• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೀಟ್‌ ಅಕ್ರಮದ ವಿರುದ್ಧ ಸಿಡಿದೆದ್ದ ಕಾಕ್ರೋಚ್‌ ಪಾರ್ಟಿ : ಪ್ರಧಾನ್‌ ರಾಜೀನಾಮೆಗಾಗಿ ದೇಶಾದ್ಯಂತ ಹೋರಾಟ..!

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗಾಗಿ ಸಿಜೆಪಿಯಿಂದ ದೇಶಾದ್ಯಂತ ಹೋರಾಟಕ್ಕೆ ಕರೆ : ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾದ ಯುವ ಸಮೂಹ..

ಪ್ರತಿಧ್ವನಿ by ಪ್ರತಿಧ್ವನಿ
June 10, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ನೀಟ್‌ ಅಕ್ರಮದ ವಿರುದ್ಧ ಸಿಡಿದೆದ್ದ ಕಾಕ್ರೋಚ್‌ ಪಾರ್ಟಿ : ಪ್ರಧಾನ್‌ ರಾಜೀನಾಮೆಗಾಗಿ ದೇಶಾದ್ಯಂತ ಹೋರಾಟ..!
Share on WhatsAppShare on FacebookShare on Telegram

ಬೆಂಗಳೂರು : ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್‌ಇ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿರುವ ನೂತನ ಕಾಕ್ರೋಚ್‌ ಜನತಾ ಪಕ್ಷ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಡುತ್ತಿದೆ. ಈಗಾಗಲೇ ಐತಿಹಾಸಿಕವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಹೋರಾಟ ನಡೆಸಿತ್ತು.

ADVERTISEMENT
Bharathiraja : ನಿಮಗೆ ಗೊತ್ತಿರದ ಭಾರತಿ ರಾಜ್ ಕಥೆ #pratidhvani

ಅಲ್ಲದೆ ಪ್ರಮುಖವಾಗಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇದೇ ಆತಂಕದಲ್ಲಿ ದೇಶದಲ್ಲಿ ಆಕಾಂಕ್ಷಿಗಳ ಆತ್ಮಹತ್ಯೆ ಸರಣೆ ಮುಂದುವರೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಕ್ರೋಚ್‌ ಜನತಾ ಪಕ್ಷ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಈ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಲಿದೆ.

ಹೋರಾಟದ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಸಿಜೆಪಿಯು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಪ್ರಧಾನ್‌ ರಾಜೀನಾಮೆ ನೀಡುವವರೆಗೂ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿದೆ. ಜೂನ್‌ 11 ರಂದು ಮಹಾರಾಷ್ಟ್ರದ ಪುಣೆಯಿಂದ ಆರಂಭವಾಗುವ ಹೋರಾಟವು ಜೂನ್‌ 20 ರಂದು ದೆಹಲಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ನಡೆಯಲಿದೆ. ಶಾಂತಿಯುತವಾಗಿ ನಡೆಯುವ ಈ ಪ್ರತಿಭಟನೆಯು ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಯ ಜೊತೆಗೆ ನೀಟ್‌ ಮರು ಪರೀಕ್ಷೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಪಶ್ನಿಸುತ್ತಿದೆ.

ಇದನ್ನೂ ಓದಿ : ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಪ್ರಮುಖವಾಗಿ ನಾಳೆಯಿಂದ ಪಂಜಾಬ್‌ನ ಅಮೃತಸರ, ಬೆಂಗಳೂರು, ಲಖ್ನೋ, ಜೈಪುರ, ಹೈದ್ರಾಬಾದ್ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಯುವಕರ ಕೇಂದ್ರದ ವಿರುದ್ಧ ಬೀದಿಗಿಳಿಯಲಿದ್ದಾರೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಒಂದು ಸಮಸ್ಯೆಯಲ್ಲ, ಇದು ದೇಶದ ಲಕ್ಷಾಂತರ ಕುಟುಂಬಗಳು ಹಾಗೂ ಯುವಸಮೂಹದ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಲದೆ ಯುವಕರ ಭವಿಷ್ಯ ಕೂಡ ಸಂಕಷ್ಟಕ್ಕೆ ಸಿಲುಕಿದೆ. ವೈದ್ಯರಾಗುವವರ ಕನಸಗಳು ಅನಿಶ್ಚಿತತೆಯಿಂದ ಕೂಡಿದ್ದು, ಇದಕ್ಕೆ ಕೇಂದ್ರವೆ ಹೊಣೆ ಎಂದು ಕಾಕ್ರೋಚ್‌ ಜನತಾ ಪಕ್ಷ ಕಿಡಿಕಾರಿದೆ.

Bharathiraja : ನಿಮಗೆ ಗೊತ್ತಿರದ ಭಾರತಿ ರಾಜ್ ಕಥೆ #pratidhvani

ಧರ್ಮೇಂದ್ರ ಪ್ರಧಾನ್‌ ಈ ಹಗರಣದ ಹೊಣೆ ಹೊರದಿದ್ದರೆ ಇನ್ನಷ್ಟು ಅಕ್ರಮಗಳು ಹೀಗೆ ಮುಂದುವರೆಯುವ ಆತಂಕವೂ ಇದೆ. ಮುಂಬರುವ ಪರೀಕ್ಷೆಗಳ ಬಗ್ಗೆ ವಿಶ್ವಾಸ್ವಾರ್ಹತೆ ಹೇಗೆ ಮೂಡಲು ಸಾಧ್ಯ? ಇದು ಗಂಭೀರವಾದ ವಿಚಾರವಾಗಿದೆ ಎಂದು ಸಿಜೆಪಿ ಕಳವಳ ವ್ಯಕ್ತಪಡಿಸಿದೆ.

ಈ ಇಡೀ ಹೋರಾಟ ದೇಶದ ಶಿಕ್ಷಣ ವ್ಯವಸ್ಥೆಯ ಸಮಗ್ರತೆ ಹಾಗೂ ನಂಬಿಕೆಯ ಮೇಲೆ ಹಲವು ಗುರುತರ ಪ್ರಶ್ನೆಗಳಿಗೆ ಉತ್ತರವಾಗಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳಿಗೆ ವಿದ್ಯಾರ್ಥಿಗಳೇಕೆ ಬೆಲೆ ತೆರಬೇಕು, ಜವಾಬ್ದಾರಿ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದವರು ರಾಜೀನಾಮೆ ನೀಡುವುದು ಸೂಕ್ತ ಎಂದು ಸಿಜೆಪಿ ಒತ್ತಾಯಿಸಿದೆ. ಶಿಕ್ಷಕರು, ಯುವಕರು, ವಿದ್ಯಾರ್ಥಿಗಳು ಈ ಹೋರಾಟದಲ್ಲಿ ಭಾಗವಹಿಸುವಂತೆ ಪಕ್ಷ ಕರೆ ನೀಡಿದೆದ.

ಇನ್ನೂ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದಿದ್ದರೆ ಜೂನ್‌ 20 ರಿಂದ ಹೋರಾಟ ಚಳುವಳಿಯಾಗಿ ಪರಿಣಮಿಸಲಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಎಚ್ಚರಿಸಿದ್ದಾರೆ.

Tags: Abhijeet DipkeCBSE ScamCJPDemand for resignation..!Education SystemGovernment of IndiaJantar Mantar ProtestNarendra Modinational newsNeet Exam ScamSack Dharmendra PradhanUnion Education Minister Dharmendra PradhanYouths Movement
Previous Post

ಶಿಕ್ಷಕರಿಗೆ ಗುಡ್‌ ನ್ಯೂಸ್!‌ : 100 ದಿನಗಳ ಒಳಗೆ 15 ಸಾವಿರ ಶಿಕ್ಷಕರ ನೇಮಕಾತಿ!

Next Post

ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?

Related Posts

ಬರದ ಬಿಗಿ ಎಚ್ಚರಿಕೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ
Top Story

ಬರದ ಬಿಗಿ ಎಚ್ಚರಿಕೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

by ಪ್ರತಿಧ್ವನಿ
July 19, 2026
0

ಬೆಂಗಳೂರು, ಜುಲೈ 19: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಮತ್ತು ಬರದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ....

Read moreDetails
ಸ್ಪೇನ್–ಅರ್ಜೆಂಟೀನಾ ಫೈನಲ್‌ಗೂ ಮುನ್ನ ಬಹಿರಂಗವಾದ ಬಹುಮಾನ ಮೊತ್ತ! ವಿಜೇತರಿಗೆ ಎಷ್ಟು ಕೋಟಿ ಬಹುಮಾನ

ಸ್ಪೇನ್–ಅರ್ಜೆಂಟೀನಾ ಫೈನಲ್‌ಗೂ ಮುನ್ನ ಬಹಿರಂಗವಾದ ಬಹುಮಾನ ಮೊತ್ತ! ವಿಜೇತರಿಗೆ ಎಷ್ಟು ಕೋಟಿ ಬಹುಮಾನ

July 19, 2026
ದೇವೇಗೌಡರನ್ನು ಮೂರು ಬಾರಿ ಸಾವಿನಿಂದ ಕಾಪಾಡಿದವರು ಚೆನ್ನಮ್ಮ’ – ಬ್ರಹ್ಮಾಂಡ ಗುರೂಜಿ

ದೇವೇಗೌಡರನ್ನು ಮೂರು ಬಾರಿ ಸಾವಿನಿಂದ ಕಾಪಾಡಿದವರು ಚೆನ್ನಮ್ಮ’ – ಬ್ರಹ್ಮಾಂಡ ಗುರೂಜಿ

July 19, 2026
ರಾಜ್ಯದ ಆಸ್ಪತ್ರೆ, ಶಾಲೆ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್? ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

ರಾಜ್ಯದ ಆಸ್ಪತ್ರೆ, ಶಾಲೆ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್? ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 19, 2026
ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ; ಪೆರೋಲ್ ಅರ್ಜಿಯ ಮೇಲೆ ಇಂದು ನಿರ್ಧಾರ ಸಾಧ್ಯ 

ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ; ಪೆರೋಲ್ ಅರ್ಜಿಯ ಮೇಲೆ ಇಂದು ನಿರ್ಧಾರ ಸಾಧ್ಯ 

July 19, 2026
Next Post
ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?

ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada