ಮಂಡ್ಯ : ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಚೆಲುವರಾಯಸ್ವಾಮಿ ಗೆಲುವು ಸೂರ್ಯ ಚಂದ್ರರಷ್ಟೇ ಸತ್ಯ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ಭದ್ರಕೋಟೆ ಮಂಡ್ಯಜಿಲ್ಲೆಯಲ್ಲಿಂದು ಸಿದ್ದರಾಮಯ್ಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ . ನಾಗಮಂಗಲದಲ್ಲಿಂದು ಮಾತನಾಡಿದ ಸಿದ್ದರಾಮಯ್ಯ ಪ್ರಚಾರ ಸಭೆಗೆ ತಡವಾಗಿ ಆಗಮಿಸಿದ್ದರ ಬಗ್ಗೆ ಕ್ಷಮೆಯಾಚಿಸಿದ್ರು.
ಸಮಾವೇಶ ತಡವಾದರೂ ಸಹ ಹೊರಗೆ ಹೊರಟ್ಟಿದ್ದ ಜನರು ಮತ್ತೆ ಒಳಗೆ ಬಂದು ಕೂತಿದ್ದಾರೆ. ಜನರ ಈ ಉತ್ಸಾಹ ನೋಡಿದಾಗ ಚೆಲುವರಾಯಸ್ವಾಮಿ ಗೆಲುವು ಸೂರ್ಯ ಚಂದ್ರರಷ್ಟೇ ಸತ್ಯ ಎನಿಸುತ್ತದೆ. ಕಳೆದ ಬಾರಿ ಕೆಲವರ ಕಣ್ಣೀರ ನಾಟಕದಿಂದ ಚೆಲುವರಾಯಸ್ವಾಮಿ ಸೋತರು. ನಂಗೆ ಇವತ್ತು ಬೇಕು ಅಂದ್ರು ಕಣ್ಣೀರು ಬರಲ್ಲ.ಕೆಲವರು ನಾಟಕೀಯವಾಗಿ ಕಣ್ಣೀರಾಕ್ತಾರೆ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ರು.
ರಾಜಕಾರಣ ನಮ್ಮಪ್ಪನ ಆಸ್ತಿಯಲ್ಲ. ಅದು ಜನರ ಆಸ್ತಿ. ಗೆಲ್ಲಿಸಿದ್ರೆ ರಾಜಕಾರಣ ಮಾಡಬೇಕು. ಇಲ್ಲವಾದಲ್ಲಿ ಸುಮ್ಮನೇ ಮನೆಯಲ್ಲಿರಬೇಕು ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.