ರಾಜ್ಯ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ (Muslim reservation) ಕಲ್ಪಿಸುವ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ.

ಈ ಬಗ್ಗೆ ನಿನ್ನೆ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ವಿಜಯೇಂದ್ರ ಅವರು ನಾಡಗೀತೆಯನ್ನ ಸರಿಯಾಗಿ ಓದಲಿ. ಯಾರೆಲ್ಲ ಸೇರಿದ್ರೆ ಶಾಂತಿಯ ತೋಟ ಆಗುತ್ತೆ ಅಂತ ಮೊದಲು ವಿಜಯೇಂದ್ರ ತಿಳಿದುಕೊಳ್ಳಲಿ ಎಂದು ಕೌಂಟರ್ ಕೊಟ್ಟಿದ್ರು.
ಇದೀಗ ಡಿಸಿಎಂ ಡಿಕೆ ಮಾತಿಗೆ ಬಿ.ವೈ ವಿಜಯೇಂದ್ರ ಸಿಡಿದೆದ್ದಿದ್ದು, ಬಿಜೆಪಿ ಸರ್ಕಾರ ಇದ್ದಾಗ ಅಬ್ದುಲ್ ಕಲಾಂ ಅವರನ್ನ ರಾಷ್ಟ್ರಪತಿ ಮಾಡಿದ್ದು ನಾವು,ಅಬ್ದುಲ್ ನಜೀರ್ ಅವರನ್ನು ರಾಜ್ಯಪಾಲರಾಗಿ ಮಾಡಿದ್ದು ಬಿಜೆಪಿ ಎಂದು ಹೇಳಿದ್ದಾರೆ.

ಇರಲಿ..ಡಿ.ಕೆ ಶಿವಕುಮಾರ್ ಹಿರಿಯರು, ಸರ್ವ ಜನಾಂಗದ ಶಾಂತಿಯ ತೋಟ ನೆನಪು ಮಾಡಿದ್ದಾರೆ.ಸರ್ವ ಜನಾಂಗದ ಶಾಂತಿಯ ತೋಟಕ್ಕೆ ವಿಷ ಬೀಜ ಬಿತ್ತುವ ಕೆಲಸವನ್ನು ಇದೇ ಕಾಂಗ್ರೆಸ್ ಸರ್ಕಾರ ಮಾಡ್ತಿದೆ ಅಂತ ಬಿವೈವಿ ವಾಗ್ದಾಳಿ ನಡೆಸಿದ್ದಾರೆ.