• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ತಂದ ಸಿಎಂ ದೆಹಲಿ ಭೇಟಿ

Shivakumar by Shivakumar
July 16, 2021
in ಕರ್ನಾಟಕ, ದೇಶ, ರಾಜಕೀಯ
0
ಮೇಕೆದಾಟು: ರಾಜಕೀಯ ಕುತಂತ್ರಕ್ಕೆ ಬಲಿಯಾಗುತ್ತಿರುವ ಕಾನೂನು ಸಮರದಿಂದ ಬಗೆಹರಿಯಬೇಕಾದ ವಿವಾದ
Share on WhatsAppShare on FacebookShare on Telegram

ಕೆಲವು ದಿನಗಳಿಂದ ತಣ್ಣಗಾಗಿದ್ದ ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯ ಕೂಗು ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರದ್ವಯರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆಯ ಭಾರೀ ಕೋಲಾಹಲದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿರುವುದು ಮತ್ತು ಕೇಂದ್ರ ಸಂಪುಟ ವಿಸ್ತರಣೆಯ ಬಳಿಕ ವರಿಷ್ಠರೊಂದಿಗೆ ಹೊಸ ಸಚಿವರನ್ನೂ ಭೇಟಿ ಮಾಡುತ್ತಿರುವುದು ಸಹಜವಾಗೇ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯವಾಗಿ ನಾಯಕತ್ವ ಬದಲಾವಣೆಯ ಕೂಗಿನ ಮುಂಚೂಣಿಯಲ್ಲಿದ್ದ ನಾಯಕರು ಕೆಲವು ದಿನಗಳಿಂದ ಬಹುತೇಕ ಮೌನಕ್ಕೆ ಶರಣಾಗಿರುವುದು ಮತ್ತು ರಾಜ್ಯ ಸಂಪುಟ ಪುನರ್ ರಚನೆಯ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೂಡ ಸಿಎಂ ದೆಹಲಿ ಭೇಟಿಗೆ ಸಾಕಷ್ಟು ಮಹತ್ವ ಬಂದಿದೆ.

ಅಧಿಕೃತವಾಗಿ ಮೇಕೆದಾಟು ಯೋಜನೆ ವಿವಾದ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು, ಕೋವಿಡ್ ಲಸಿಕೆ ಕೊರತೆ ಮುಂತಾದ ವಿಷಯಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಅಲ್ಲಿ ಪ್ರಧಾನಿ ಮೋದಿ ಮತ್ತು ಒಕ್ಕೂಟ ಸರ್ಕಾರದ ಪ್ರಮುಖರನ್ನು ಭೇಟಿ ಮಾಡಿ ಈ ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಂತೆ, ಯಡಿಯೂರಪ್ಪ ಶುಕ್ರವಾರ ಸಂಜೆಯೇ ಪ್ರಧಾನಿ ಮೋದಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜ್ಯದ ವಿವಿಧ ಯೋಜನೆಗಳ ಕುರಿತು ಪ್ರಧಾನಿಗಳೊಂದಿಗೆ ಚರ್ಚಿಸಿರುವುದಾಗಿ ಮಾತುಕತೆ ಬಳಿಕ ಮಾಧ್ಯಮಗಳಿಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಮಾರನೇ ದಿನ; ಶನಿವಾರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿಯೂ ಅವರು ಈ ವೇಳೆ ಮಾಹಿತಿ ನೀಡಿದ್ದಾರೆ. ಆ ಮೂಲಕ ತಮ್ಮ ದೆಹಲಿ ಭೇಟಿ ಕೇವಲ ಸರ್ಕಾರಿ ಅಧಿಕೃತ ಸಂಗತಿಗಳ ಕುರಿತದ್ದು ಮಾತ್ರವಲ್ಲ; ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸೇರಿದಂತೆ ಪಕ್ಷದ ಮಹತ್ವದ ವಿಷಯಗಳ ಕುರಿತ ಚರ್ಚೆಯ ಉದ್ದೇಶವನ್ನೂ ಹೊಂದಿದೆ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.

ಆದರೆ, ಅತ್ತ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರರಾದ ಸಂಸದ ಬಿ ವೈ ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರೊಂದಿಗೆ ದೆಹಲಿಯಾತ್ರೆ ಆರಂಭಿಸಿರುವ ಹೊತ್ತಿಗೇ ಇತ್ತ ರಾಜ್ಯ ಬಿಜೆಪಿಯಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೆದಿದ್ದು, ಆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.

ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಆರ್ ಅಶೋಕ್ ಅವರ ವಿಧಾನಸೌಧದ ಕಚೇರಿಯಲ್ಲಿ, ಸಿಎಂ ಪರಮಾಪ್ತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಿಎಂ ವಿರೋಧಿ ಬಣದ ಪ್ರಮುಖ ಮತ್ತು ಪರ್ಯಾಯ ನಾಯಕರ ಸಾಲಿನಲ್ಲಿ ಮೊದಲಿಗರಾಗಿ ಹೆಸರು ಕೇಳಿಬಂದಿದ್ದ ಶಾಸಕ ಅರವಿಂದ್ ಬೆಲ್ಲದ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ನಾಯಕತ್ವ ಬದಲಾವಣೆಯ ಬೇಡಿಕೆ ಇಟ್ಟುಕೊಂಡು, ಯಡಿಯೂರಪ್ಪ ವಿರುದ್ಧ ದಾಖಲೆಗಳ ಕಟ್ಟು ಹಿಡಿದುಕೊಂಡು ದೆಹಲಿ ವರಿಷ್ಠರಿಗೆ ಮೇಲಿಂದ ಮೇಲೆ ದೂರು ನೀಡುವ ಮೂಲಕವೇ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದಿಢೀರನೇ ಮುಂಚೂಣಿಗೆ ಬಂದಿರುವ ಅರವಿಂದ್ ಬೆಲ್ಲದ್ ಅವರನ್ನು ಯಡಿಯೂರಪ್ಪ ಪರಮಾಪ್ತರು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಸಹಜವಾಗೇ ಹಲವು ಲೆಕ್ಕಾಚಾರಗಳಿಗೆ, ವದಂತಿಗಳಿಗೆ ಇಂಬು ನೀಡಿದೆ..

ಈ ನಡುವೆ, ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ದಿಢೀರನೇ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ನೂತನ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರನ್ನು ಔಪಚಾರಿಕವಾಗಿ ಭೇಟಿ ಮಾಡಿ ಶುಭ ಕೋರಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಸಿಎಂ ದೆಹಲಿ ಭೇಟಿಯ ವೇಳೆಯೇ ಈ ಭೇಟಿ ಏಕಾಯಿತು ಎಂಬುದು ಚರ್ಚೆಯಾಗುತ್ತಿರುವ ಸಂಗತಿ.

ಅದರಲ್ಲೂ ಯಡಿಯೂರಪ್ಪ ಅವರ ದೆಹಲಿ ಭೇಟಿ ಅಧಿಕೃತ ಎಂದು ಹೇಳುತ್ತಿದ್ದರೂ ಅವರೊಂದಿಗೆ ರಾಜ್ಯದ ಯಾವುದೇ ಪ್ರಮುಖ ಸಚಿವರಾಗಲೀ, ಅವರ ಆಪ್ತ ಶಾಸಕರಾಗಲೀ ದೆಹಲಿಗೆ ಹೋಗಿಲ್ಲ. ಬದಲಾಗಿ, ಇಬ್ಬರು ಪುತ್ರರು ಮತ್ತು ಮೊಮ್ಮಗನೊಂದಿಗೆ ಸಿಎಂ ದೆಹಲಿಗೆ ಹೋಗಿ ಪಕ್ಷದ ವರಿಷ್ಠರು ಮತ್ತು ಒಕ್ಕೂಟ ಸರ್ಕಾರದ ಪ್ರಮುಖರನ್ನು ಭೇಟಿ ಮಾಡುತ್ತಿದ್ದಾರೆ. ಅದೇ ಹೊತ್ತಿಗೆ ರಾಜ್ಯದಲ್ಲಿ ಅವರ ಆಪ್ತರು, ನಾಯಕತ್ವ ಬದಲಾವಣೆ ಅಭಿಯಾನದ ರೂವಾರಿಗಳೊಂದಿಗೆ ರಹಸ್ಯ ಮಾತುಕತೆಗೆ ಚಾಲನೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ, ಬಿಜೆಪಿಯಲ್ಲಿ ಕೆಲ ದಿನಗಳಿಂದ ತೆರೆಮರೆಗೆ ಸರಿದಿದ್ದ ನಾಯಕತ್ವ ಬದಲಾವಣೆಯ ವಿಷಯ ಇದೀಗ ದಿಢೀರನೇ ಮತ್ತೆ ಚರ್ಚೆಗೆ ಬಂದಿದೆ.

Tags: ಅಮಿತ್ ಶಾಅರವಿಂದ್ ಬೆಲ್ಲದ್ಆರ್ ಅಶೋಕ್ಜೆ ಪಿ ನಡ್ಡಾನಳೀನ್ ಕುಮಾರ್ ಕಟೀಲ್ಪ್ರಧಾನಿ ಮೋದಿಬಸವರಾಜ ಬೊಮ್ಮಾಯಿಬಿ ಎಸ್ ಯಡಿಯೂರಪ್ಪ
Previous Post

ಮೇಕೆದಾಟು: ರಾಜಕೀಯ ಕುತಂತ್ರಕ್ಕೆ ಬಲಿಯಾಗುತ್ತಿರುವ ಕಾನೂನು ಸಮರದಿಂದ ಬಗೆಹರಿಯಬೇಕಾದ ವಿವಾದ

Next Post

ಪ್ರಜ್ಞಾ ಠಾಕೂರ್ ಗೆ “ಹಿರಿಯನಾಗರಿಕರು & ಅಂಗವಿಕಲರ” ವಿಶೇಷ ನಿಯಮದಡಿ ಮನೆಯಲ್ಲಿ ವ್ಯಾಕ್ಸಿನೇಷನ್: ಕಾಂಗ್ರೇಸ್‌ ಟೀಕೆ

Related Posts

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
Top Story

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

by ಪ್ರತಿಧ್ವನಿ
April 29, 2026
0

ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ...

Read moreDetails
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
Next Post
ಪ್ರಜ್ಞಾ ಠಾಕೂರ್ ಗೆ “ಹಿರಿಯನಾಗರಿಕರು & ಅಂಗವಿಕಲರ” ವಿಶೇಷ ನಿಯಮದಡಿ ಮನೆಯಲ್ಲಿ ವ್ಯಾಕ್ಸಿನೇಷನ್: ಕಾಂಗ್ರೇಸ್‌ ಟೀಕೆ

ಪ್ರಜ್ಞಾ ಠಾಕೂರ್ ಗೆ "ಹಿರಿಯನಾಗರಿಕರು & ಅಂಗವಿಕಲರ" ವಿಶೇಷ ನಿಯಮದಡಿ ಮನೆಯಲ್ಲಿ ವ್ಯಾಕ್ಸಿನೇಷನ್: ಕಾಂಗ್ರೇಸ್‌ ಟೀಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada