• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!

ಯದುನಂದನ by ಯದುನಂದನ
July 28, 2021
in ಕರ್ನಾಟಕ, ರಾಜಕೀಯ
0
ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!
Share on WhatsAppShare on FacebookShare on Telegram

ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರೂ ಬಿ.ಎಸ್. ಯಡಿಯೂರಪ್ಪ ತಮ್ಮ ಬೆಂಬಲಿಗ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಸೋತು ಗೆದ್ದಿದ್ದಾರೆ. ರಾಜಕೀಯದಲ್ಲಿ ‘ರಾಜಿ’ ಎಂಬುದು ಬಹಳ ಮಹತ್ವವಾದುದು. ರಾಜಿ ಮೂಲಕ ಸೋಲನ್ನು ಗೆಲುವಾಗಿಸಿಕೊಳ್ಳುವ ಅವಕಾಶ ಇರುತ್ತದೆ. ಅದು ನಾಯಕನ ನಡೆಗಳನ್ನು ಆಧರಿಸಿರುತ್ತದೆ. ಕರ್ನಾಟಕದ ಸದ್ಯದ ರಾಜಕೀಯ ಪ್ರಹಸನದಲ್ಲಿ ಬಿ.ಎಸ್. ಯಡಿಯೂರಪ್ಪ ಅಂತಹ ನಾಜೂಕಿನ ನಡೆ ಇಟ್ಟಿದ್ದಾರೆ. ತನ್ಮೂಲಕ ‘ಪ್ರಬಲ’ ಎಂದು‌ ಕರೆಯಲ್ಪಡುವ ಬಿಜೆಪಿ ಹೈಕಮಾಂಡಿನ ಎದುರು ಗೆದ್ದು ಬೀಗಿದ್ದಾರೆ.

ADVERTISEMENT


ಅನಿವಾರ್ಯವಾಗಿದ್ದ ಸೋಲು!


ಗೆದ್ದಿರುವ ಬಿ.ಎಸ್. ಯಡಿಯೂರಪ್ಪ ಸೋತಿದ್ದಾದರೂ ಏಕೆ ಎಂಬ ಪ್ರಶ್ನೆ ಹುಟ್ಟುವುದು ಸಹಜ.‌ ಆದರೆ ಆಪರೇಷನ್ ಕಮಲ ನಡೆಸಿ, ಕೆಸರನ್ನು ತಮ್ಮ ಮುಖಕ್ಕೆ ಬಳಿದುಕೊಂಡು ತಂದಿದ್ದ ಅಧಿಕಾರ ಅವರ ಪಾಲಿಗೆ ತಾತ್ಕಾಲಿಕವಾಗಿತ್ತು. ಮುಖ್ಯಮಂತ್ರಿ ಗದ್ದುಗೆ ಏರುವ ಮುನ್ನವೇ ಇಳಿಯುವ ಸಮಯದ ಬಗ್ಗೆ ಹೈಕಮಾಂಡ್ ಸೂಚನೆ ನೀಡಿತ್ತು. ಹಾಗೆ ನೋಡಿದರೆ ಕಾಲಕಾಲಕ್ಕೆ ಯಡಿಯೂರಪ್ಪ ಉರುಳಿಸಿದ ದಾಳಗಳಿಂದಾಗಿ ಅವರು ನಿಗದಿತ ಸಮಯಕ್ಕಿಂತ ಹೆಚ್ಚೇ ಅಧಿಕಾರ ಅನುಭವಿಸಿದ್ದಾರೆ. ಈಗ ಕಾಲ ಮೀರಿತ್ತು. ಆದುದರಿಂದ ಅವರು ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು.


ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರಿಗೆ ಅವಧಿ ನಿಗಧಿ ಮಾಡುವ ಅಗತ್ಯ ಏನಿತ್ತು? ಅವರಿಗೆ ಅಧಿಕಾರ ಬಿಟ್ಟುಕೊಡುವ ಅನಿವಾರ್ಯತೆ ಏನಿತ್ತು ಎಂಬ ಉಪ ಪ್ರಶ್ನೆಗಳು ಹುಟ್ಟುವುದು ಕೂಡ ಸಹಜ. ಬಿಜೆಪಿಗೆ ಅಧಿಕಾರದ ಜೇನುಣಿಸಿದ ಯಡಿಯೂರಪ್ಪ ಪ್ರಮಾದಗಳನ್ನೂ ಮಾಡಿದ್ದಾರೆ. ಅದೇ ಕಾರಣಕ್ಕೆ ಮೊದಲ ಅವಧಿಯಲ್ಲಿ ಅವರು ಅಧಿಕಾರ ಕಳೆದುಕೊಂಡರು ಎಂಬುದು ಇತಿಹಾಸ. ಇನ್ನೊಂದೆಡೆ ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಿದ್ದರು. ಆಗಲೂ ಸೋತು ಗೆದ್ದು ಬೀಗಿದ್ದವರು ಯಡಿಯೂರಪ್ಪ. ಕೆಜೆಪಿಯಿಂದ ಬಿಜೆಪಿಗೆ ಬಂದಿದ್ದ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರಿಗೆ ಒಂದು ವರ್ಷದ ಸಮಯದವರೆಗೆ ಅವಕಾಶ ನೀಡಲಾಗಿತ್ತು. 


ಪುತ್ರ ತಂದ ಆಪತ್ತು!


ಯಡಿಯೂರಪ್ಪ ಬಗ್ಗೆ ಯಾರಿಗೂ ಅಪಸ್ವರಗಳು ಇರಲಿಲ್ಲ‌. ಆದರೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಬಗ್ಗೆ ವ್ಯಾಪಕವಾದ ಟೀಕೆ ಟಿಪ್ಪಣಿಗಳಿದ್ದವು. ಯಡಿಯೂರಪ್ಪ ಸರ್ಕಾರ ಎಂಬುದಕ್ಕಿಂತ ವಿಜಯೇಂದ್ರ ಸರ್ಕಾರ ಎನ್ನುವ ರೀತಿ ಆಗಿತ್ತು. ಕರೋನಾದಂತಹ ಕಡುಕಷ್ಟದ ಸಂದರ್ಭದಲ್ಲೂ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲಾಯಿತು. ಸಚಿವರು, ಶಾಸಕರು ವಿಜಯೇಂದ್ರ ಬಳಿ ಅವರ ಇಲಾಖೆಯ ಕೆಲಸಗಳಿಗೆ, ಅನುದಾನಕ್ಕೆ, ಅಧಿಕಾರಿಗಳ ವರ್ಗಾವಣೆಗೆ ಪರಿಪರಿಯಾಗಿ ಬೇಡಿಕೊಳ್ಳುವಂತಹ ಪರಿಸ್ಥಿತಿ ಇತ್ತು. ಇದರಿಂದಾಗಿ ದಿನೇ ದಿನೇ ಯಡಿಯೂರಪ್ಪ ವಿರುದ್ಧದ ಅಸಮಾಧಾನ ಹೆಚ್ಚಾಗಿ ಕಡೆಗೆ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ವಿಜಯೇಂದ್ರ ಉತ್ತಮವಾಗಿ ನಡೆದುಕೊಂಡಿದ್ದರೆ, ಅಪ್ಪನ ನೆರಳಲ್ಲಿ ನಿಧಾನಕ್ಕೆ ಬೇರೂರಲು ಯತ್ನಿಸಿದ್ದರೆ ಬಹುಶಃ ಚಿತ್ರಣ ಬದಲಾಗಿರುತ್ತಿತ್ತೇನೋ.


ಕಿಂಗ್ ಆಗಿದ್ದ ಯಡಿಯೂರಪ್ಪ ಈಗ ಕಿಂಗ್ ಮೇಕರ್!


ಹಿಂದಿನ ಅವಧಿಯಲ್ಲೂ ಯಡಿಯೂರಪ್ಪ ಮೊದಲಿಗೆ ಕಿಂಗ್ ಆಗಿದ್ದರು. ಬಳಿಕ ಕಿಂಗ್ ಮೇಕರ್ ಆದರು‌‌. ಈಗ ಈವರೆಗೆ ಕಿಂಗ್ ಆಗಿದ್ದರು. ಮುಂದೆ ಕಿಂಗ್ ಮೇಕರ್ ಆಗಲಿದ್ದಾರೆ. ಹೈಕಮಾಂಡ್ ಹೇಳಿದಂತೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟು ಬೆಂಬಲಿಗನನ್ನು ಮುಖ್ಯಮಂತ್ರಿ ಮಾಡಿ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಮೊದಲಿನಿಂದಲೂ ಸಂಚು ಹೂಡಿದ್ದ ಬಿ‌.ಎಲ್. ಸಂತೋಷ್ ಎದುರು ತನ್ನ ಶಕ್ತಿ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಎದುರು ಫೆಲವವಾದ ಅರವಿಂದ ಬೆಲ್ಲದ್ ಅವರನ್ನು ಅಖಾಡಕ್ಕಿಳಿಸಿ ಆಟ ನೋಡುತ್ತಿದ್ದವರಿಗೆ ಕಡೆ ಗಳಿಗೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ.


ಅಸಲಿ ಆಟ ಶುರು!


ರಾಜ್ಯದಲ್ಲಿ ಈಗಿರುವುದು ವಲಸಿಗರು ಮತ್ತು ಬಿಜೆಪಿ ಮೈತ್ರಿ ಸರ್ಕಾರ. 17 ಜನರ ಪೈಕಿ ಹತ್ತನ್ನೆರಡು ಮಂದಿಗೆ ಮಂತ್ರಿ ಸ್ಥಾನ ಕೊಡಬೇಕು. ಆಗ ಮೂಲ ಬಿಜೆಪಿಯ ಅರ್ಹರಿಗೆ ಅವಕಾಶ ತಪ್ಪುತ್ತವೆ. ಇದು ಮತ್ತೆ ಅನಿಶ್ಚಿತ ವಾತಾವರಣ ಸೃಷ್ಟಿ ಆಗಲು ಎಡೆಮಾಡಿಕೊಡುತ್ತದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸುಗಮವಾಗಿ ಸರ್ಕಾರ ನಡೆಯುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ.‌ ಆದುದರಿಂದ ಯಡಿಯೂರಪ್ಪ ತಮ್ಮ ಆಟ ಆಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲಿಗೆ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡರೂ ಅವರ ಪ್ರಭಾವ ತಪ್ಪಿಸಲು ಬಿಜೆಪಿ ಹೈಕಮಾಂಡಿಗೆ ಕಡೆಗೂ ಸಾಧ್ಯವಾಗಲೇ ಇಲ್ಲ.

Previous Post

ಇಂದಿನ CMಗೆ ಒಳ್ಳೆಯ ಹಿನ್ನೆಲೆಯಿದೆ, ಹೇಗೆ ಉಪಯೋಗಿಸಿಕೊಳ್ಳುತ್ತಾರೆಂದು ಕಾಲವೇ ಹೇಳಬೇಕು – ಪುರುಷೋತ್ತಮ ಬಿಳಿಮಲೆ

Next Post

ಕೇರಳದಲ್ಲಿ ತಣ್ಣಗಾಗದ ಕೋವಿಡ್ ಸೋಂಕು; ಕಡಿಮೆಯಾಗದ ಆತಂಕ

Related Posts

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
0

ಮೇಷ ರಾಶಿಯ ಇಂದಿನ ಭವಿಷ್ಯ ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮ ಸತತ ಪರಿಶ್ರಮಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಮತ್ತು ಪ್ರೋತ್ಸಾಹ...

Read moreDetails
ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

January 28, 2026
ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

January 27, 2026
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

January 27, 2026
Next Post
ಕೇರಳದಲ್ಲಿ ತಣ್ಣಗಾಗದ ಕೋವಿಡ್ ಸೋಂಕು; ಕಡಿಮೆಯಾಗದ ಆತಂಕ

ಕೇರಳದಲ್ಲಿ ತಣ್ಣಗಾಗದ ಕೋವಿಡ್ ಸೋಂಕು; ಕಡಿಮೆಯಾಗದ ಆತಂಕ

Please login to join discussion

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
Top Story

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌
Top Story

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

by ಪ್ರತಿಧ್ವನಿ
January 27, 2026
ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 27, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

January 28, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada