಕರಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.
आज हम प्रधानमंत्री @narendramodi को एक चुनौती देते हैं। इन दो में से एक काम आपको करना होगा 👇
— Congress (@INCIndia) June 10, 2023
• अपनी पार्टी से गोडसे भक्तों को निकाल बाहर फेंकिए
• या गांधी जी के आगे नतमस्तक होकर ढोंग करना बंद कीजिए
गांधी जी के इस देश में गोडसे के उपासकों की कोई जगह नहीं है, मोदी जी फैसला… pic.twitter.com/LoMyI1xuqn
ಹೌದು.. ಗೋಡ್ಸೆ ‘ಭಕ್ತರನ್ನು’ ಬಿಜೆಪಿಯಿಂದ ಹೊರದಬ್ಬಿ ಅಥವಾ ಗಾಂಧಿ ಪ್ರತಿಮೆಗಳಿಗೆ ಶಿರಬಾಗಿ ನಮಿಸುವ ಬೂಟಾಟಿಕೆಯನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಕೆಂಡಕಾರಿದೆ. ಆದ್ರೆ ಇದಕ್ಕೆ ಕೇಂದ್ರದ ನಾಯಕರು ಯಾವುದೇ ರೀತಿಯಾದ ಸ್ಪಷ್ಟ ಉತ್ತರವನ್ನ ಮತ್ತು ಸ್ಪಷ್ಟನೆಯನ್ನ ನೀಡಲ್ಲ ಎನ್ನಲಾಗುತ್ತಿದೆ.
ಅಷ್ಟಕ್ಕೂ ಈ ಕಾಂಗ್ರೆಸ್ ಕೇಂದ್ರದ ವಿರುದ್ಧ ತೀವ್ರ ಸ್ವರೂಪದ ಆಕ್ರೋಶ ವ್ಯಕ್ತ ಪಡಿಸೋದಕ್ಕೆ ವಿವಿಧ ಕಾರಣಗಳು ಕೂಡ ಇವೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗೋಡ್ಸೆಯನ್ನು ಭಾರತದ ‘ಸಪೂತ್’ (ಸುಪುತ್ರ) ಎಂದು ಕರೆದಿದ್ದರು, ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಧಾನಿಯನ್ನು ಟೀಕಿಸಿದೆ. ಮತ್ತೊಬ್ಬ ಬಿಜೆಪಿ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕೆಲವು ದಿನಗಳ ಹಿಂದೆ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಬಣ್ಣಿಸಿದರು ಇದಕ್ಕೂ ಕೂಡ ಅಂದು ಕಾಂಗ್ರೆಸ್ ನಾಯಕರು ವ್ಯಾಪಕವಾದ ಆಕ್ರೋಶವನ್ನ ಹೊರಹಾಕಿದ್ದರು.
ಇನ್ನು ಇಲ್ಲಿ ಕಾಂಗ್ರೆಸ್ ಕೆಲವೊಂದು ಆರೋಪಗಳನ್ನ ಸಾಕ್ಷಿ ಸಮೇತ ಮಾಡುತ್ತಿದೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯ ಹಿರಿಯ ನಾಯಕರು ಗೋಡ್ಸೆಯನ್ನು ವೈಭವೀಕರಿಸುತ್ತಿದ್ದರೂ ಪ್ರಧಾನಿ ಏನೂ ಮಾತನಾಡುತ್ತಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ ಈ ಆರೋಪ ಒಂದು ಹಂತದಲ್ಲಿ ನಿಜ ಕೂಡ ಹೌದು, ಯಾಕೆಂದರೆ ಇದುರವರೆಗೂ ಕೂಡ, ಗೋಡ್ಸೆಯನ್ನ ಹೊಗಳಿ ಮಾತನಾಡಿದ ಯಾವ ಬಿಜೆಪಿಯ ಹಿರಿಯ ನಾಯಕರಿಗೆ ಕೂಡ ಮೋದಿ ಸರ್ಕಾರ ಸೂಕ್ತ ರೀತಿಯಾದ ಕ್ರಮವನ್ನ ತೆಗೆದುಕೊಂಡಿಲ್ಲ. ಇದಕ್ಕೆ ಕಾಂಗ್ರೆಸ್ ವ್ಯಾಪಕವಾದ ಆಕ್ರೋಶವನ್ನ ವ್ಯಕ್ತ ಪಡಿಸಿದ.
ಇನ್ನು ಇದಕ್ಕೆ ಮುಂದುವರೆದು ಟ್ವಿಟ್ ಮಾಡಿರುವ ಕಾಂಗ್ರೆಸ್ ‘ಇಂದು ನಾವು ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸುಯುತ್ತೇವೆ, ಇವುಗಳಲ್ಲಿ ಯಾವುದಾದರೂ ಒಂದನ್ನು ನೀವು ಮಾಡಲೇಬೇಕು. ನಿಮ್ಮ ಪಕ್ಷದಿಂದ ಗೋಡ್ಸೆ ಭಕ್ತರನ್ನು ಹೊರಹಾಕಿ ಅಥವಾ ಗಾಂಧೀಜಿಯ ಮುಂದೆ ತಲೆಬಾಗಿ ನಮಿಸುವ ಬೂಟಾಟಿಕೆಯನ್ನು ನಿಲ್ಲಿಸಿ. ಗಾಂಧೀಜಿಯ ಈ ದೇಶದಲ್ಲಿ ಗೋಡ್ಸೆಯ ಆರಾಧಕರಿಗೆ ಸ್ಥಾನವಿರಬಾರದು. ಮೋದಿ ಅವರೇ, ನೀವೇ ನಿರ್ಧರಿಸಬೇಕು’ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿ ಆಕ್ರೋಶವನ್ನ ಹೊರ ಹಾಕಿದೆ.
ಇತ್ತೀಚೆಗೆ ಜಪಾನ್ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಮಹಾತ್ಮ ಗಾಂಧಿಯವರ ಪ್ರತಿಮೆ ಅನವಾರಣಗೊಳಿಸಿ, ಶಿರಬಾಗಿ ನಮಿಸುತ್ತಿರುವ ಚಿತ್ರವನ್ನೂ ಕಾಂಗ್ರೆಸ್ ತನ್ನ ಟ್ವೀಟ್ನೊಂದಿಗೆ ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನ ಹೊರಹಾಕಿರೋದು ಕೂಡ ಇದೀಗ ಬಿಜೆಪಿ ನಾಯಕರ ಮುಖಭಂಗಕ್ಕೆ ಕೂಡ ಕಾರಣವಾಗಿದೆ.