ಚಾಮರಾಜನಗರ ಆಕ್ಸಿಜನ್ ದುರಂತ ; ಇಬ್ಬರೂ ಜಿಲ್ಲಾಧಿಕಾರಿಗಳ ತಲೆದಂಡ ಖಚಿತ..?

[Sassy_Social_Share]

ಇಡೀ ದೇಶಾದ್ಯಂತ ದೊಡ್ಡ ಸುದ್ದಿ ಆಗಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 24 ರೋಗಿಗಳು ಪ್ರಾಣ ಕಳೆದುಕೊಂಡ ಘಟನೆಯಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಇಬ್ಬರು ಜಿಲ್ಲಾಧಿಕಾರಿಗಳಾದ  ರೋಹಿಣಿ ಸಿಂಧೂರಿ ಮತ್ತು  ಡಾ ಎಂ ಆರ್ ರವಿ ಅವರ ತಲೆ ದಂಡ ಖಚಿತ ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಇಂದು  ಪತ್ರಿಕಾ ಗೋಷ್ಟಿ ನಡೆಸಿದ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಅವರು ಆಮ್ಲಜನಕ ದುರಂತದಿಂದ 24 ಜನ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.    ಯಾರ ಒತ್ತಡಕ್ಕೆ ಈ ಜಿಲ್ಲಾಧಿಕಾರಿಯನ್ನು ಇಟ್ಟುಕೊಂಡಿದ್ದೀರೋ ಗೊತ್ತಿಲ್ಲ. ಚಾಮರಾಜನಗರ- ಮೈಸೂರು ಜಿಲ್ಲಾಡಳಿತಗಳ ವ್ಯತ್ಯಾಸದಿಂದ ಈ ದುರ್ಘಟನೆ ನಡೆದಿದೆ. ಮೈಸೂರಿನಿಂದ ಸಕಾಲಕ್ಕೆ ಸಿಲಿಂಡರ್ ಪೂರೈಕೆ ಆಗಿಲ್ಲ. ಸದರನ್ ಗ್ಯಾಸ್ನಿಂದ 2.30ಕ್ಕೆ 90 ಸಿಲಿಂಡರ್ ಹೋಗಿದೆ. ಆದರೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿರುವಂತೆ 220 ಆಮ್ಲಜನಕ ಸಿಲಿಂಡರ್ ಪೂರೈಕೆ ಆಗಿಲ್ಲ ಎಂದಿದ್ದಾರೆ.  ಆಕ್ಸಿಜನ್ ಸರಬರಾಜು  ಕಾಂಟ್ರ್ಯಾಕ್ಟ್ ಇರುವುದು ಚಾಮರಾಜನಗರ ಜಿಲ್ಲಾಸ್ಪತ್ರೆ, ಸದರನ್ ಮತ್ತು ಪದಕಿ ಗ್ಯಾಸ್ ಏಜೆನ್ಸಿಗಳ ನಡುವೆ. ಕಳುಹಿಸಿಕೊಡಲು ಮೈಸೂರು ಜಿಲ್ಲಾಧಿಕಾರಿ  ಯಾರು? 220 ಸಿಲಿಂಡರ್ ಕಳಿಸಿದ್ದೇವೆ ಎಂದು ಹೇಳುವ ಮೂಲಕ  ನಿಮ್ಮ ಕಂಟ್ರೋಲ್ ಇರುವುದನ್ನು ಒಪ್ಪಿಕೊಂಡಂತಾಯಿತು ಎಂದು ಆರೋಪಿಸಿದರು.

ಪ್ರತಿ ದಿನ 300-350 ಸಿಲಿಂಡರ್ ನೀಡುವಂತೆ ಆಕ್ಸಿಜನ್ ಸಿಲಿಂಡರ್ ಕಂಪನಿಗಳ ಜೊತೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿರುತ್ತದೆ. ಆದರೆ ಈಗ ಒಂದು ವಾರದ ಹಿಂದೆ ಮೈಸೂರು ಜಿಲ್ಲಾಡಳಿತದಿಂದ ಸಭೆ ಮಾಡಿ, ಅಲ್ಲಿನ ಡ್ರಗ್ ಕಂಟ್ರೋಲರ್ಗೆ ಸೂಚಿಸಿ, ಚಾಮರಾಜನಗರಕ್ಕೆ 150, ಮಂಡ್ಯಕ್ಕೆ 100 ಸಿಲಿಂಡರ್ ನೀಡುವಂತೆ ತಿಳಿಸುತ್ತಾರೆ. ಅಲ್ಲದೆ ಆಕ್ಸಿಜನ್ಗಾಗಿ ಚಾಮರಾಜನಗರದ ವಾಹನ ಬಂದು ನಿಂತರೂ ದಿನಕ್ಕೆ 20, 30, 40 ಸಿಲಿಂಡರ್  ಮಾತ್ರ ನೀಡುತ್ತಿದ್ದು ಹೀಗೆ ಮೂರ್ನಾಲ್ಕು ಬಾರಿ ಅವರು ಬರಬೇಕಿದೆ ಎಂದು ಅವರು ಆರೋಪಿಸಿದರು. ಮೈಸೂರಿನಂತಹ ಪ್ರಮುಖ ಜಿಲ್ಲೆಗೆ ಪ್ರಾಮಾಣಿಕ, ಹಿರಿಯ ಅಧಿಕಾರಿಯನ್ನು ನೇಮಿಸಿ ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಇದರ ಬೆನ್ನಲ್ಲೇ    ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನವೇ ಚಾಮರಾಜನಗರದಲ್ಲಿ  ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟಿರಲು   ಕಾರಣ, ಅವರನ್ನು ಅಮಾನತುಗೊಳಿಸಿ, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಈ ಕುರಿತು ಮಾಹಿತಿ  ನೀಡಿರುವ ಅವರು ಮೇ 2ರ ಬೆಳಿಗ್ಗೆ ಮೈಸೂರು ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆಗೆ ಆಮ್ಲಜನಕ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ವಿಷಯ ಗಮನಕ್ಕೆ ಬಂದಿತು. ಕೂಡಲೇ ರಾಜ್ಯದ ಕೋವಿಡ್ ನೋಡಲ್ ಅಧಿಕಾರಿಗಳಾದ ನಿಶ್ಚಿತ್ ಮತ್ತು ಗುಂಜಾಲ್ ಕೃಷ್ಣ ಅವರಿಗೆ ವಿಷಯ ತಿಳಿಸಿದೆ. ಬೆಳಿಗ್ಗೆ 11 ಗಂಟೆ ಒಳಗೆ ಆಮ್ಲಜನಕವು ಚಾಮರಾಜನಗರ ಜಿಲ್ಲೆಗೆ ತಲುಪದೇ ಇದ್ದರೆ ತುಂಬಾ ಸಂಕಷ್ಟ ಪರಿಸ್ಥಿತಿ ಎದುರಾಗಿ, ಸೋಂಕಿತರಿಗೆ ಬಹಳ ತೊಂದರೆಯಾಗುವುದರಿಂದ ಮೈಸೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲು ಮನವಿ ಮಾಡಿದ್ದೆ. ಮೈಸೂರು ಜಿಲ್ಲಾಧಿಕಾರಿ ನಿರ್ದೇಶನವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ನಿಶ್ಚಿತ್ ಹೇಳಿದ್ದಾರೆಂದು ಎಂದು ಅವರು   ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಮರಿಯಾಲದಲ್ಲಿರುವ ಬಸವರಾಜೇಂದ್ರ ಆಸ್ಪತ್ರೆಗೆ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗದೆ ಇದ್ದುದರಿಂದ, ಆಮ್ಲಜನಕ ಸಹಿತ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.  ಖಾಸಗಿ ಆಸ್ಪತ್ರೆಯ ಆಡಳಿತ, ಆಮ್ಲಜನಕ ಪೂರೈಕೆಯಾಗದಿರುವ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ಆರೋಪಿಸಿದ್ದಾರೆ. ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರವಷ್ಟೆ  ವೈದ್ಯರು, ಅಧಿಕಾರಿಗಳ ಸಭೆ ನಡೆಸಿದ್ದರು.  ರಾತ್ರಿ ಒಂಬತ್ತು ಗಂಟೆಗೆ ಆಮ್ಲಜನಕ ಸಿಲಿಂಡರ್ ಬರುತ್ತಿಲ್ಲ ಎಂದು ಗೊತ್ತಾದ ನಂತರವೇ ಅಧಿಕಾರಿಗಳು ಆಮ್ಲಜನಕ ತರಿಸಲು ಪ್ರಯತ್ನ ಆರಂಭಿಸಿದರು ಎಂದು ಮೂಲಗಳು   ತಿಳಿಸಿವೆ. ಆದರೆ ಚಾಮರಾಜನಗರ ಜಿಲ್ಲಾಧಿಕಾರಿ ನೇರವಾಗಿ ಮೈಸೂರು ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡದಿರುವುದೇ ಆಮ್ಲಜನಕ ಸರಬರಾಜು ವಿಳಂಬ ಆಗಲು ಕಾರಣ ಎನ್ನಲಾಗಿದೆ.  

 ಭಾನುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವೈದ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದರು. ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿದ್ದ ಧ್ರುವನಾರಾಯಣ, ಆಮ್ಲಜನಕ ಕೊರತೆ ಇರುವ ಬಗ್ಗೆ ಪ್ರಸ್ತಾಪಿಸಿದ್ದರು. ‘ಆ ಸಂದರ್ಭದಲ್ಲಿ ನಮ್ಮಲ್ಲಿ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದ್ದರು’ ಎಂದು ಧ್ರುವನಾರಾಯಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.   ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪತ್ನಿಯನ್ನು ದಾಖಲಿಸಿದ್ದ ರಾಜೇಂದ್ರಬಾಬು ಎಂಬುವವರಿಗೆ ರಾತ್ರಿ 8.30ರ ವೇಳೆಗೆ ಆಮ್ಲಜನಕ ಖಾಲಿಯಾಗಿದೆ ಎಂಬ ಮಾಹಿತಿ ಸಿಕ್ಕಿತು. ನಾನು ಕೂಡಲೇ ‘  ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದೆ. ಅದು ಸಾಧ್ಯವಾಗಲಿಲ್ಲ. ನಂತರ ಮಾಧ್ಯಮ ಪ್ರತಿನಿಧಿಯೊಬ್ಬರ ಗಮನಕ್ಕೆ ತಂದೆ. ಅವರು ಬೇರೆ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿ, ಮೈಸೂರು ಸಂಸದ ಸೇರಿದಂತೆ ಬೇರೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಕನಿಷ್ಠ 50 ಸಿಲಿಂಡರ್ ಪೂರೈಕೆಯಾಗುವಂತೆ ನೋಡಿಕೊಂಡರು. ಇಂತಹ ಪ್ರಕರಣ ಮುಂದೆಂದೂ ಮರುಕಳಿಸಬಾರದು. ಸರ್ಕಾರ ತಕ್ಷಣ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಮತ್ತೋರ್ವ ಶಾಸಕ  ಹರ್ಷವರ್ಧನ್ ಅವರೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಹರಿ ಹಾಯ್ದಿದ್ದಾರೆ. ಕಳೆದ ವರ್ಷ ಜಿಲ್ಲಾಧಿಕಾರಿ ಆಗಿದ್ದ ಅಭಿರಾಂ ಜಿ ಶಂಕರ್  ಅವರು ಕೋವಿಡ್ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಿದರು ಅದನ್ನು ನೋಡಿಕೊಂಡು ಇವರು ಕರ್ತವ್ಯ ನಿರ್ವಹಿಸಬೇಕಿತ್ತು ಎಂದು ಹೇಳಿದ್ದು ಅವರ ಅಮಾನತ್ತಿಗಾಗಿ ಒತ್ತಾಯಿಸಿದ್ದಾರೆ.  

ಈ ವಿದ್ಯಾಮಾನಗಳನ್ನು ಗಮನಿಸಿದಾಗ ಇಬ್ಬರೂ ಜಿಲ್ಲಾಧಿಕಾರಿಗಳ ಮೇಲೆ ತೂಗು ಕತ್ತಿ ಇರುವುದು ಖಚಿತವಾಗಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಿದೆ. 

Related posts

Latest posts

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...

ಆಕ್ಸಿಜನ್‌ ಕೊರತೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು -ಸಿದ್ದರಾಮಯ್ಯ

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ...