ಅರಣ್ಯಪ್ರದೇಶದಲ್ಲಿ ಭಾರತೀಯ ಮೂಲದ ಮುಂಗರವಳ್ಳಿ ಜಾತಿಗೆ ಸೇರಿದ ಅಪರೂಪದ ಅರೋಹಿ( ಕ್ಲೈಂಬರ್) ಸಸ್ಯವನ್ನು ಪರಿಸರ ಪ್ರೇಮಿ ಮತ್ತು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಸುನಿಲ್ ಕುಮಾರ್ ಮರಳಕುಂಟೆ ಮತ್ತು ಜೀವ ವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್ ನಾಯಕ ಇವರು ದಾಖಲಿಸಿದ್ದಾರೆ. ಇವರ ಜೊತೆಗೆ ಮಾರುತಿ, ವಿಶ್ವನಾಥ ಮತ್ತು ಸಿದ್ದರಾಜು ಕೂಡ ಇದ್ದರು.
ವಿಶ್ವದಲ್ಲಿ ವಿಟೇಸಿ ಕುಟುಂಬಕ್ಕೆ ಸೇರಿದ 800 ಜಾತಿಯ ಮುಂಗರವಳ್ಳಿ ಸಸ್ಯಗಳನ್ನು ಗುರುತಿಲಾಗಿದ್ದು ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 63 ಜಾತಿಯ ಮುಂಗವಳ್ಳಿ ಸಸ್ಯಗಳನ್ನು ದಾಖಲಿಸಲಾಗಿದೆ. ಸಿಸ್ಸಸ್ ಅರ್ನೋಟ್ಟಿಯಾನಾ ನೆಟ್ಟಗೆ ಬೆಳೆಯುವ ಪೂದೆಯಾಗಿದು, 10-11 ಇಂಚಿನಷ್ಟು ಅಗಲವಾದ ಎಲೆಗಳನ್ನೊಳಗೊಂಡ 4 ರಿಂದ 4.5 ಅಡಿಎತ್ತರ ಬೆಳೆಯಬಲ್ಲದು. ಸಾಮಾನ್ಯವಾಗಿ ಶುಷ್ಕ ಹುಲ್ಲುಗಾವಲಿನ ಅರಣ್ಯದ ಜಲಮೂಲಗಳ ಹತ್ತಿರದ ಆವಾಸಗಳಲ್ಲಿ ಇ ಸಸ್ಯಗಳು ಬೆಳೆಯುತ್ತವೆ.
ಈ ಸಸ್ಯವು ಎಪ್ರಿಲ್ ತಿಂಗಳಿನಿಂದ ಜೂಲೈ ತಿಂಗಳಲ್ಲಿ ಮರೂನ್ ಬಣ್ಣದ ಹೂ ಬಿಡುತ್ತವೆ, ಜೇನುಹುಳುಗಳು ಮತ್ತು ಇನ್ನಿತರ ನೋಣಗಳು, ಕಣಜಕೀಟಗಳು ಹೂವಿನ ಪರಾಗಸ್ಪರ್ಷ ಮಾಡುತ್ತವೆ. ಸೂರಕ್ಕಿ, ಪಿಕಳಾರ ಹಕ್ಕಿ ಮತ್ತು ಇನ್ನಿತರ ಪಕ್ಷಿಗಳು ಇದರ ಕಾಯಿಗಳನ್ನು ತಿಂದು ನೈಸರ್ಗಿಕವಾಗಿ ಬೀಜಗಳ ಪ್ರಸರಣವನ್ನು ಮಾಡಿ ಈ ಸಸ್ಯಸಂಕುಲುವು ಅರಣ್ಯದಲ್ಲಿ ನೈಸರ್ಗಿಕವಾಗಿ ವೃದ್ಧಿಸುವ ಕೆಲಸ ಮಾಡುತ್ತವೆ.
ಸಸ್ಯಶಾಸ್ತ್ರಜ್ಞರ ಪ್ರಕಾರ ಭಾರತದಲ್ಲಿ ಕರ್ನಾಟಕ, ಗುಜರಾತ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳನ್ಯಾಡು, ಮತ್ತು ಕೇರಳದ ಕಾಡುಗಳಲ್ಲಿ ಹಂಚಿಕೆಯಾಗಿದ್ದು ಕರ್ನಾಟಕದಲ್ಲಿ ಭನ್ನೇರುಟುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ದಾಖಲಿಸಲಾಗಿದ್ದು ನಂತರ ಇತ್ತಿಚೇಗೆ ಮಂಜುನಾಥ ಎಸ್ ನಾಯಕ ಮತ್ತು ಸುನಿಲ್ ಕುಮಾರ್ ಇವರು ಮರಳಕುಂಟೆ ಗ್ರಾಮದ ಅರಣ್ಯಪ್ರದೇಶದಲ್ಲಿ ಪಕ್ಷಿವಿಕ್ಷಣೆ ಮಾಡುತ್ತಿರುವಾಗ ಈ ಅಪರೂಪದ ಸಸ್ಯವನ್ನು ದಾಖಲಿಸಿದ್ದಾರೆ. ಇದೇ ರೀತಿಯ ಸಸ್ಯ ತುಮಕೂರು ಜಿಲ್ಲೆಯ, ದೇವರಾಯನದುರ್ಗದಲ್ಲಿಯೂ ಪತ್ತೆಯಾಗಿದೆ.
ವಿಟೇಸಿ ಕುಟುಂಬದ ಸಿಸ್ಸಸ್ ಪ್ರಭೇದದಲ್ಲಿ ಬರುವ ಎಲ್ಲಾ ಜಾತಿಯ ಸಸ್ಯಗಳು ತುಂಬಾ ಔಷಧೀಯ ಮೌಲ್ಯಗಳಿಂದ ಕುಡಿದ್ದು ಸಾಮಾನ್ಯವಾಗಿ ಅತಿಸಾರ, ಭೇದಿ, ಸಂಧಿವಾತ, ಮೂಲವ್ಯಾಧಿ, ಮಧುಮೇಹ ನಿಯಂತ್ರಣಕ್ಕಾಗಿ ಆಯುರ್ವೇದ ಪದ್ಧತಿಯಲ್ಲಿ ಬಳವುವರು. ಕ್ಯಾಲ್ಸಿಯಂ ಅಂಶವು ಹೇರಳವಾಗಿರುವುದರಿಂದ ಮೂಳೆಮುರಿತ ಜೊಡಣೆಯಲ್ಲು ಸಹ ಬಳಸುವರು. ವಿಶೇಷವಾಗಿ ಸಿಸ್ಸಸ್ ಅರ್ನೋಟ್ಟಿಯಾನಾ ಸಸ್ಯದಲ್ಲಿನ ರಸಾಯನಿಕಗಳು ಜೀವಾಣು ನಿರೋಧ ಮತ್ತು ಬ್ಯಾಕ್ಟೀರಿಯಾ ನಿರೋಧ ಕೆಲಸಮಾಡಬಲ್ಲ ಗುಣಗಳನ್ನು ಹೊಂದಿದ್ದು ಈ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಹಾಗೂ ಮಂಜುನಾಥ ಎಸ್. ನಾಯಕ.
ಸಸ್ಯತಳಿ ಹೆಸರು : ಸಿಸ್ಸಸ್ ಅರ್ನೋಟ್ಟಿಯಾನಾ
ಕುಟುಂಬ : ವಿಟೇಸಿ