• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ”

ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ...

ಪ್ರತಿಧ್ವನಿ by ಪ್ರತಿಧ್ವನಿ
March 8, 2026
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿದೇಶ, ವಿಶೇಷ
0
“ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ”
Share on WhatsAppShare on FacebookShare on Telegram

ಬೆಂಗಳೂರು : ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ರಾಜ್ಯದ ಎಲ್ಲ ಮಹಿಳೆಯರಿಗೂ ಶುಭಾಶಯಗಳನ್ನು ತಿಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಂದೇಶ ರವಾನಿಸಿದ್ದಾರೆ. ಇಂದಿನ ಆಧುನಿಕ‌ ಕಾಲಘಟ್ಟದಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ಮಹಿಳೆಯರ ಪಾತ್ರ ಸಾಕಷ್ಟು ಬದಲಾಗಿದೆ. ಅಡುಗೆ ಮನೆಯಿಂದ ಅಂತರಿಕ್ಷದ ವರೆಗೆ ಮಹಿಳೆಯರು ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ತಮ್ಮ ಸಾಮಾಜಿಕ ಹಾಗೂ ದೈಹಿಕ ಸವಾಲುಗಳನ್ನು ಮೀರಿ ಬೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಸಿಎಂ ಸಿದ್ದರಾಮಯ್ಯ ನೀಡಿರುವ ಸಂದೇಶಲ್ಲೇನಿದೆ..?

ನನ್ನ ಎಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. ಮಹಿಳೆಯರ ಸಬಲೀಕರಣ, ಸಮಾನತೆ ಮತ್ತು ಘನತೆಯ ಬದುಕಿಗಾಗಿ ಜಾಗೃತರಾಗುವುದು, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆಗಳನ್ನು ಗುರುತಿಸಿ, ಗೌರವಿಸುವುದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಶಯ. ಇಂದಿನ ಆಧುನಿಕ‌ ಕಾಲಘಟ್ಟದಲ್ಲಿ ಕುಟುಂಬದ ಒಳಗೆ ಮತ್ತು ಹೊರಗೆ ಮಹಿಳೆಯರ ಪಾತ್ರ ಸಾಕಷ್ಟು ಬದಲಾಗಿದೆ. ಅಡುಗೆ ಮನೆಯಿಂದ ಅಂತರಿಕ್ಷದ ವರೆಗೆ ಮಹಿಳೆಯರು ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ತಮ್ಮ ಸಾಮಾಜಿಕ ಹಾಗೂ ದೈಹಿಕ ಸವಾಲುಗಳನ್ನು ಮೀರಿ ಬೆಳೆದಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಇಂದಿಗೂ ಲಿಂಗ ಅಸಮಾನತೆ, ಕೌಟುಂಬಿಕ ದೌರ್ಜನ್ಯ, ಉದ್ಯೋಗ ಸ್ಥಳದಲ್ಲಿ ದೈಹಿಕ ಮತ್ತು ಮಾನಸಿಕ ಶೋಷಣೆಗೆ ಒಳಗಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ.

Happy women group for international womens day wate illustration ai generative | Premium AI-generated image

ಭಾರತದಲ್ಲಿ ಮನುಸ್ಮೃತಿಯ ಪ್ರಭಾವ ಮತ್ತು ಆಚರಣೆ ಗಾಢವಾಗಿದ್ದ ಕಾಲದಲ್ಲಿ ಸಮಾನ ಅವಕಾಶ ಎನ್ನುವುದು ಮಹಿಳೆಯರ ಪಾಲಿಗೆ ಕನ್ನಡಿಯೊಳಗಿನ ಗಂಟಿನಂತಿತ್ತು. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರಿಂದ ಆರಂಭವಾದ ಸಾಮಾಜಿಕ ನ್ಯಾಯದ ಚಳವಳಿ ಬರೀ ವರ್ಣಾಧಾರಿತ ವ್ಯವಸ್ಥೆಯ ವಿರುದ್ಧದ ಪ್ರತಿರೋಧಕ್ಕೆ ಸೀಮಿತವಾಗದೆ ಲಿಂಗ ಸಮಾನತೆಯನ್ನು ಕೂಡ ಒಳಗೊಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಹೀಗಾಗಿಯೇ ಅಕ್ಕಮಹಾದೇವಿ ಸೇರಿ ಅನೇಕರು ಶರಣ ಚಿಂತನೆಗಳಿಂದ ಪ್ರೇರಣೆಗೊಂಡು, ಲಿಂಗದೀಕ್ಷೆ ಪಡೆದು ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆಹಾಕಿದರು.

ಹೀಗಿಯೇ ಹಲವು ಮಹಾನ್ ನಾಯಕರು ಮಹಿಳಾ ಸಮಾನತೆಯ ಹೋರಾಟವನ್ನು ಮುನ್ನಡೆಸಿಕೊಂಡು ಬಂದ ನಿದರ್ಶನಗಳು ನಮ್ಮ ಇತಿಹಾಸ ಪುಟಗಳಲ್ಲಿದೆ. ಭಾರತಕ್ಕೆ ಬ್ರಿಟಿಷರ ಆಗಮನದ ತರುವಾಯ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದಾಗಿ ಮಹಿಳೆಯರ ಸಾಮಾಜಿಕ ಸ್ಥಿತಿಗತಿಗಳು ಸುಧಾರಣೆ ಕಂಡರೂ, ಸಮಾಧಾನಕರ ಎನ್ನುವ ಸ್ಥಿತಿ ತಲಪಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅನುಷ್ಠಾನದೊಂದಿಗೆ ದೇಶದಲ್ಲಿ ಸ್ತ್ರೀ ಶೋಷಣೆಯ ಕರಾಳತೆ ಕ್ಷೀಣಿಸುತ್ತಾ ಬಂದಿದೆ. ಮಹಿಳೆಯರಿಗೆ ಲಿಂಗ ತಾರತಮ್ಯ, ದೈಹಿಕ ಹಾಗೂ ಮಾನಸಿಕ ಶೋಷಣೆಗಳಿಂದ ಸಂವಿಧಾನವು ರಕ್ಷಣೆ ನೀಡಿ, ಅವಕಾಶಗಳ ಬಾಗಿಲು ತೆರೆಯುವಂತೆ ಮಾಡಿತು.

Celebrating International Women's Day with image in DALLE&Leonardo | by Tap4.AI | Medium

ದೊರೆತ ಅವಕಾಶಗಳನ್ನು ಪೂರ್ಣ ಸದುಪಯೋಗ ಪಡಿಸಿಕೊಂಡು, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಾಧನೆ ಮಾಡುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೆ ಮುಂದಿದ್ದಾರೆ ಎನ್ನುವ ಅಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ಇತ್ತೀಚಿನ ಯುಪಿಎಸ್.ಸಿ ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ಆಯ್ಕೆಯಾಗಿದ್ದು, ಇವರಲ್ಲಿ ಮಹಿಳೆಯರು ಕೂಡ ಉತ್ತಮ ಅಂಕಗಳೊಂದಿಗೆ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಈ ಎಲ್ಲಾ ಸಾಧಕರಿಗೆ, ವಿಶೇಷವಾಗಿ ಸಾಧಕ ಹೆಣ್ಣುಮಕ್ಕಳಿಗೆ ಅಭಿನಂದನೆಗಳು. ಇವರ ಸಾಧನೆ ಯುವಜನಾಂಗಕ್ಕೆ ಸ್ಪೂರ್ತಿಯಾಗಲಿ, ಇನ್ನಷ್ಟು ಮಹಿಳೆಯರು ಐಎಎಸ್, ಐಪಿಎಸ್ ನಂತಹ ಹುದ್ದೆಗಳನ್ನು ಹೊಂದಿ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸುತ್ತೇನೆ.

ನಮ್ಮ ಸರ್ಕಾರ ಕಳೆದ ಎರಡುಮುಕ್ಕಾಲು ವರ್ಷಗಳಲ್ಲಿ ಮಹಿಳೆಯರ ಸಬಲೀಕರಣದ ಹಾದಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳು ಮಹಿಳಾ ಕೇಂದ್ರಿತ ಯೋಜನಗಳೇ ಆಗಿವೆ ಎನ್ನುವುದನ್ನು ಅತ್ಯಂತ ಹೆಮ್ಮೆಯಿಂದ ತಿಳಿಸಬಯಸುತ್ತೇನೆ. ಶಕ್ತಿ ಯೋಜನೆಯು ಮಹಿಳೆಯರನ್ನು ಶಿಕ್ಷಣ, ಉದ್ಯೋಗ, ಆರೋಗ್ಯ ಸಂಬಂಧಿ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಗಳನ್ನಾಗಿಸಿದೆ.

Who are India's first female pilots - The CSR Journal

ಸಾರಿಗೆ ಬಸ್ಸುಗಳಲ್ಲಿ ನಾವು ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಶೇ.23 ಏರಿಕೆಯಾಗಿದ್ದರೆ, ರಾಜ್ಯದ ಇತರ ಭಾಗಗಳಲ್ಲಿ ಕೂಡ ಗಣನೀಯ ಪ್ರಗತಿ ಕಂಡಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಮನೆ ಯಜಮಾನಿಯರ ಕುಟುಂಬ ನಿರ್ವಹಣೆಯ ಆರ್ಥಿಕ ಭಾರವನ್ನು ತಗ್ಗಿಸಿ, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ರಾಜ್ಯದ ಸರ್ಕಾರಿ ಹಾಗೂ ನೋಂದಾಯಿತ ಉದ್ದಿಮೆಗಳು / ಸಂಸ್ಥೆಗಳಲ್ಲಿ ಕೆಲವು ಮಾಡುವ 18 ರಿಂದ 52 ವಯೋಮಾನದ ಮಹಿಳೆಯರಿಗೆ ತಿಂಗಳಿಗೊಂದು ವೇತನ ಸಹಿತ ಕಡ್ಡಾಯ ಋತುಚಕ್ರ ರಜೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯ ಎನ್ನುವ ಹೆಮ್ಮೆ ನಮ್ಮದು.

ನಮ್ಮ 2026-27ನೇ ಸಾಲಿನ ಬಜೆಟ್ ನಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ರೂ. 94,663 ಕೋಟಿ ಅನುದಾನ ಘೋಷಣೆ ಮಾಡಿ, ಹೆಣ್ಣುಮಕ್ಕಳನ್ನು ಸಮಾನವಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವ ಪ್ರಯತ್ನ ಮಾಡಿದ್ದೇವೆ. ಜಗತ್ತಿನೆಲ್ಲೆಡೆ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವು ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದರೆ, ಕರ್ನಾಟಕದಲ್ಲಿ ಈ ದಿನವನ್ನು ಸಾರ್ಥಕವಾಗಿಸಿದ್ದೇವೆ.

Trending 1000 of the best Mother Images | AI Mother Generator

ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಪುರುಷರ ಬದುಕಿಗೆ ಪರಿಪೂರ್ಣತೆಯನ್ನು ಕೊಡುವ ಪ್ರಕೃತಿಯ ವಿಶಿಷ್ಟ, ಅನನ್ಯ ಸೃಷ್ಟಿ. ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ ಬದುಕಿನ ಬಂಡಿಯ ನೊಗಹೊತ್ತು, ಪುರುಷರಿಗೆ ಸಮನಾಗಿ ದುಡಿಯುತ್ತಿರುವ ಮಹಿಳೆಯರ ತ್ಯಾಗ, ಸೇವೆ, ಸಮರ್ಪಣೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇಂದು ಸ್ಮರಿಸಿ, ಗೌರವಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಮತ್ತೊಮ್ಮೆ ನಾಡಿನ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳೆಂದು ಸಿದ್ದರಾಮಯ್ಯ ಮಹಿಳೆಯರ ಸಾಧನೆ ಹಾಗೂ ಶ್ರಮವನ್ನು ಕೊಂಡಿದ್ದಾರೆ.

Tags: CM SiddaramaiahdaughterGovernment of KarnatakaGruha JyotiGruhalxmiGuarantee Schemsinternational womens daykarnataka newsmotherPratidhvanishakti schemewifeWomens AchievementWomens Life
Previous Post

ಹೃದಯಹೀನ ವ್ಯವಸ್ಥೆಯೂ ಅಸೂಕ್ಷ್ಮ ಸಮಾಜಗಳೂ

Next Post

ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
Next Post
ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?

ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada