ಕೆಲವು ಮಕ್ಕಳಿಗೆ ಬೆರಳನ್ನು ಚೀಪುವ ಅಭ್ಯಾಸ ಇರುತ್ತದೆ ಈ ಅಭ್ಯಾಸ ಮಕ್ಕಳಿಗೆ ಖುಷಿ ಕೊಡುತ್ತದೆ ತಂದೆ ತಾಯಿಗಳಿಗೆ ಹಿಂಸೆ ಅನಿಸುತ್ತದೆ. ಮಕ್ಕಳು ಬೆರಳು ಚೀಪುವಾಗ ಬಾಯಿಂದ ಬೆರಳನ್ನ ತೆಗೆದರೆ ಅಳುವುದು ಹಠ ಮಾಡುವುದು ಸಿಟ್ಟು ಮಾಡುವುದು ಸಾಮಾನ್ಯ. ಹಾಗಂತ ದೊಡ್ಡವರು ಸುಮ್ಮನಿದ್ದರೆ ಮುಂದೆ ಇದರಿಂದಾಗಿ ಸಮಸ್ಯೆಗಳು ಎದುರಾಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಹಲ್ಲು ಬರುವ ಟೈಮ್ಅಲ್ಲಿ ಹಲ್ಲು ಉಬ್ಬಾಗುತ್ತದೇ..ಬೆರಳು ಹಾಗೂ ಉಗುರಿಗೂ ಒಳ್ಳೆಯದಲ್ಲಿ..
ಹಾಗೂ ಯಾವುದೇ ಕೆಟ್ಟ ಅಭ್ಯಾಸವಿದ್ರು ಕೂಡ, ಮಕ್ಕಳಿರುವಾಗಲೇ ಆ ಅಭ್ಯಾಸವನ್ನು ಬಿಡಿಸುವುದು ಒಳ್ಳೆಯದು..ದೊಡ್ಡವರಾದ ಮೇಲೆ ಕಷ್ಟವಾಗುತ್ತದೇ..ಹಾಗಿದ್ರೆ ಮಕ್ಕಳಿಗೆ ಕೈಚೀಪುವ ಅಭ್ಯಾಸ ಬಿಡಿಸಲು ಹೀಗೆ ಮಾಡಿ.
- ಮೆಡಿಕಲ್ ನಲ್ಲಿ ಮಕ್ಕಳಿಗಂತನೇ ಕಹಿಯ ನೈಲ್ ಪಾಲಿಶ್ ಗಳು ಸಿಗುತ್ತದೆ, ಇವುಗಳನ್ನು ನಿಮ್ಮ ಮಕ್ಕಳ ಉಗುರಿಗೆ ಹಚ್ಚುವುದರಿಂದ ಬೆರಳು ಚೀಪುವ ಅಭ್ಯಾಸವನ್ನು ತಕ್ಷಣಕ್ಕೆ ಕಡಿಮೆ ಮಾಡುತ್ತಾರೆ. ಈ ನೈಲ್ ಪಾಲಿಸಿದ್ದ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
- ಇಲ್ಲವಾದಲ್ಲಿ ಮಕ್ಕಳು ಚೀಪುವ ಬೆರಳಿಗೆ ನಿಂಬೆಹಣ್ಣಿನ ರಸವನ್ನ ಹಚ್ಚಿ ಅಥವಾ ಆಪಲ್ ಸೈಡರ್ ವಿನಿಗರನ್ನು ಕೂಡ ಹಚ್ಚಬಹುದು. ಇದರ ರುಚಿಗೆ ಮಕ್ಕಳು ಬೆರಳು ಚೀಪುವ ಅಭ್ಯಾಸವನ್ನು ಬಿಡುತ್ತಾರೆ.
- ಮಕ್ಕಳು ಬೆರಳು ಚೀಪುವ ಸಂದರ್ಭದಲ್ಲಿ ಬಾಯಿಂದ ಬೆರಳನ್ನು ತೆಗೆದು, ತಕ್ಷಣಕ್ಕೆ ಯಾವುದಾದರೂ ಸಾಫ್ಟ್ ಟಾಯ್ಸ್ ಕೊಡುವುದರಿಂದ ಕಾನ್ಸಂಟ್ರೇಶನ್ ಟಾಯ್ಸ್ ಮೇಲೆ ಹೋಗುತ್ತದೆ,ಕೆಲವು ದಿನ ಹೀಗೆ ಮಾಡಿ.. ಬೆರಳು ಚೀಪುವ ಅಭ್ಯಾಸವನ್ನು ಮರೆತು ಬಿಡ್ತಾರೆ.
- ಕೆಲವು ಮಕ್ಕಳು ರಾತ್ರಿ ನಿದ್ದೆ ಕಣ್ಣಿನಲ್ಲಿ ಕೂಡ ಬೆರಳುಗಳನ್ನು ಸುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಮಕ್ಕಳ ಕೈಗೆ ಗ್ಲೌಸ್ ಕಳಿಸುವುದು ಉತ್ತಮ.
- ಬೆರಳುಗಳ ಮೇಲೆ ಬ್ಯಾಂಡ್-ಏಡ್ಸ್ ಅಥವಾ ಸ್ಟಿಕ್ಕರ್‌ಗಳು ಅಂಟಿಸಿ, ಸಾಫ್ಟ್ ಇರುವಂತಹ ಫಿಂಗರ್ ಗಾರ್ಡ್ಸ್ ನ ಬಳಸಿ.
- ಮಕ್ಕಳು ಬೆರಳು ಚಿಪುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರೇಗುವುದು ಬಯ್ಯುವುದು ಅಥವಾ ಬಾಯಿಂದ ಬೆರಳನ್ನು ತೆಗೆಯುವುದನ್ನು ತಂದೆ ತಾಯಿಗಳು ಮಾಡಿದರೆ ಮಕ್ಕಳಲ್ಲಿ ಈ ಅಭ್ಯಾಸ ಹೆಚ್ಚಾಗುತ್ತದೆ.