• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಸ್ಟೀಸ್​ ಹೇಮಾ ಕಮಿಟಿ ಎದುರು ದೂರು.. ಬೆಂಗಳೂರಿಗೆ ಕೇಸ್​ ಶಿಫ್ಟ್​..

ಕೃಷ್ಣ ಮಣಿ by ಕೃಷ್ಣ ಮಣಿ
October 28, 2024
in Top Story, ಕರ್ನಾಟಕ, ದೇಶ, ಶೋಧ, ಸಿನಿಮಾ
0
ಜಸ್ಟೀಸ್​ ಹೇಮಾ ಕಮಿಟಿ ಎದುರು ದೂರು.. ಬೆಂಗಳೂರಿಗೆ ಕೇಸ್​ ಶಿಫ್ಟ್​..
Share on WhatsAppShare on FacebookShare on Telegram

ಕೇರಳ ಚಿತ್ರರಂಗದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆಯುವ ಪದ್ದತಿ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೇರಳ ಸರ್ಕಾರ ಸಿನಿಮಾ ರಂಗದಲ್ಲಿನ ಆರೋಪದ ಬಗ್ಗೆ ಪರಿಶೀಲನೆ ಮಾಡಿ ವರದಿ ಕೊಡುವಂತೆ ಜಸ್ಟೀಸ್​​ ಹೇಮಾ ಕಮಿಟಿಯನ್ನು ನೇಮಕ ಮಾಡಿತ್ತು. ಜಸ್ಟೀಸ್​ ಹೇಮಾ ಕಮಿಟಿ ಕಳೆದ ಎರಡು ತಿಂಗಳ ಹಿಂದೆ ಕೊಟ್ಟ ವರದಿ ಸಾಕಷ್ಟು ರಾಜ್ಯಗಳಲ್ಲಿ ತಲ್ಲಣ ಮೂಡಿಸಿತ್ತು. ಕರ್ನಾಟಕದಲ್ಲೂ ಜಸ್ಟೀಸ್​ ಹೇಮಾ ಕಮಿಟಿ ರೀತಿಯಲ್ಲೇ ಸಮಿತಿ ನೇಮಕ ಮಾಡಿ ತನಿಖೆ ನಡೆಸಬೇಕು ಅನ್ನೋ ಒತ್ತಾಯ ಕೇಳಿ ಬಂದಿತ್ತು. ಸಿಎಂ ಸಿದ್ದರಾಮಯ್ಯಗೂ ಈ ಬಗ್ಗೆ ಮನವಿ ಸಲ್ಲಿಕೆ ಆಗಿತ್ತು. ಇದೀಗ ಕೇರಳ ಪ್ರಕರಣವೊಂದು ಕರ್ನಾಟಕಕ್ಕೆ ವರ್ಗಾವಣೆ ಆಗಿದೆ.

ADVERTISEMENT

ಕೇರಳದಲ್ಲಿ ಜಸ್ಟೀಸ್​ ಹೇಮಾ ಕಮಿಟಿ ಎದುರು ದಾಖಲಾಗಿದ್ದ ಕೇಸ್​ ಬೆಂಗಳೂರಿನ ಇಂಟರ್​ನ್ಯಾಷನಲ್​ ಏರ್ಪೋರ್ಟ್​ ಪೊಲೀಸ್​ ಠಾಣೆಗೆ ರವಾನೆ ಆಗಿದೆ. 2012ರಲ್ಲಿ ಯುವಕನ ಮೇಲೆ ಅತ್ಯಾಚಾರದ ಬಗ್ಗೆ ಕೇರಳದಲ್ಲಿ ಜಸ್ಟೀಸ್​ ಹೇಮಾ ಕಮಿಟಿಗೆ ದೂರು ದಾಖಲಾಗಿತ್ತು. ಆದರೆ ಬೆಂಗಳೂರಿನ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಬಳಿಯ ತಾಜ್​ ಹೋಟೆಲ್​ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಕೇಸ್​ ಬೆಂಗಳೂರು ಪೊಲೀಸ್​ ಠಾಣೆಗೆ ವರ್ಗಾವಣೆ ಆಗಿದೆ. ಕೇರಳಾದ ಕಸಬಾ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ನಡೆದ ಠಾಣಾ ವ್ಯಾಪ್ತಿಯ ಪೊಲೀಸರು ತನಿಖೆ ನಡೆಸಲಿ ಅನ್ನೋ ಕಾರಣಕ್ಕೆ ಕೇಸ್​ ವರ್ಗಾವಣೆ ಆಗಿದೆ.

ರಂಜಿತ್​ ಎಂಬಾತ ಮುಮೂಟಿ ಶೂಟಿಂಗ್​ ವೇಳೆ ಪರಿಚಯ ಆಗಿದ್ದ. ‘ಬವತ್ತಿಯುಡೆ ನಮತಿಲ್​’ ಅನ್ನೋ ಸಿನಿಮಾ ಶೂಟಿಂಗ್​ ವೇಳೆ ದೂರುದಾರನಿಗೆ ರಂಜಿತ್​ ಪರಿಚಯ ಆಗಿದ್ದ. ಆ ನಂತರ ಬೆಂಗಳೂರು ಏರ್​ಪೋರ್ಟ್​ ಬಳಿಯ ತಾಜ್​​ ಹೋಟೆಲ್​​ಗೆ ಬರುವಂತೆ ಫೋನ್​ ಮಾಡಿ ಸೂಚನೆ ಕೊಡಲಾಗಿತ್ತು. ದೂರುದಾರ ಹೋಟೆಲ್​ಗೆ ಹೋದಾಗ ದೂರುದಾರನ ಫೋಟೋ ತೆಗೆದು ಮಲಯಾಳಂನ ನಟಿ ರೇವತಿಗೂ ಕಳುಹಿಸಿ ಕೊಟ್ಟಿದ್ನಂತೆ. ಇನ್ನು ರಾತ್ರಿಪೂರ್ತಿ ದೂರುದಾರನನ್ನ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜಸ್ಟೀಸ್​ ಹೇಮಾ ಕಮಿಟಿ ಮುಂದೆ ಅವಲತ್ತುಕೊಂಡ ನಂತರ ಕೇರಳಾದ ಕಸಬಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಐಪಿಸಿ ಸೆಕ್ಷನ್​ 377 ಮತ್ತು ಐಟಿ ಕಾಯ್ದೆ 66 ಅಡಿಯಲ್ಲಿ ಕೇಸ್ ದಾಖಲು ಆಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನಷ್ಟೇ ವಿಚಾರಣೆ ನಡೆಯಬೇಕಿದ್ದು, ಮೊದಲಿಗೆ ದೂರುದಾರನ ಹೇಳಿಕೆ ದಾಖಲಿಸಿ ಹೋಟೆಲ್​ ರೂಂ ಹಾಗು ಇತರೆ ಮಾಹಿತಿ ಪಡೆದ ಬಳಿಕ ತನಿಖೆ ಮುಂದುವರಿಯಬೇಕಿದೆ. ವಿಶೇಷ ಅಂದರೆ ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವರದಿ ನೀಡಲು ರಚಿಸಲಾಗಿದ್ದ ಜಸ್ಟೀಸ್​ ಹೇಮಾ ಕಮಿಟಿ ಎದುರು ಪುರುಷನೂ ದೂರು ನೀಡಿರುವುದು ವಿಶೇಷ. ಕರ್ನಾಟಕದಲ್ಲೂ ಈ ರೀತಿಯ ಆರೋಪಗಳು ಕೇಳಿ ಬಂದರೂ ರಾಜ್ಯ ಸರ್ಕಾರ ಚಿತ್ರತಂಡದ ಒತ್ತಡಕ್ಕೆ ಮಣಿದು ಸಮಿತಿ ರಚನೆಯಿಂದ ಹಿಂದೆ ಸರಿದಂತೆ ಕಾಣ್ತಿದೆ.

Tags: hema commiittee reporthema committeehema committee newshema committee renjinihema committee reportjustice hemajustice hema commissionjustice hema commission reportJustice Hema committeejustice hema committee reportjustice hema committee report malayalamjustice hema findingsjustice hema malayalamjustice hema reportjustice hema revelationsjustice k hema committee reportjustice muhamed mustaquewhat is hema committee
Previous Post

ಡಾ.ರಾಜ್, ಪಾರ್ವತಮ ಪುತ್ಥಳಿ ಸಮೀಪವೇ ಪುನೀತ್ ಕಂಚಿನ ಪುತ್ಥಳಿ ಅನಾವರಣ

Next Post

ಓಟಿಗಾಗಿ ಮುಸ್ಲಿಮರ ಓಲೈಕೆ ಮಾಡ್ತಿದ್ಯಾ ರಾಜ್ಯ ಕಾಂಗ್ರೆಸ್​ ಸರ್ಕಾರ..?

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ಓಟಿಗಾಗಿ ಮುಸ್ಲಿಮರ ಓಲೈಕೆ ಮಾಡ್ತಿದ್ಯಾ ರಾಜ್ಯ ಕಾಂಗ್ರೆಸ್​ ಸರ್ಕಾರ..?

ಓಟಿಗಾಗಿ ಮುಸ್ಲಿಮರ ಓಲೈಕೆ ಮಾಡ್ತಿದ್ಯಾ ರಾಜ್ಯ ಕಾಂಗ್ರೆಸ್​ ಸರ್ಕಾರ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada