ಇತ್ತೀಚಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಗಾಯದ ಸಮಸ್ಯೆ ತಂಡವನ್ನ ಕಾಡುತ್ತಿದ್ದು ಸ್ಟಾರ್ ಆಟಗಾರರ ಮೇಲೆ ಹೆಚ್ಚಿನ ಪರಿಣಾಮವನ್ನ ಬೀರುತ್ತಿದೆ.
ಇತ್ತೀಚಿಗೆ ಅಪಘಾತಕ್ಕೀಡಾಗಿದ್ದ ವಿಕೆಟ್ಕೀಪರ್ ಬ್ಯಾಟ್ಸ್ಮ್ಯಾನ್ ರಿಷಭ್ ಪಂತ್ ಸಂಪೂರ್ಣವಾಗಿ ಗುಣಮುಖರಾಗಲು 9-12 ತಿಂಗಳು ಬೇಕಾಗುಬಹುದು ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಬೆನ್ನು ನೋವಿನ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ವಿರುದ್ದ ಸರಣಿಯಿಂದ ತಪ್ಪಿಸಿಕೊಂಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗದ ಕಾರಣ ಶ್ರೀಲಂಕಾ ವಿರುದದ್ದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಜನವರಿ 18ರಿಂದ ನ್ಯೂಜಿಲ್ಯಾಂಡ್ ವಿರುದ್ದ ನಡೆಯುವ ಸರಣಿಗೂ ಬುಮ್ರಾ ಲಭ್ಯರಾಗುವುದು ಅನುಮಾನ ಎಂದು ಹೇಳಲಾಗಿದ್ದು ಮುಂಬರುವ ಬಾರ್ಡರ್ ಗವಾಸ್ಕಾರ್ ಟ್ರೋಫಿ, ಐಪಿಎಲ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮೇಲೆ ಬುಮ್ರಾ ಅಲಭ್ಯತೆ ಹೆಚ್ಚು ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.