ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಮದ್ಯದ ಬಾಟಲ್, ಗ್ಲಾಸ್ ತುಂಬಿದ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರು ಹಾಗೂ ಮಾಜಿ ಹಿರಿಯ ಪತ್ರಕರ್ತರಾದ ಅಶೋಕ್ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಥ ಹಲವಾರು ಗುಂಡು ಪಾರ್ಟಿಗಳು ಬೆಂಗಳೂರಿನಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತವೆ. ಮಾಧ್ಯಮದವರು, ಮಂತ್ರಿಗಳು, ಶಾಸಕರು ಸಹ ಇದಕ್ಕೆ ಹೊರತಲ್ಲ. ಆದರೆ ಮುಖ್ಯಮಂತ್ರಿಗಳು ಮತ್ತು ಖ್ಯಾತ ಪತ್ರಕರ್ತರು ಕೂಡಿಕೊಂಡು, ತಮ್ಮೆದುರು ಮದ್ಯದ ಬಾಟಲಿ, ಗ್ಲಾಸುಗಳನ್ನು ಇಟ್ಟುಕೊಂಡ ಫೋಟೋ ಕಾಣಿಸಿಕೊಂಡಿರುವದು ಅವರುಗಳ ಸ್ಥಾನ ಹಾಗೂ ಮಾನಕ್ಕೆ ತಕ್ಕುದಲ್ಲ. ರಾಜಕೀಯ ಜಟಾಪಟಿಯ ಮಧ್ಯೆ ನಡೆದಿರುಬಹುದಾದ ಇಂಥ ಪಾರ್ಟಿಯ ಫೋಟೋವನ್ನು ಉದ್ದೇಶಪೂರ್ವಕವಾಗಿ, ಮುಖ್ಯಮಂತ್ರಿಗಳ ಹೆಸರನ್ನು ಕೆಡಿಸುವ ದ್ರಷ್ಟಿಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗಿದೆಯೇ /ಎಂಬ ಸಂದೇಹ ಮಾಧ್ಯಮ ಲೋಕದಲ್ಲಿ ಉಂಟಾಗಿದೆ ಎಂದು ಎಂದಿದ್ದಾರೆ.
ಮುಖ್ಯಮಂತ್ರಿಗಳು ಮದ್ಯ, ಬೀರಿನ ವಾಸನೆ ಮತ್ತು ರುಚಿಯ ಬಗ್ಗೆ ವಿಧಾನ ಸಭೆಯಲ್ಲಿಯೇ ಅನೇಕ ಬಾರಿ ಹೇಳಿದ ಪ್ರಸಂಗಗಳಿವೆ. ಆದರೆ ಸಂಪಾದಕರು, ಪತ್ರಕರ್ತರು ಮುಖ್ಯಮಂತ್ರಿಗಳ ಸೌಜನ್ಯದ ಆಹ್ವಾನವನ್ನು ಈ ರೀತಿ ದುರುಪಯೋಗ ಮಾಡಿದ್ದು ಎಳ್ಳಷ್ಟೂ ಸರಿಯಲ್ಲ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ
ಮುಖ್ಯಮಂತ್ರಿಗಳ ಸುತ್ತ ಸುತ್ತುವ ಮಾಧ್ಯಮ ನಿರ್ವಾಹಕರು ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಇನ್ನು ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯರಾಧನೆ ಇಲ್ಲದ ಪಾರ್ಟಿ ಏರ್ಪಡಿಸುವದು ಒಳ್ಳೆಯದು. ಇಲ್ಲವಾದರೆ ಖಾಸಗಿ ಪಾರ್ಟಿಗಳಲ್ಲಿ ನಡೆಯುವ ಯಾವದಾವದೋ ” ಚಟುವಟಿಕೆಗಳು “ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬಹುದು!! ಈ ಫೋಟೋ ಕಾಣಿಸಿಕೊಂಡ ನಂತರ ನಮ್ಮ ಸಿ ಎಮ್ ಸಾಹೇಬರು ಪತ್ರಕರ್ತರನ್ನು ಯಾಕಾದರೂ ಆಹ್ವಾನಿಸಿದೆನೋ ಎಂದು ತಮ್ನ ಆಪ್ತರ ಎದುರು ಹೇಳಿದರಂತೆ! ಎಂದು ಚಂದರಗಿ ಪತ್ರಕರ್ತರ ವಿಶ್ವಾಸಾಹರ್ತೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಂದರಗಿ ಬೇಸರ ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿಯಾಗಿ ಸ್ನೇಹ ಭೋಜನ ಕೂಟ ಆಯೋಜಿಸಿದ್ದರು. ಅದರಲ್ಲಿ ಖ್ಯಾತ ಪತ್ರಕರ್ತರೆನಿಸಿಕೊಂಡವರು ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಈ ಫೋಟೋ ತೆಗೆದು ಹರಿಬಿಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.






