ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ವಿರುದ್ದ ಬಂಡಾಯವೆದ್ದು ದೂರದ ಅಸ್ಸಾಮಿನ ಗುವಾಹಟಿಯಲ್ಲಿ ತಂಗಿರುವ ಶಿವಸೇನೆ 48 ಶಾಸಕರ ಪೈಕಿ ಅನರ್ಹತೆ ಭಿತಿ ಎದುರಿಸುತ್ತಿರುವ 15 ಶಾಸಕರಿಗೆ ಕೇಂದ್ರ ಸರ್ಕಾರ Y+ ಸಿಆರ್ಪಿಎಫ್ ಭದ್ತೆ ಒದಗಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಸದ್ಯ ಮಹಾರಾಷ್ಟ್ರದಲಿ ಬಿಗುಡಾಯಿಸಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತಮ್ಮಗೆ ಬೆದರಿಕೆ ಕರೆಗಳು ಬರುತ್ತಿದ್ದು ಸೂಕ್ತ ಭ್ದ್ರತೆ ಕಲ್ಪಿಸುವಂತೆ ಶಾಸಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಇನ್ನು ಬಂಡಾಯ ಶಾಸಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಬಂಡಾಯ ಶಾಸಕರು ಹಾಗು ಅವರ ಕುಟುಂಬಸ್ಥರಿಗೆ ನೀಡದ್ದ ಭದ್ರತೆಯನ್ನು ಹಿಂಪಡೆಯುವಂತೆ ಆದೇಶಿಸಿದ್ದರು. ಠಾಕ್ರೆಯವರ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚಗೆ ಗ್ರಸವಾಗಿತ್ತು.