ಮಂಡ್ಯ : ಸಮ್ಮಿಶ್ರ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ಪದೇ ಪದೇ ಹೇಳುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಆ ಆಸಾಮಿಗೆ 9 ದಿನ ಅಮೆರಿಕಕ್ಕೆ ಹೋಗುವಂತೆ ನಾನು ಹೇಳಿದ್ನಾ ಎಂದು ಪ್ರಶ್ನೆ ಮಾಡಿದ್ದಾರೆ.
ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ ಶಾಸಕರು ಉಳಿದಿದ್ದರು. ಅಮೆರಿಕಗೆ ಹೋಗಬೇಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೆ. ಆದರೆ ಕುಮಾರಸ್ವಾಮಿ ನನ್ನ ಮಾತಿಗೆ ಬೆಲೆ ನೀಡದೇ 9 ದಿನ ಅಮೆರಿಕಕ್ಕೆ ಹೋದರು. ಹೆಚ್ಡಿಕೆ ಅಮೆರಿಕ ಪ್ರವಾಸದ ಸಮಯದಲ್ಲಿ ಯಡಿಯೂರಪ್ಪ ಶಾಸಕರನ್ನು ಖರೀದಿ ಮಾಡಿದರು. ಇಂದು ಬಿಜೆಪಿ ಸರ್ಕಾರ ನಡೆಸುತ್ತಿದೆ ಎಂದರೆ ಅದಕ್ಕೆ ಹೆಚ್ಡಿಕೆ ಕಾರಣ ಎಂದು ಟಾಂಗ್ ನೀಡಿದ್ದಾರೆ.
ಈ ಆಸಾಮಿ ನನ್ನ ಮೇಲೆ ಗೂಬೆ ಕೂರಿಸಿ ಹೋಗಿಬಿಟ್ಟ. ಇವರಿಗೆ ಅಮೆರಿಕಕ್ಕೆ ಹೋಗೋಕೆ ನಾನು ಹೇಳಿದ್ನಾ ಎಂದು ಸಿದ್ದರಾಮಯ್ಯ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಪ್ರಶ್ನೆ ಮಾಡಿದ್ದಾರೆ,





