• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವಿವಿಧ ಸರ್ಕಾರಿ ಸಂಸ್ಥೆಗಳಿಂದ ಜಲ ಮಂಡಳಿಗೆ 147 ಕೋಟಿ ನೀರಿನ ಬಿಲ್ ಬಾಕಿ : BWSSB ಬೊಕ್ಕಸಕ್ಕೆ ಹೊರೆ

ಕರ್ಣ by ಕರ್ಣ
August 21, 2022
in ಕರ್ನಾಟಕ
0
ವಿವಿಧ ಸರ್ಕಾರಿ ಸಂಸ್ಥೆಗಳಿಂದ ಜಲ ಮಂಡಳಿಗೆ 147 ಕೋಟಿ ನೀರಿನ ಬಿಲ್ ಬಾಕಿ : BWSSB ಬೊಕ್ಕಸಕ್ಕೆ ಹೊರೆ
Share on WhatsAppShare on FacebookShare on Telegram

ಇಡೀ‌ ಬೆಂಗಳೂರಿಗೆ ನೀರು ಹಂಚುವ BWSSBಗೆ ಸರ್ಕಾರಿ ಸಂಸ್ಥೆಗಳಿಂದಲೇ ಕೋಟಿ ಕೋಟಿ ರೂಪಾಯಿ ವಾಟರ್ ಬಿಲ್ ಬಾಕಿ ಬರುವುದಿದೆ.‌ ಇದರಲ್ಲಿ ನಮ್ಮ ಬಿಬಿಎಂಪಿಯೂ ಜಲ ಮಂಡಳಿಗೆ ಕೋಟಿಗಟ್ಟಲೆ ಹಣ ಪಾವತಿ ಬಾಕಿ ಉಳಿಸಿಕೊಂಡಿದೆ.‌ ಆದರೆ ಬಿಬಿಎಂಪಿ ಬಿಲ್ ಬಾಕಿ ಮೊತ್ತಕ್ಕಿಂತ ಅದಕ್ಕೆ ಬಿದ್ದಿರುವ ಬಡ್ಡಿ ಮೊತ್ತವೇ ಹೆಚ್ಚಾಗಿದೆ. ಈ ಮೂಲಕ ಪಾಲಿಕೆ ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ಪೋಲು ಮಾಡುತ್ತಿದೆ.

ADVERTISEMENT

ಬಾಕಿ ಮೊತ್ತಕ್ಕಿಂತ ಬಿದ್ದಿರುವ ಬಡ್ಡಿಯೇ ಹೆಚ್ಚು.. ತೆರಿಗೆ ಹಣ ಪೋಲು

BWSSB ಗೆ ಸರ್ಕಾರದ ಸಂಸ್ಥೆಗಳ ಉಡಾಫೆಯಿಂದ ಭಾರೀ ಹೊರೆ ಅನುಭವಿಸುತ್ತಿದೆ. ಜಲ ಮಂಡಳಿಗೆ ಬಿಬಿಎಂಪಿ ಸೇರಿದಂತೆ ಹಲವು ಸರ್ಕಾರಿ ಅಧೀನದ ಇಲಾಖೆಗಳಿಂದ ಕೋಟಿ ಕೋಟಿಗಟ್ಟಲೆ ಹಣ ಬರುವುದು ಬಾಕಿ ಇದೆ. ಬಿಬಿಎಂಪಿ ಅಧಿಕಾರಿಗಳು ಜನರ ತೆರಿಗೆ ಬಾಕಿ ಇದ್ರೆ ಬಾಗಿಲಿಗೆ ಬೀಗ, ಸೆಸ್ ಬಾಕಿ ಇದ್ರೂ ಕಿರಿಕಿರಿ ಕೊಡುತ್ತೆ. ಆದರೆ ಐನೂರು, ಸಾವಿರ ಬಿಲ್ ಕಟ್ಟದ ಜನರ ಮೇಲೆ ಗರಂ ಆಗೋ ಬಿಬಿಎಂಪಿ ಇಂದಲೇ ಕೋಟಿ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಜಲ ಮಂಡಳಿಗೆ ಬಿಬಿಎಂಪಿ ಬರೊಬ್ಬರಿ 6.40 ಕೋಟಿ ಬಿಲ್ ಬಾಕಿ ಹಾಗೂ ಇದಕ್ಕೆ ಬಿದ್ದಿರುವ 12.80 ಕೋಟಿ ಬಡ್ಡಿ ಸೇರಿದಂತೆ ಒಟ್ಟಾರೆ ಬಿಬಿಎಂಪಿಯಿಂದ BWSSBಗೆ 19.20 ಕೋಟಿ ರೂಪಾಯಿ ಬಾಕಿ ಇದೆ.

ಬಿಬಿಎಂಪಿ ಜೊತೆಗೆ ಇನ್ನೂ ಹಲವು ಇಲಾಖೆಗಳು ನೀರಿ ಬಿಲ್ ಕಟ್ಟಲು ಮೀನಾಮೇಷ ಎಣಿಸುತ್ತಿದೆ.‌ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣೆಯ ಶುಲ್ಕವೇ ಜಲಮಂಡಳಿಯ ಆದಾಯ ಮೂಲ. ಆದರೆ ಜಲಮಂಡಳಿಗೆ ವಿವಿಧ ಸರ್ಕಾರಿ ಇಲಾಖೆಗಳು ನೂರಾರು ಕೋಟಿ ಬಾಕಿ‌ ಉಳಿಸಿಕೊಂಡಿರುವುದು ಹೊರೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಧೀನದಲ್ಲಿರುವ ಇಲಾಖೆಗಳಿಂದ ಜಲಮಂಡಳಿಗೆ ಬಿಲ್ ಬಾಕಿ ಉಳಿಸಿಕೊಂಡಿದೆ. 147 ಕೋಟಿ ರೂಪಾಯಿ ಒಟ್ಟಾರೆ ಜಲ ಮಂಡಳಿಗೆ ಬೊಕ್ಕಸಕ್ಕೆ ಬರಬೇಕಿದೆ. ಕೇಂದ್ರ ಸರ್ಕಾರ ವ್ಯಾಪ್ತಿಗೆ ಒಳಪಡುವ ಸಂಸ್ತೆಗಳಿಂದ 21.75 ಕೋಟಿ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಂಸ್ಥೆಗಳಿಂದ 71.61 ಕೋಟಿ ರೂಪಾಯಿ ಬಾಕಿ ಇದೆ.  

ವಾಟರ್ ಬಿಲ್ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳು

ಇಲಾಖೆಗಳು – ಬಾಕಿ – ಬಡ್ಡಿ –  ಒಟ್ಟು ಮೊತ್ತ (ಕೋಟಿ ರೂ.)

ಕೇಂದ್ರ ಸರಕಾರ – 15.97 – 3.19  – 21.75

ರಾಜ್ಯ ಸರಕಾರ – 45.92  – 24.69 –  71.61

ಬಿಬಿಎಂಪಿ – 6.40 –  12.80 –  19.20

ಶಾಸನಬದ್ಧ ಸಂಸ್ಥೆಗಳು –  4.76 –  3.15 – 8.39

ಪೊಲೀಸ್‌ ಇಲಾಖೆ – 49.73 ಕೋಟಿ ರೂ.

ರೈಲ್ವೆ ಇಲಾಖೆ – 18.73 ಕೋಟಿ ರೂ.

ಶಿಕ್ಷಣ ಇಲಾಖೆ – 9.58 ಕೋಟಿ ರೂ.

ಆರೋಗ್ಯ ಇಲಾಖೆ – 3.38 ಕೋಟಿ ರೂ.

ಲೋಕೋಪಯೋಗಿ -3.64 ಕೋಟಿ ರೂ.

12.80 ಕೋಟಿ ರೂಪಾಯಿ ಜನರ ತೆರಿಗೆ ಪೋಲು ಮಾಡಿದ ಬಿಬಿಎಂಪಿ

ಜಲ ಮಂಡಳಿಗೆ ಬಿಬಿಎಂಪಿ ಬಿಲ್ ಕಟ್ಟಬೇಕಿರುವುದು 6.40 ಕೋಟಿ ರೂಪಾಯಿ. ಆದರೆ ಸರಿಯಾದ ಸಮಯಕ್ಕೆ ಕಟ್ಟದೆ ಇದ್ದಿದ್ದರಿಂದ ಬಾಕಿ ಮೊತ್ತಕ್ಕೆ‌ ಬರೋಬ್ಬರಿ 12 ಕೋಟಿ‌ 80 ಲಕ್ಷ ರೂಪಾಯಿ ಬಡ್ಡಿ ಬಿದ್ದಿದೆ. ಇದೀಗ ಬಿಬಿಎಂಪಿ 12.80 ಕೋಟಿ ಬಡ್ಡಿ ಮೊತ್ತವನ್ನು ಜನರ ತೆರಿಗೆ ಹಣದಿಂದಲೇ ಪಾವತಿ ಮಾಡಬೇಕು. ಈ ಮೂಲಕ ಬಿಬಿಎಂಪಿ ಜನರ ದುಡ್ಡನ್ನು ಅನಗತ್ಯ ವ್ಯರ್ಥ ಮಾಡುತ್ತಿದೆ. ಒಟ್ಟಾರೆ ಈಗ ಬಿಬಿಎಂಪಿ  19 ಕೋಟಿ 20 ಲಕ್ಷ ರೂಪಾಯಿ ಜಲ ಮಂಡಳಿಗೆ ಪಾವತಿ ಮಾಡಬೇಕಾಗಿರುವ ಅನಿವಾರ್ಯ ಎದುರಾಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

The way to select a Free Anti-virus Program

Next Post

ಗುಜರಾತ್‌ ಚುನಾವಣೆ ಹಿನ್ನೆಲೆ: ಬಿಲ್ಕೀಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಕುರಿತು ಎಎಪಿಯ ಜಾಣಮೌನ

Related Posts

ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ
ಕರ್ನಾಟಕ

ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ

by ಪ್ರತಿಧ್ವನಿ
June 22, 2026
0

ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ದಲಿತ, ಬಹುಜನ ಹಾಗೂ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿ ಹೊಸ ರಾಜಕೀಯ...

Read moreDetails
“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

June 21, 2026
BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

June 21, 2026
BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

June 20, 2026
ʼಇದು ನಮ್ಮ ಐದಾರು ಜನರ ನಡುವಿನ ಗುಟ್ಟುʼ: ಸುಳಿವು ಬಿಟ್ಟುಕೊಟ್ಟ ಡಿ.ಕೆ ಶಿವಕುಮಾರ್

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪ್ರಜಾಸೇವೆ ಇಲಾಖೆ: ಸಿಎಂ ಡಿ.ಕೆ ಶಿವಕುಮಾರ್

June 20, 2026
Next Post
ಗುಜರಾತ್‌ ಚುನಾವಣೆ ಹಿನ್ನೆಲೆ: ಬಿಲ್ಕೀಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಕುರಿತು ಎಎಪಿಯ ಜಾಣಮೌನ

ಗುಜರಾತ್‌ ಚುನಾವಣೆ ಹಿನ್ನೆಲೆ: ಬಿಲ್ಕೀಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಕುರಿತು ಎಎಪಿಯ ಜಾಣಮೌನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada