• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಿವೃತ್ತ ಐಜಿಪಿ ಓಂಪ್ರಕಾಶ್​ ಹತ್ಯೆ ಮಾಡಿದ್ಯಾಕೆ ಹೆಂಡತಿ & ಮಗಳು..?

ಕೃಷ್ಣ ಮಣಿ by ಕೃಷ್ಣ ಮಣಿ
April 21, 2025
in ಕರ್ನಾಟಕ, ಶೋಧ
0
ನಿವೃತ್ತ ಐಜಿಪಿ ಓಂಪ್ರಕಾಶ್​ ಹತ್ಯೆ ಮಾಡಿದ್ಯಾಕೆ ಹೆಂಡತಿ & ಮಗಳು..?
Share on WhatsAppShare on FacebookShare on Telegram

ADVERTISEMENT

ಬೆಂಗಳೂರಿನಲ್ಲಿ ನಿವೃತ್ತ ಐಜಿಪಿ ಓಂ ಪ್ರಕಾಶ್ ಅವರನ್ನು ಭೀಕರ ಕೊಲೆ ಮಾಡಲಾಗಿದೆ. HSR ಲೇಔಟ್ ಬಳಿ ಇರುವ ಮನೆಯಲ್ಲಿ ಪತ್ನಿಯಿಂದಲೇ ಗಂಡನ ಹತ್ಯೆ ಆಗಿದೆ. ಸುಮಾರು 20 ವರ್ಷಗಳಿಂದ ಗಂಡ ಹೆಂಡತಿ ನಡುವೆ ಮನಸ್ತಾಪ ಏರ್ಪಟ್ಟಿತ್ತು ಎನ್ನಲಾಗಿದೆ. ಹಲವಾರು ಬಾರಿ ಹೆಚ್ಎಸ್ಆರ್ ಲೇಔಟ್ ಪೊಲೀಸ್​ ಠಾಣೆಯಲ್ಲೂ ಪತ್ನಿ ಗಂಡನ ವಿರುದ್ಧ ದೂರು ಸಹ ನೀಡಿದ್ದರು. ಆದರೆ ಇದೀಗ ತನ್ನ ಗಂಡನನ್ನು ಕೊಲೆ ಮಾಡಿ, ನನ್ನ ಗಂಡನನ್ನು ಕೊಂದಿದ್ದೇನೆ ಎಂದು ಮತ್ತೊಂದು ಐಪಿಎಸ್ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಗಂಡನ ಮೃತದೇಹವನ್ನು ತೋರಿಸಿದ್ದಾರೆ.

ಪ್ರೆಸಿಡೆಂಟ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಕೆಲವು ಉನ್ನತ ಮಟ್ಟದ ಸಂಸ್ಥೆಗಳಿಗೂ ಓಂಪ್ರಕಾಶ್​ ಪತ್ನಿ ಗಂಡನ ವಿರುದ್ಧ ದೂರು ನೀಡಿದ್ದರು. ಇಬ್ಬರ ನಡುವೆ ವೈ ಮನಸು ಇರುವ ಕಾರಣ ಗಂಡನೇ ನನ್ನನ್ನ ಕೊಲೆ ಮಾಡುತ್ತಾನೆ ಎಂದು ತಿಳಿದು ಕೊಲೆ ಮಾಡಿದ್ದಾರೆ. ವಿಡಿಯೋ ಕಾಲ್ ನಲ್ಲಿ I have finished the monster.. ಎಂದು ಮತ್ತೊಬ್ಬರ ಐಪಿಎಸ್ ಪತ್ನಿ ಜೊತೆ ಮಾಹಿತಿ ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.

Siddaramaiah  : ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ #pratidhvani

ಒಟ್ಟು ಮೂರು ಮಹಡಿಯ ಮನೆಯಲ್ಲಿ ವಾಸವಾಗಿದ್ದ ಓಂ ಪ್ರಕಾಶ್​ ಅವರ ಕುಟುಂಬದಲ್ಲಿ ನಿವೃತ್ತ ಐಜಿಪಿ ಓಂ ಪ್ರಕಾಶ್​, ಅವರ ಪತ್ನಿ ಪಲ್ಲವಿ, ಮಗಳು ಕೃತಿ ಹಾಗೂ ಮಗ ಮತ್ತು ಸೊಸೆ ವಾಸವಿದ್ದರು. ಮೇಲಿನ ಮಹಡಿಯಲ್ಲಿ ಮಗ ಸೊಸೆ ಇದ್ದರೆ ಕೆಳ ಮಹಡಿಯಲ್ಲಿ ಓಂಪ್ರಕಾಶ್​, ಹಾಗು ಪತ್ನಿ ಮತ್ತು ಮಗಳು ಇದ್ದರು. ಪದೇ ಪದೇ ಜಗಳ ಮನೆಯಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿತ್ತು. ಭಾನುವಾರವೂ ಕೂಡ ಬೆಳಗ್ಗೆಯಿಂದಲೇ ಜಗಳ ಆರಂಭವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಪತ್ನಿಗೆ ಕೊಲೆ ಮಾಡಿದ್ದ ವಿಚಾರ ಹೇಳಿದ್ದ ಓಂ ಪ್ರಕಾಶ್ ಪತ್ನಿ ಪಲ್ಲವಿ, ಆ ಬಳಿಕ ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪತ್ನಿ ಪಲ್ಲವಿಯನ್ಮು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಘಟನಾ ಸ್ಥಳಕ್ಕೆ ಹಾಲಿ ಡಿಜಿ ಐಜಿಪಿ ಅಲೋಕ್​ ಮೋಹನ್​ ಹಾಗೂ ಬೆಂಗಳೂರು ಕಮೀಷನರ್ ದಯಾನಂದ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸೆಂಟ್​ ಜಾನ್ಸ್ ಆಸ್ಪತ್ರೆಗೆ ಮೃತದೇಹ ಶಿಫ್ಟ್​ ಮಾಡಲಾಗಿದೆ.

ಓಂ ಪ್ರಕಾಶ್​ ಕೊಲೆ ಆರೋಪದಲ್ಲಿ ಪತ್ನಿ ಪಲ್ಲವಿ ಜೊತೆಗೆ ಮಗಳು ಕೃತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಓಂ ಪ್ರಕಾಶ್​ ಕಣ್ಣಿಗೆ ಕಾರದ ಪುಡಿ ಎರಚಿ ಸುಮಾರು 8 ರಿಂದ 10 ಬಾರಿ ಚಾಕುವಿನಿಂದ ಇರಿದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಚಾಕು ಇರಿತ ಆಗಿದೆ. ಹೊಟ್ಟೆ ಭಾಗಕ್ಕೆ ಸುಮಾರು ನಾಲ್ಕರಿಂದ ಐದು ಬಾರಿ ಚಾಕು ಇರಿತ ಮಾಡಲಾಗಿದೆ. ಹೊಟ್ಟೆ ಭಾಗಕ್ಕೆ ಹೆಚ್ಚು ಬಾರಿ ಚಾಕು ಇರಿದ ಕಾರಣ ತೀವ್ರ ರಕ್ತಸ್ರಾವ ಆಗಿದ್ದು, ಇಡೀ ಮನೆಯ ತುಂಬಾ ಕೆಳ ಮಹಡಿಯ ಮನೆಯಲ್ಲಿ ರಕ್ತ ಹರಿದಿತ್ತು. ಸುಮಾರು 15-20 ನಿಮಿಷಗಳ ಕಾಲ ಒದ್ದಾಡಿದ್ದ ಓಂ ಪ್ರಕಾಶ್, ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಗಂಡನ‌ ನರಳಾಟ ನೋಡುತ್ತಾ ನಿಂತಿದ್ದ ಪತ್ನಿ, ಆ ಬಳಿಕ ಮುಖಕ್ಕೆ ಬಟ್ಟೆ ಸುತ್ತಿದ್ದಾರೆ.

Tags: former dg&igp om prakashformer dg&igp om prakash found deadformer dg&igp om prakash murderigp om prakaships officer om prakaships officer om prakash newsom prakash and wife fightom prakash murderom prakash personal issuesom prakash wiferetired dg & igp om prakashretired dg igp om prakashretired director general of police om prakash murderretired dp om prakash death newswife kills former dg&igp om prakash
Previous Post

ಸಂವಿಧಾನದ ಜಪ ಮಾಡ್ತಾರೆ..ಆದ್ರೆ ಧರ್ಮ ಸ್ವಾತಂತ್ರ್ಯ ಹರಣ ಮಾಡ್ತಾರೆ – ಕಾಂಗ್ರೆಸ್ ವಿರುದ್ಧ ಶ್ರೀ ಸುಬುಧೇಂದ್ರ ತೀರ್ಥರು ಕಿಡಿ 

Next Post

ಅಡುಗೆ ಎಣ್ಣೆ ಹಾಕಿ ಖಾರದ ಪುಡಿ ಸುರಿದು ನಿವೃತ್ತ ಪೊಲೀಸ್ ಹತ್ಯೆ..!!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಅಡುಗೆ ಎಣ್ಣೆ ಹಾಕಿ ಖಾರದ ಪುಡಿ ಸುರಿದು ನಿವೃತ್ತ ಪೊಲೀಸ್ ಹತ್ಯೆ..!!

ಅಡುಗೆ ಎಣ್ಣೆ ಹಾಕಿ ಖಾರದ ಪುಡಿ ಸುರಿದು ನಿವೃತ್ತ ಪೊಲೀಸ್ ಹತ್ಯೆ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada