• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತವು ರಷ್ಯಾದ ಬಗೆಗಿನ ತನ್ನ ನಿಲುವನ್ನು ಉಳಿಸಿಕೊಳ್ಳಬಹುದೇ?

ಫಾತಿಮಾ by ಫಾತಿಮಾ
July 19, 2022
in ದೇಶ, ವಿದೇಶ
0
ಭಾರತವು ರಷ್ಯಾದ ಬಗೆಗಿನ ತನ್ನ ನಿಲುವನ್ನು ಉಳಿಸಿಕೊಳ್ಳಬಹುದೇ?
Share on WhatsAppShare on FacebookShare on Telegram

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರದ ಹೊಸ ಜಾಗತಿಕ ಮಿತ್ರತ್ವವನ್ನು ಗಮನಿಸುತ್ತಿರುವ ವಿದೇಶಾಂಗ ನೀತಿ ವೀಕ್ಷಕರು ಒಂದು ಕಡೆ US ಮತ್ತು ಯುರೋಪ್‌ಗೆ ಪ್ರಾಮುಖ್ಯತೆ ಕೊಡುವ ಇನ್ನೊಂದೆಡೆ ರಷ್ಯಾಗೂ ಪ್ರಾಮುಖ್ಯತೆ ಕೊಡುತ್ತಿರುವ ಭಾರತೀಯ ವಿದೇಶಾಂಗ ಮತ್ತು ಆರ್ಥಿಕ ನೀತಿಯನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ವಿಶೇಷವಾಗಿ ಮೇ ತಿಂಗಳಲ್ಲಿ ಯುಎಸ್ ನೇತೃತ್ವದ ಇಂಡೋ-ಪೆಸಿಫಿಕ್ ಎಕನಾಮಿಕ್ ಫೋರಮ್‌(ಐಪಿಇಎಫ್)ನಲ್ಲಿ ಭಾರತ ಪಡೆದುಕೊಂಡ ಸದಸ್ಯತ್ವ ಮತ್ತು ಕಳೆದ ತಿಂಗಳು ಜರ್ಮನಿಯಲ್ಲಿ ನಡೆದ ಜಿ-7 ನಲ್ಲಿ ಪಾಲುದಾರ ರಾಷ್ಟ್ರವಾಗಿ ಭಾರತದ ಉಪಸ್ಥಿತಿಯು ರಷ್ಯಾದೊಂದಿಗೆ ದೇಶದ ಸಂಬಧಕ್ಕೆ ಹೋಲಿಸಿದರೆ ತೀರಾ ವ್ಯತಿರಿಕ್ತ ನಡೆ.

ADVERTISEMENT

ಉಕ್ರೇನ್ ಆಕ್ರಮಣದ ಕುರಿತು ಭಾರತದ ನಿಲುವಿನ ಬಗ್ಗೆ ಯುರೋಪ್ ನಿರಾಶೆ ವ್ಯಕ್ತಪಡಿಸಿದ ಹೊತ್ತಲ್ಲೇ ನಡೆದ ಈ ಬೆಳವಣಿಗೆಯು ಭಾರತಕ್ಕೆ ಮಾತ್ರವಲ್ಲದೆ ಯುರೋಪಿಗೂ ಮಹತ್ವದ್ದಾಗಿದ್ದು ಚೀನಾದ ಆರ್ಥಿಕ ವಿಘಟನೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.

ಈ ನಡುವೆ ಚೀನಾದ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ಗಮನಹರಿಸುತ್ತಿದೆ ಎಂದು ಹೇಳಿಕೊಳ್ಳುತ್ತಾ ಬಂದಿದೆ. ಆದರೆ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸಾಂಕ್ರಾಮಿಕ ಪ್ರೇರಿತ ಅಡ್ಡಿಗಳ ಹೊರತಾಗಿ ಮತ್ತು ನಿರಂತರವಾಗಿ ನಡೆಯುತ್ತಿರುವ ಚೀನೀ ಗಡಿ ಆಕ್ರಮಣಗಳ ಹೊರತಾಗಿಯೂ, ಚೀನಾದ ಕಸ್ಟಮ್ಸ್ ಡೇಟಾ ಪ್ರಕಾರ 2022 ರ ಮೊದಲ ತ್ರೈಮಾಸಿಕದಲ್ಲಿ ದ್ವಿಪಕ್ಷೀಯ ವ್ಯಾಪಾರವು 15 ಪ್ರತಿಶತದಷ್ಟು ಹೆಚ್ಚಾಗಿದೆ . ಇದು ಭಾರತ-ಚೀನಾ ಸಮೀಕರಣದಲ್ಲಿ ಉದ್ದೇಶ ಮತ್ತು ಕ್ರಿಯೆಯ ನಡುವಿನ ಸ್ಪಷ್ಟವಾದ ವಿರೋಧಾಭಾಸವಾಗಿದೆ‌.

ಏರುತ್ತಿರುವ ಇಂಧನ ಬೆಲೆಗಳ ಭಾರದಿಂದ ತತ್ತರಿಸುತ್ತಿರುವ ಮತ್ತು ರಷ್ಯಾದಿಂದ ಉಂಟಾದ ಅಸ್ತಿತ್ವವಾದದ ಬೆದರಿಕೆಯ ವಿರುದ್ಧ ತನ್ನ ಮಿಲಿಟರಿ ಮತ್ತು ಭೌಗೋಳಿಕ ನೀತಿಗಳನ್ನು ಮರುರೂಪಿಸುತ್ತಿರುವ ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ ಭಾರತವು ಸಮತೋಲನದ ಮಾರ್ಗವನ್ನು ಆರಿಸಿಕೊಂಡಿದೆ.  ಮಾಸ್ಕೋ ಮತ್ತು ಬೀಜಿಂಗ್ ಅನ್ನು ಇನ್ನಷ್ಟು ಹತ್ತಿರಕ್ಕೆ ತಳ್ಳುವುದು ಭಾರತಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಹಾಗಾಗಿಯೇ ಭಾರತ ಇಂತಹ ನಿಲುವು ತೆಗೆದುಕೊಂಡಿದೆ.

ಪಶ್ಚಿಮದ ಸ್ವಾಭಾವಿಕ ಮಿತ್ರರಾಷ್ಟ್ರವಾಗಿದ್ದುಕೊಂಡೇ ತನ್ನ ಪ್ರಜಾಪ್ರಭುತ್ವದ ನೆಲೆಯನ್ನು ಮತ್ತು ಏಷ್ಯಾದಲ್ಲಿ ತಾನು‌ ನಿರ್ವಹಿಸಲೇಬೇಕಿರುವ ಪ್ರಾದೇಶಿಕ ಪಾತ್ರವನ್ನು ನಿರ್ವಹಿಸಲು ಭಾರತವು ರಷ್ಯಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದೊಂದಿಗಿನ ತನ್ನ ಐತಿಹಾಸಿಕ ಸಂಬಂಧವನ್ನು ಮುರಿಯಲಾಗುವುದಿಲ್ಲ ಎಂದು ವಾದಿಸಿದೆ.  ರಷ್ಯಾದ ಮೇಲಿನ ರಕ್ಷಣಾ ಅವಲಂಬನೆಯು ಕುಸಿದಿದ್ದರೂ ಸಹ ಚೀನಾ-ಪಾಕಿಸ್ತಾನದ ನಡುವಿನ ಸಂಬಂಧದ ವಿರುದ್ಧವಾಗಿ ಭಾರತ ರಷ್ಯಾದಿಂದ ದೂರವಿರಲು ಸಾಧ್ಯವಿಲ್ಲ  ಮತ್ತು ಹಾಗೆ ದೂರವಿರಲು ಬಯಸುವುದೂ ಇಲ್ಲ.  ಪಶ್ಚಿಮದ ರಾಷ್ಟ್ರಗಳು ಭಾರತದೊಂದಿಗೆ ಸಂಬಂಧ ಬೆಳೆಸಲು ಬಯಸುತ್ತದೆಯಾದರೆ ಅದು ರಷ್ಯಾ ಮತ್ತು ಭಾರತದ ಈ ಸಂಬಂಧವನ್ನು ಒಪ್ಪಿಕೊಳ್ಳಲೇಬೇಕು.

ಯು.ಎಸ್ ಮತ್ತು ಜರ್ಮನಿಯಂತಹ ಪ್ರಮುಖ ಪಾಶ್ಚಾತ್ಯ ರಾಷ್ಟ್ರಗಳು ‘ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಿಯಮಗಳ ಆಧಾರದ ಮೇಲೆ’ ಮಿತ್ರರಾಷ್ಟ್ರಗಳನ್ನು ಆರಿಸಿಕೊಳ್ಳಬೇಕು ಅಂದಿದ್ದರೂ ಭಾರತದ ಚುನಾವಣಾ ಪ್ರಜಾಪ್ರಭುತ್ವ ಮತ್ತು ಅದರ ಉದಾರವಾದ ಸಂವಿಧಾನವು  ಯುಎಸ್ ಮತ್ತು ಯುರೋಪ್‌ನ ನೀತಿಗೆ ಹೊಂದಾಣಿಕೆ ಆಗುವುದಿಲ್ಲ ಎಂಬುವುದು ಉಕ್ರೇನ್ ಆಕ್ರಮಣದ ನಂತರದ ನಂತರದ ಉಕ್ರೇನ್-ಯುರೋಪಿಯನ್ ರಾಜಕೀಯದಲ್ಲೂ ರುಜುವಾತಾಗಿದೆ.

ರಷ್ಯಾಗೆ ಪಶ್ಚಿಮದಿಂದ ಕಡಿದುಕೊಳ್ಳಲಿರುವ ಬಂಧವು ಹೊಸ ರೀತಿಯ ಸವಾಲುಗಳನ್ನು‌ ಒಡ್ಡಲಿದೆ. ಹಾಗಾಗಿ ಬೀಜಿಂಗ್ ಮತ್ತು ಮಾಸ್ಕೋ ನಡುವಿನ ಆಳವಾದ ಸಹಭಾಗಿತ್ವವು ಮಾಸ್ಕೋದೊಂದಿಗಿನ ಭಾರತದ ಸಹಭಾಗಿತ್ವದ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿಯೇ ರಷ್ಯಾ ಬಗೆಗಿನ ತನ್ನ ನಿಲುವಿನ ಬಗ್ಗೆ ಪರಿಶೀಲಿಸುವ ಮೊದಲು ಅದು ಎಷ್ಟು ದೂರ ಹೋಗಬೇಕು ಮತ್ತು ಯಾವ ಹಂತದಲ್ಲಿ ಪಾಶ್ಚಾತ್ಯ ಒತ್ತಡವು ಭಾರತವನ್ನು ಯಾವುದಾದರೂ ಒಂದು ಕಡೆಯನ್ನು ಆರಿಸಿಕೊಳ್ಳಲು ಒತ್ತಾಯಿಸುತ್ತದೆ ಎಂಬ ಪ್ರಶ್ನೆಯನ್ನು ತನ್ನನ್ನು ತಾನು‌‌ ಕೇಳಿಕೊಳ್ಳಬೇಕಾಗುತ್ತದೆ.

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ಅಸ್ತಿತ್ವವಾದದ ಬೆದರಿಕೆಯನ್ನು ಒಡ್ಡುತ್ತದೆಯಾದರೂ, ಯುರೋಪಿಯನ್ ಕಾರಿಡಾರ್ ನಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಚೀನಾ ಒಡ್ಡುತ್ತಿರುವ ಭೌಗೋಳಿಕ ಆಯಕಟ್ಟಿನ ಬೆದರಿಕೆಯ ಬಗೆಗೂ ತೀವ್ರ ಚರ್ಚೆ ನಡೆಯುತ್ತಿದೆ.‌ ಹೀಗಾಗಿಯೇ IPEF ಸೇರಲು ಭಾರತವನ್ನು ಆಹ್ವಾನಿಸಲಾಗಿದೆ. ಇಂಡೋ ಪೆಸಿಫಿಕ್ ಪಾಲಿಸಿಗೆ ಭೌಗೋಳಿಕವಾಗಿ ಅರ್ಥಿಕ ಸಹಕಾರ ನೀಡಬಲ್ಲ ದಕ್ಷಿಣ ಏಷ್ಯಾದ ರಾಷ್ಟ್ರ ಭಾರತವೊಂದೇ ಎಂಬ ಮೂಲಭೂತ ಅರಿವು ಯುರೋಪಿಯನ್ ರಾಷ್ಟ್ರಗಳಿಗೂ ಇದೆ.

ಭಾರತವು ಸದ್ಯಕ್ಕೆ ಸಮತೋಲನದ ಮಾರ್ಗವನ್ನು ಆರಿಸಿಕೊಂಡಿದೆ. ಇಂದು ಭಾರತವು ತನ್ನ ನಿಲುವನ್ನು ಜಾಗತಿಕ ನಿಯಮಗಳ ಆಧಾರದ ಮೇಲೆ ತೆಗೆದುಕೊಳ್ಳುತ್ತಿದ್ದರೂ ದೇಶೀಯ ಮಾರುಕಟ್ಟೆಗಾಗಿ ಅಗ್ಗದ ರಷ್ಯನ್ ತೈಲವನ್ನು ಖರೀದಿಸಿದೆ. ತನ್ನ ದೇಶೀಯ ಆರ್ಥಿಕ ಸವಾಲು, ಭೌಗೋಳಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲೂ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಆಯ್ಕೆಯಲ್ಲಿ ಒಂದು ಸ್ಪಷ್ಟ ನಿರ್ಧಾರ ಭಾರತ ತೆಗೆದುಕೊಳ್ಳಬೇಕಾಗುತ್ತದೆ.

ಮೂಲ: ಮಾಯಾ ಮೀರ್‌ಚಂದಾನಿ, ಎನ್‌ಡಿಟಿವಿ
(ಮಾಯಾ ಮೀರ್‌ಚಂದಾನಿ  ಅಶೋಕ ವಿಶ್ವವಿದ್ಯಾನಿಲಯದಲ್ಲಿ ಮಾಧ್ಯಮ ಅಧ್ಯಯನಗಳು ಇಲಾಖೆಯ ಮುಖ್ಯಸ್ಥರು ಮತ್ತು ದೆಹಲಿ ಆಧಾರಿತ ಅಬ್ಸರ್ವರ್ ರಿಸರ್ವರ್ ಫೌಂಡೇಶನ್ನಲ್ಲಿ ಹಿರಿಯ ಸಂಶೋಧನಾ ಅಭ್ಯರ್ಥಿ)

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

Ideal Hookup Websites And Programs

Next Post

ಏಳು ಜನ IAS ಅಧಿಕಾರಿಗಳ ವರ್ಗ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ !

Related Posts

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
0

ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿ (Labour & farmer policy) ವಿರೋಧಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಇಂದು ದೇಶಾದ್ಯಂತ ಟ್ರೇಡ್...

Read moreDetails

ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು “ನಿದ್ರಾದೇವಿ Next Door” ಚಿತ್ರದ “ನೀ ನನ್ನ” ಎಂಬ ರೊಮ್ಯಾಂಟಿಕ್ ಸಾಂಗ್.

July 8, 2025

Narendra Modi: ಭಾರತದಲ್ಲಿ ಪ್ರೆಸ್‌ ಸೆನ್ಸಾರ್‌ಶಿಪ್‌ ಖಾತೆಗಳನ್ನು ನಿಷೇಧಿಸಲು ಆದೇಶ ಹೊರಡಿಸಿಲ್ಲ: ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

July 8, 2025

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025
Next Post
21 ಸಾವಿರ ಕೋಟಿ ಬಜೆಟ್ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡಿರುವ ರಾಜ್ಯ ಸರ್ಕಾರ! – ಇಲ್ಲಿದೆ ಸಂಪೂರ್ಣ ವರದಿ

ಏಳು ಜನ IAS ಅಧಿಕಾರಿಗಳ ವರ್ಗ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ !

Please login to join discussion

Recent News

Top Story

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

by ಪ್ರತಿಧ್ವನಿ
July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 
Top Story

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

by Chetan
July 9, 2025
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 
Top Story

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

by Chetan
July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 
Top Story

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

by Chetan
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada