• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೈಕ್ರೋ ಫೈನಾನ್ಸ್‌ಗೆ ನಿನ್ನೆ ಬಲಿಯಾದವರು ಎಷ್ಟು..?

ಕೃಷ್ಣ ಮಣಿ by ಕೃಷ್ಣ ಮಣಿ
February 4, 2025
in Top Story, ಕರ್ನಾಟಕ, ರಾಜಕೀಯ, ಶೋಧ
0
ಮೈಕ್ರೋ ಫೈನಾನ್ಸ್‌ಗೆ ನಿನ್ನೆ ಬಲಿಯಾದವರು ಎಷ್ಟು..?
Share on WhatsAppShare on FacebookShare on Telegram

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳ ಜಾಸ್ತಿ ಆಗಿದ್ದು, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಯ ಭರವಸೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ ಬಿಲ್‌ ರೆಡಿ ಮಾಡಿ ರಾಜ್ಯಪಾಲರ ಸಹಿಗಾಗಿ ಕಳುಹಿಸಿಕೊಟ್ಟಿದೆ. ಸುಗ್ರೀವಾಜ್ಞೆ ಮೂಲಕ ರಾಜ್ಯಪಾಲರ ಅಂಗಳ ತಲುಪಿದ್ದು, ಕರಡು ಪ್ರತಿ ಪರಿಶೀಲನೆ ಬಳಿಕ ರಾಜ್ಯಪಾಲರು ಸಹಿ ಹಾಕಲಿದ್ದಾರೆರ. ಇಂದು ಮಧ್ಯಾಹ್ನ ಕರಡು ಪ್ರತಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಆ ಬಳಿಕ ರಾಜ್ಯಪಾಲರಿಗೆ ಬಿಲ್ ತಲುಪಿಸಿದ್ದಾರೆ.

ADVERTISEMENT

ಈ ನಡುವೆ ಹಾವೇರಿಯಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ನೇಣು ಬಿಗಿದುಕೊಂಡು ರಾಣೇಬೆನ್ನೂರಿನ ಮಾಲತೇಶ ನಾಗಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೇರ್​ ಕಟ್ಟಿಂಗ್​ ಶಾಪ್​ ನಡೆಸ್ತಿದ್ದ ಮಾಲತೇಶ್​ 4 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು. ಇವತ್ತು ಸಾಲದ ಕಂತು ಕಟ್ಟಲು ಹಣ ತರಲು ಪತ್ನಿ ಗೀತಾ, ತಾಯಿ ಮನೆಗೆ ತೆರಳಿದ್ರು. ಈ ವೇಳೆ ಮನೆಯಲ್ಲಿ ಮಾಲತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರದಲ್ಲೂ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ಸೂಸೈಡ್ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಹೆಚ್​.ನಾಗಸಂದ್ರದಲ್ಲಿ ಘಟನೆ ನಡೆದಿದೆ. ಆಟೋ ಚಾಲಕ ನರಸಿಂಹಯ್ಯ ಮೃತ ದುರ್ದೈವಿ.. ಇಂದು ಸಾಲದ ಕಂತು ಕಟ್ಟಬೇಕಿತ್ತು. ಹಣ ತರ್ತೀನಿ ಅಂತ ಬೆಳಗ್ಗೆ 6 ಗಂಟೆಗೆ ಮನೆಯಿಂದ ನರಸಿಂಹಯ್ಯ ಹೋಗಿದ್ರು. ಆದ್ರೆ ಮನೆಯಿಂದ ಹೊರಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ, ಮೈಕ್ರೋ ಫೈನಾನ್ಸ್​ನಲ್ಲಿ ಸಾಲ ಮಾಡಿದ್ದ ಗಿರೀಶ್ ಎಂಬುವವರು ಸಾಲ ಮರುಪಾವತಿ ಮಾಡಲಾಗದೇ ಸಾವನ್ನಪ್ಪಿದ್ದಾರೆ. ಮೃತರನ್ನ ಚಿಕ್ಕಬಳ್ಳಾಪುರದ ಬೀಚಗಾನಹಳ್ಳಿ ಗ್ರಾಮದ ಗಿರೀಶ್​ ಎಂದು ಗುರುತಿಸಲಾಗಿದೆ. ಅನೇಕ ಫೈನಾನ್ಸ್​ ಕಂಪನಿಗಳಲ್ಲಿ ಸಾಲ ಮಾಡಿಕೊಂಡಿದ್ದ ಗಿರೀಶ್ ಸಾಲ ಮರುಪಾವತಿ ಮಾಡಲಾಗದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ದಾವಣಗೆರೆ ದೀಟೂರಿನಲ್ಲಿ ಸಾಲಬಾಧೆಯಿಂದ ನೊಂದು ರೈತ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕ್ ನೋಟಿಸ್ ನೀಡಿದ್ದಕ್ಕೆ ನೊಂದು ರೈತ ಸುರೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಂಕೊಂದರಲ್ಲಿ ಸುರೇಶ್ 32 ಲಕ್ಷ ಸಾಲ ಮಾಡಿಕೊಂಡಿದ್ರು. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ 2 ಬಾರಿ ನೋಟಿಸ್ ನೀಡಿದೆ. ಇತ್ತ ಬೆಳೆಯೂ ಕೈಕೊಟ್ಟ ಕಾರಣ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನನೊಂದ ರೈತ ಸುರೇಶ್​ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಕ್ರೋ ಫೈನಾನ್ಸ್ ಕಾಟ ತಾಳದೆ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಸನ ಜಿಲ್ಲೆಯ ಕಂಟೇನಹಳ್ಳಿಯಲ್ಲಿ ಘಟನೆ ನಡೆದಿದೆ. ರವಿ ಕೆ.ಡಿ. ಎನ್ನುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್​​ಗಳಿಂದ ರವಿ ಸುಮಾರು 9 ಲಕ್ಷ ಸಾಲ ಮಾಡಿಕೊಂಡಿದ್ರು. ಸಾಲ ಕಟ್ಟಲು ಒತ್ತಡ ಹೆಚ್ಚಾದ ಕಾರಣ ರವಿ ಸೂಸೈಡ್ ಮಾಡಿಕೊಂಡಿದ್ದಾರೆ. ಇನ್ನು ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಎ.ಮಂಜು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್​ಗಳ ಟಾರ್ಚರ್ ಮಿತಿ ಮೀರಿದೆ. ಸೇಡಂ ತಾಲ್ಲೂಕಿನಲ್ಲಿ ಮೈಕ್ರೋ ಕಿರುಕುಳ ಹೆಚ್ಚಾಗಿದ್ದು, ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಬೆಳಗ್ಗೆ 7 ಗಂಟೆಗೆ ಮನೆಗೆ ಬಂದ್ರೆ, ರಾತ್ರಿ 11 ಗಂಟೆಯವರೆಗೆ ಮನೆ ಬಳಿ ನಿಲ್ತಾರೆ. ದುಡ್ಡು ಇಲ್ಲ ಅಂದ್ರೂ ಕೇಳದೆ‌ ಮನೆ ಬಳಿ ಬಂದು‌ ಟಾರ್ಚರ್ ಕೊಡ್ತಾರೆ.. ಸಿಎಂ ಸಿದ್ದರಾಮಯ್ಯ ಸುಗ್ರೀವಾಜ್ಞೆ ತಂದ್ರೂ ಕ್ಯಾರೆ ಅಂತಿಲ್ಲ. ಅಂತ ಮಹಿಳೆಯರು ಬೇಸರ ವ್ಯಕ್ತಪಡಿಸ್ತಿದ್ದಾರೆ.

Tags: alliance for financial inclusionAssam Governmentbureau of internal revenuecenter for global developmentcongressentitlement reformexcessive forcefinanceGovernmentinternational developmentjustice for floydmicro-finance institutionsmicrofinancemicrofinance loanpersonal financeState Governmentunited states congressunited states congress (governmental body)yahoo financeyahoo finance premium
Previous Post

ಕನ್‌ಕಷನ್ ಸಬ್‌ಸ್ಟಿಟ್ಯೂಟ್ ವಿವಾದ: Gautam Gambhir ಮತ್ತು Suryakumar Yadav ಮೇಲೆ Sunil Gavaskar ತೀವ್ರ ಟೀಕೆ

Next Post

ರಾಷ್ಟ್ರಕವಿ G.S ಶಿವರುದ್ರಪ್ಪ ಮೊಮ್ಮಗಳ ‘ಅನನ್ಯ’ ಸಾಧನೆ

Related Posts

ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ
Top Story

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

by ಪ್ರತಿಧ್ವನಿ
April 30, 2026
0

ಬೆಂಗಳೂರು, ಏ. 29: ನಗರದಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಏಳು ಮಂದಿ...

Read moreDetails
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
Next Post
ರಾಷ್ಟ್ರಕವಿ G.S ಶಿವರುದ್ರಪ್ಪ ಮೊಮ್ಮಗಳ ‘ಅನನ್ಯ’ ಸಾಧನೆ

ರಾಷ್ಟ್ರಕವಿ G.S ಶಿವರುದ್ರಪ್ಪ ಮೊಮ್ಮಗಳ ‘ಅನನ್ಯ’ ಸಾಧನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada