ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಂಧ್ರ ಪ್ರದೇಶ ವಿಧಾನಸಭೆಗೆ ಕಾಲಿಡುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ.
ಆಡಳಿತ ಪಕ್ಷ ವೈಎಸ್ಆರ್ ಪಕ್ಷದ ಸದಸ್ಯರು ತಮ್ಮನ್ನು ನಿರಂತರವಾಗಿ ನಿಂದಿಸುತ್ತಿರುವ ಕಾರಣಕ್ಕಾಗಿ ತಮ್ಮಗೆ ತೀವ್ರ ನೋವುಂಟು ಆಗಿದ್ದು ತಾವು ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಧಾನಸಭೆ ಪ್ರವೇಶಿಸುವುದಾಗಿ ಅಧಿವೇಶನದಲ್ಲಿ ಹೇಳಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ನಾನು ಎಲ್ಲ ತರಹದ ಅವಮಾನಗಳನ್ನು ಸಹಿಸಿಕೊಂಡು ಯಾವುದಕ್ಕು ಪ್ರತಿಕ್ರಿಯಿಸದೆ ಶಾಂತವಾಗಿದ್ದೇನೆ. ಇಂದು ವಿರೋಧ ಪಕ್ಷದ ಸದಸ್ಯರು ನನ್ನ ಮಡದಿಯನ್ನು ಗುರಿಯಾಗಿಸಿಕ್ಕೊಂಡು ಟೀಕಿಸಿದ್ದಾರೆ. ನಾನು ಯಾವಾಗಲೂ ಗೌರವಕ್ಕಾಗಿ ಬದುಕಿದ ವ್ಯಕ್ತಿ ಮತ್ತು ಸಮಾಜದಲ್ಲಿ ಗೌರವದಿಂದ ಬದುಕಿದ್ದೇನೆ. ಇನ್ನು ನನಿಂದ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾತನಾಡುವ ವೇಳೆ ಗದ್ಗರಿತರಾದರೂ.

ಮಾತನಾಡುವ ವೇಳೆ ಚಂದ್ರಬಾಬು ನಾಯ್ಡುರವರನ್ನು ಟೀಕಿಸಿದ ಆಡಳಿತದ ಪಕ್ಷದ ಸದಸ್ಯರು ನಾಯ್ಡುರವರು ನಾಟಕದ ಮಾತುಗಳನ್ನು ಆಡುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದ ವೇಳೆ ಸಭಾಧ್ಯಕ್ಷ ತಮ್ಮಿನೇನಿ ಸೀತಾರಾಮ್ ಮೈಕ್ ಆಫ್ ಮಾಡಿಸಿದ್ದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ವಿರುದ್ದ ಮಾತಿನ ಚಕಮಕಿ ಜೋರಾಗಿ ನಡೆದಿತ್ತು.
ನಂತರ ತಮ್ಮ ಕೊಠಡಿಯಲ್ಲಿ ತಮ್ಮ ಪಕ್ಷ ದ ಶಾಸಕರೊಂದಿಗೆ ಚರ್ಚಿಸಿದ ನಾಯ್ಡುರವರು ಭಾವೋದ್ವೇಗಕ್ಕೆ ಒಳಗಾದರೂ ಎಂದು ತಿಳಿದು ಬಂದಿದೆ. ತಮ್ಮ ಪಕ್ಷ ದ ಶಾಸಕರು ಅಲ್ಲಿಂದ ಹೊರಟ ನಂತರ ತಾವು ಪುನಃ ಮುಖ್ಯಮಂತ್ರಿಯಾಗುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.