ಬಿಕ್ಕಳಿಕೆ ಪ್ರತಿಯೊಬ್ಬರಿಗು ಬರುತ್ತದೆ.ಬಿಕ್ಕಳಿಕೆ ಬಂದಾಗ ಒಂದು ರೀತಿಯ ಹಿಂಸೆ,ಕಲವರು ಬಿಕ್ಕಳಿಕೆ ಬಂದ ತಕ್ಷಣ ಒಂದು ಲೋಟ ನೀರನ್ನು ಕುಡಿಯುತ್ತಾರೆ.ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ..ಮುಖ್ಯಾವಾಗಿ ಬಿಕ್ಕಳಿಕೆ ಬರುವುದು,ಅತಿಯಾಗಿ ಕಾರವಿರುವ ಪದಾರ್ಥಗಳನ್ನು ಸೇವಿಸಿದಾಗ,ಮಸಾಲೆ ಹೆಚ್ಚಿದ್ದಾರೆ,ದೇಹದಲ್ಲಿ ನೀರಿನ ಕೊರತೆಯಾದಗ ಹಾಗೂ ಮುಖ್ಯವಾಗಿ ಎದೆಯ ಕೆಳಭಾಗದಲ್ಲಿ ಹಾಗೂ ಹೊಟ್ಟೆಯ ಮೇಲ್ಭಾಗದಲ್ಲಿ ಡಯಾಫ್ರಂ ಎನ್ನುವ ಒಂದು ಪದರವಿರುತ್ತದೆ. ಇದು ಯಾವುದೇ ಕ್ಷಣದಲ್ಲಿ ಸಡನ್ ಆಗಿ ಸೆಳೆತಕ್ಕೆ ಒಳಗಾದರೆ ಅದರ ಪ್ರಭಾವದಿಂದ ನಮಗೆ ಬಿಕ್ಕಳಿಕೆ ಬರುತ್ತದೆ.
ಇದು ದೊಡ್ಡವರಿಗೆ ಹೀಗೆ ಆದ್ರೆ ಮುದ್ದು ಕಂದಮ್ಮ ಗಳಿಗೂ ಬಿಕ್ಕಳಿಕೆ ಸಮಸ್ಯೆ ಎದುರಾಗುತ್ತದೆ..ಪುಟಾಣಿಗಳಲ್ಲಿ ಯಾವುದೇ ಚಿಕ್ಕ ಸಮಸ್ಯೆ ಕಾಣಿಸಿಕೊಂಡರು ದೊಡ್ಡವರಿಗೆ ಗಾಬರಿ ಹೆಚ್ಚು.. ಇಂತಹ ಸಂದರ್ಭದಲ್ಲಿ ಹೆಚ್ಚು ಗಾಬರಿ ಪಡದೆ ಹೇಗೆ ನಿವಾರಿಸಿಕೊಳ್ಳುವುದು ಎಂಬುವುದನ್ನು ನೋಡುವುದು ಬೆಸ್ಟ್, ಮಕ್ಕಳಲ್ಲಿ ಬಿಕ್ಕಳಿಗೆ ಕಾಣಿಸಿಕೊಂಡಗ ಏನು ಮಾಡಬಹುದು ಎಂಬುವುದರ ಡೀಟೇಲ್ಸ್ ಇಲ್ಲಿದೆ.
- ಹಾಲುಣಿಸಿದ ತಕ್ಷಣ ನಿಮ್ಮ ಮಗುವನ್ನು ಬರ್ಪ್ (ತೇಗಲು) ಮಾಡಲು ಪ್ರಯತ್ನಿಸಿ.ಇದರಿಂದ ಬಿಕ್ಕಳಿಗೆ ಕಡಿಮೆಯಾಗುತ್ತದೆ.
- ಮಗುವಿಗೆ ಬಿಕ್ಕಳಿಕೆ ಬಂದಾಗ ಅವರ ಬೆನ್ನು ಹಾಗೂ ಹೊಟ್ಟೆಯನ್ನ ನಿಧಾನವಾಗಿ ಸವರಬೇಕು ಇದರಿಂದ ಬಿಕ್ಕಳಿಕೆ ಬೇಗನೆ ನಿಲ್ಲುತ್ತದೆ.
- ಬಿಕ್ಕಳಿಕೆ ಶುರುವಾದಾಗ ಮಕ್ಕಳಿಗೆ ಒಂದೆರಡು ಡ್ರಾಪ್ ನೀರನ್ನು ಕುಡಿಸುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
- ಕಾಲು ಸ್ಫೂನಷ್ಟು ಸಕ್ಕರೆಯನ್ನು ತಿನಿಸುವುದರಿಂದ ಮಕ್ಕಳಲ್ಲೂ ಕೂಡ ಬಿಕ್ಕಳಿಕೆ ನಿವಾರಣೆ ಆಗುತ್ತದೆ ಈ ಹ್ಯಾಕನ್ನ ದೊಡ್ಡವರು ಕೂಡ ಮಾಡಬಹುದು ಆದರೆ ಸಕ್ಕರೆಯನ್ನು ಸ್ವಲ್ಪ ಜಾಸ್ತಿ ತಿನ್ನಬೇಕು.
- ಬಿಕ್ಕಳಿಕೆ ಬರುವ ಸಂದರ್ಭದಲ್ಲಿ ಒಂದೆರಡು ಸ್ಪೂನ್ನಷ್ಟು ಗ್ರಿಪ್ ವಾಟರ್ ಅನ್ನ ಕುಡಿಸುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಅದರಲ್ಲೂ ಹಾಲು ಕುಡಿಸಿದ ನಂತರ ಗ್ರಿಪ್ ವಾಟರ್ ಕುಡಿಸುವುದರಿಂದ ಬಿಕ್ಕಳಿಕೆ ಬರುವುದಿಲ್ಲ.