• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಕೇರಳದಲ್ಲಿ ತಣ್ಣಗಾಗದ ಕೋವಿಡ್ ಸೋಂಕು; ಕಡಿಮೆಯಾಗದ ಆತಂಕ

Shivakumar A by Shivakumar A
July 28, 2021
in Uncategorized
0
ಕೇರಳದಲ್ಲಿ ತಣ್ಣಗಾಗದ ಕೋವಿಡ್ ಸೋಂಕು; ಕಡಿಮೆಯಾಗದ ಆತಂಕ
Share on WhatsAppShare on FacebookShare on Telegram

ಕೇರಳದಲ್ಲಿ ಕರೋನಾ ಸೋಂಕು ಕೈಮೀರಿ ಹೋಗುತ್ತಿರುವ ಸೂಚನೆಗಳು ಲಭಿಸುತ್ತಿವೆ. ದೇಶದ ಹಲವು ರಾಜ್ಯಗಳಲ್ಲಿ ಕೇವಲ ಮೂರಂಕಿಗಳಲ್ಲಿ ಪ್ರತಿದಿನದ ಕರೋನಾ ಪ್ರಕರಣಗಳು ವರದಿಯಾಗುತ್ತಿದ್ದರೆ, ಕೇರಳದಲ್ಲಿ ಮಾತ್ರ ಪ್ರತಿನಿತ್ಯ 10,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. 

ADVERTISEMENT

ಕಳೆದ ವರ್ಷ ಕರೋನಾ ಸೋಂಕು ನಿಯಂತ್ರಣಕ್ಕೆ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ವಿಶ್ವದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ಎರಡನೇ ಅಲೆಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಮಾತ್ರ ಕೇರಳ ವಿಫಲವಾಗಿರುವಂತೆ ಭಾಸವಾಗುತ್ತಿದೆ. ಈಗ ದೇಶದ 40% ಕೋವಿಡ್ ಪ್ರಕರಣಗಳು ಕೇವಲ ಕೇರಳದಲ್ಲಿವೆ. ಕಳೆದ ಒಂದು ವಾರದಲ್ಲಿ ಕೇರಳದಲ್ಲಿ 1,10,593 ಪ್ರಕರಣಗಳು ವರದಿಯಾಗಿವೆ. ಸದ್ಯಕ್ಕೆ ಕೇರಳದ ಪಾಸಿಟಿವಿಟಿ ರೇಟ್ 11%ದಷ್ಟಿದೆ. 

ಲಸಿಕಾಕರಣದ ವಿಚಾರಕ್ಕೆ ಬಂದಾಗ ಕೇರಳದಲ್ಲಿ ದೇಶದ ಉಳಿದೆಲ್ಲಾ ರಾಜ್ಯಗಳಿಗಿಂತ ತ್ವರಿತ ಗತಿಯಲ್ಲಿ ಲಸಿಕಾ ಅಭಿಯಾನ ಸಾಗುತ್ತಿದೆ. ಹದಿನೆಂಟು ವರ್ಷ ಮೇಲ್ಪಟ್ಟ 20.9% ಜನರಿಗೆ ಈಗಾಗಲೇ ಸಂಪೂರ್ಣವಾಗಿ ಲಸಿಕೆಯನ್ನು ನೀಡಲಾಗಿದೆ. ಆದರೆ, ICMR ನಡೆಸಿರುವ ಸಿರೋ ಸರ್ವೆಯ ಪ್ರಕಾರ, ರಾಜ್ಯದಲ್ಲಿ ಲಸಿಕೆ ಪಡೆದ ಕೇವಲ 42.7% ಜನರಲ್ಲಿ ಮಾತ್ರ ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಕರೋನಾ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 

ಈ ಕುರಿತಾಗಿ ಮಾಹಿತಿ ನೀಡಿರುವ ತಿರುವಂತನಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಉಪ ಅಧೀಕ್ಷಕರಾದ ಡಾ. ಸಂತೋಷ್ ಕುಮಾರ್ ಅವರು, ಕಳೆದ ಆರು ವಾರಗಳಿಂದ ಪಾಸಿಟಿವಿಟಿ ರೇಟ್ 10-12%ದಷ್ಟಿದೆ. ಪ್ರತಿದಿನ 10,000-15000ಪ್ರಕರಣಗಳು ವರದಿಯಾಗುತ್ತಿದೆ. ಆದರೆ, ಕರೋನಾದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿಂದೆ 800-1000ದಷ್ಟಿದ್ದ ಈ ಸಂಖ್ಯೆ, ಈಗ 250-300ಕ್ಕೆ ಬಂದು ನಿಂತಿದೆ, ಎಂದು ಹೇಳಿದ್ದಾರೆ. 

“ಲಸಿಕೆಯ ಪ್ರಭಾವವನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಉದಾಹರಣೆಯೆಂದರೆ, 50% ವೆಂಟಿಲೇಟರ್ ಮಾತ್ರ ಬಳಸಲಾಗುತ್ತಿದೆ, 50%ದಷ್ಟು ಐಸಿಯು ಮಾತ್ರ ಭರ್ತಿಯಾಗಿದೆ. ಹೀಗಾಗಿ ಹೆಚ್ಚಿನ ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶ್ಪತ್ರೆಗೆ ಬರುವ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ. 

ಇನ್ನು NDTV ಜತೆ ಮಾತನಾಡಿರುವ ಕೇರಳದ ಆರೋಗ್ಯ ಮಂತ್ರಿಯಾಗಿರುವ ವೀಣಾ ಜೋರ್ಜ್ ಅವರು “ಮೊದಲನೇ ಅಲೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಇದು ಆತಂಕಪಡಬೇಕಾದ ವಿಚಾರವಲ್ಲ. ಸೋಂಕಿನ ತೀವ್ರತೆ ಗಣನೀವಾಗಿ ಇಳಿಕೆಯಾಗಿದೆ. ಆದರೆ, ಎರಡನೇ ಅಲೆಯ ಕೊನೆಗೊಳ್ಳುವಿಕೆ ಸ್ವಲ್ಪ ಮುಂದೂಡಲ್ಪಟ್ಟಿದೆ,” ಎಂದು ಅವರು ಹೇಳಿದ್ದಾರೆ. 

ಕೋವಿಡ್ ಎರಡನೇ ಅಲೆ ಏಪ್ರಿಲ್ ಮಧ್ಯ ಭಾಗದಲ್ಲಿ ಕೇರಳವನ್ನು ಅಪ್ಪಳಿಸಿತ್ತು, ಮೇ 12ರ ವೇಳೆಗೆ ಅದು ಉತ್ತುಂಗಕ್ಕೆ ಏರಿತ್ತು. ಪ್ರತಿ ದಿನ 43,000 ಪ್ರಕರಣಗಳು ವರದಿಯಾಗುತ್ತಿದ್ದವು. ಈಗ 10,000 ಪ್ರಕರಣಗಳು ವರದಿಯಾಗುತ್ತಿದೆ. ಇದು ನಮ್ಮ ಯೋಜನೆಯ ಭಾಗವೇ ಆಗಿತ್ತು. ನಾವು ಎರಡನೇ ಅಲೆಯು ಉತ್ತುಂಗಕ್ಕೆ ಏರುವ ಸಮುಯವನ್ನು ಮುಂದೂಡಲು ಯತ್ನಿಸಿದೆವು. ಈಗ ಅದರ ಕೊನೆಯೂ ಮುಂದೂಡಲ್ಪಡುತ್ತಿದೆ, ಎಂದು ವಿಶ್ಲೇಷಿಸಿದ್ದಾರೆ. 

ಜನಸಂಖ್ಯೆಯ ಪ್ರಮಾಣ ದೇಶದ ಸರಾಸರಿಗಿಂತ ಕೇರಳದಲ್ಲಿ ದುಪ್ಪಟ್ಟಿದೆ. ಇದರೊಂದಿಗೆ, ರಾಜ್ಯದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಮಗಿರುವ ಅತೀ ದೊಡ್ಡ ಸವಾಲುಗಳು, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

Previous Post

ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!

Next Post

ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ ‘ರಾಜಾಹುಲಿ’ಯ ಅಸಲೀ ಆಟ ಈಗ ಆರಂಭವಾಗಿದೆ..

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ ‘ರಾಜಾಹುಲಿ’ಯ ಅಸಲೀ ಆಟ ಈಗ ಆರಂಭವಾಗಿದೆ..

ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ 'ರಾಜಾಹುಲಿ'ಯ ಅಸಲೀ ಆಟ ಈಗ ಆರಂಭವಾಗಿದೆ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada