• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಯಾರಿಗೂ ಮಾಹಿತಿ ನೀಡದೆ ರಾಜ್ಯ ಪ್ರವಾಸಕ್ಕೆ ಬಿಎಸ್‌ವೈ ತಯಾರಿ ಬಿಜೆಪಿ ನಾಯಕರಲ್ಲಿ ಭಾರೀ ಆತಂಕ

ನಚಿಕೇತು by ನಚಿಕೇತು
September 26, 2021
in ಕರ್ನಾಟಕ, ರಾಜಕೀಯ
0
ಯಾರಿಗೂ ಮಾಹಿತಿ ನೀಡದೆ ರಾಜ್ಯ ಪ್ರವಾಸಕ್ಕೆ ಬಿಎಸ್‌ವೈ ತಯಾರಿ ಬಿಜೆಪಿ ನಾಯಕರಲ್ಲಿ ಭಾರೀ ಆತಂಕ
Share on WhatsAppShare on FacebookShare on Telegram

ಸಿಎಂ ಕುರ್ಚಿಯಿಂದ ಕೆಳಗಿಳಿದರೂ, ನಾಯಕತ್ವದ ಹೊರೆ ಕಳಚಿಟ್ಟರೂ ಬಿ.ಎಸ್ ಯಡಿಯೂರಪ್ಪ ಹುಮ್ಮಸ್ಸು, ವರ್ಚಸ್ಸು ಎಂದೂ ಕಡಿಮೆಯಾಗೋದಿಲ್ಲ. ಈಗಿನಿಂದಲೇ ಪಕ್ಷ ಸಂಘಟಿಸಿ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಿಎಸ್‌ವೈ ಪಣ ತೊಟ್ಟಿದ್ದಾರೆ. ಇದಕ್ಕೆ ರಾಜ್ಯ ಪ್ರವಾಸವನ್ನೇ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಸದ್ಯ ಇದೇ ಕಮಲ ಮನೆಯಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ರಾಜ್ಯ ಬಿಜೆಪಿಗೆ ಇವರೇ ಹಿರಿಯ ನಾಯಕ. ಹೀಗಂತ ಖುದ್ದು ಹೈಕಮಾಂಡೇ ಹೇಳಿರೋದು ಎಲ್ಲರಿಗೂ ಗೊತ್ತೇ ಇದೆ. ರಾಜ್ಯ ಪ್ರವಾಸ ಮಾಡುವ ಬಿಎಸ್‌ವೈ ಇರಾದೆಗೂ ನಮ್ಮ ಅನುಮತಿ ಯಾಕೆ ಬೇಕು ಎಂದು ಬಿಜೆಪಿ ವರಿಷ್ಠರೇ ಹೇಳಿದ್ದಾರೆ. ಏಕೆಂದರೆ, ಈಗಾಗಲೇ ಬಿಎಸ್‌ವೈ ರನ್ನ ಕೆಳಗಿಳಿಸಿದಕ್ಕೆ ಎದ್ದಿರುವ ಅಸಮಾಧಾನ ಪಕ್ಷದ ಒಳಗೊಳಗೆ ಇದ್ದೇ ಇದೆ.

ಈಗ ರಾಜ್ಯ ಪ್ರವಾಸ ತಡೆದರೆ 2023ರ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಗುವುದು ಬಹುತೇಕ  ಖಚಿತ ಎಂಬುದು ಹೈಕಮಾಂಡ್ ಚಿಂತೆ.
ಹೀಗಾಗಿ ಬಿಎಸ್‌ವೈ ರಾಜ್ಯ ಪ್ರವಾಸ ತಡೆಯಲು ಹಿಂದೆ ಮುಂದೆ ನೋಡುತ್ತಿದೆ. ನೀವು ರಾಜ್ಯ ಪ್ರವಾಸ ಮಾಡಿ ಎಂದು ಹೇಳಿದೆ, ಮಾಡಬೇಡಿ ಎಂದು ಸೂಚಿಸದೆ ಹೈಕಮಾಂಡ್ ಜಾಣ ನಡೆ ತೋರುತ್ತಿದೆ. ಇದರ ಬೆನ್ನಲ್ಲೇ ಬಿಎಸ್‌ವೈ ಮತ್ತಷ್ಟೂ ಹುಮ್ಮಸ್ಸಿನಿಂದಲೇ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ.

ಯಡಿಯೂರಪ್ಪ ಗಣೇಶ ಚತುರ್ಥಿ ಬಳಿಕ ರಾಜ್ಯ ಪ್ರವಾಸ ಅಂದಿದ್ರು. ಆದರೆ, ಇನ್ನೂ ಕೂಡ ಪ್ರವಾಸ ಆರಂಭವಾಗಿಲ್ಲ. ಈ ನಡುವೆಯೇ ರಾಜ್ಯ ಪ್ರವಾಸಕ್ಕೆ ಬಿಎಸ್‌ವೈ ಭರದ ಸಿದ್ಧತೆ ನಡೆಸಿಕೊಂಡಿದ್ದಾರೆ. ನಾಯಕತ್ವ ಬಿಟ್ಟುಕೊಟ್ಟರೂ 2023ರ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದೇ ತೀರುತ್ತೇನೆ ಅಂತ ಪಣ ತೊಟ್ಟಿದ್ದಾರೆ. ಈ ಮೂಲಕ ವಯಸ್ಸಾದರೂ ನನ್ನ ವರ್ಚಸ್ಸು ಕಡಿಮೆಯಾಗಿಲ್ಲ ಎಂದು ಸಂದೇಶ ಸಾರಲು ಮುಂದಾಗಿದ್ದಾರೆ. ಇದೀಗ ಕಮಲ ಪಡೆಯನ್ನ ಗೊಂದಲಕ್ಕೀಡು ಮಾಡಿದೆ.

ಬಿಜೆಪಿ ನಾಯಕರಲ್ಲಿ ಇರುವ ಗೊಂದಲವೇನು?

1. ಬಿಎಸ್ವೈ ರಾಜ್ಯ ಪ್ರವಾಸ ಹೇಗಿರುತ್ತೆ ಅನ್ನೋ ಅಧಿಕೃತ ಮಾಹಿತಿ ಸಿಕ್ಕಿಲ್ಲ
2. ಯಡಿಯೂರಪ್ಪ ರಾಜ್ಯ ಪ್ರವಾಸ ಯಾವಾಗ ಆರಂಭ? ಎಲ್ಲಿಂದ ಆರಂಭ?
3. ಯಾವೆಲ್ಲಾ ಕ್ಷೇತ್ರಗಳಿಗೆ ಬಿಎಸ್‌ವೈ ಭೇಟಿ ಕೊಡ್ತಾರೆ? ನಿಗಾವಹಿಸುತ್ತಾರೆ?
4. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯತ್ತ ನಿಗಾವಹಿಸುವುದಾ?
5. ರಾಜ್ಯ ಪ್ರವಾಸದ ವೇಳೆ ಬಿಎಸ್‌ವೈ ನಮ್ಮ ಕ್ಷೇತ್ರಕ್ಕೇನಾದ್ರೂ ಬರ್ತಾರಾ?
6. ಒಂದು ವೇಳೆ ಬಂದರೆ ನಾವು ಪ್ರವಾಸದಲ್ಲಿ ಭಾಗಿಯಾಗಬೇಕಾ? ಬೇಡವಾ?
7. ನಳಿನ್‌ ಕುಮಾರ್ ಕಟೀಲ್ ಕೇಳಿ ಭಾಗಿಯಾಗೋ ಬಗ್ಗೆ ನಿರ್ಧರಿಸಬೇಕಾ?

ಹೌದು, ಬಿಎಸ್‌ವೈ ರಾಜ್ಯ ಪ್ರವಾಸ ಹೇಗಿರುತ್ತೆ ಅನ್ನೋ ಅಧಿಕೃತ ಮಾಹಿತಿ ಯಾರಿಗೂ ಸಿಕ್ಕಿಲ್ಲ. ಅಲ್ಲದೆ ರಾಜ್ಯ ಪ್ರವಾಸ ಯಾವಾಗ ಆರಂಭ? ಎಲ್ಲಿಂದ ಆರಂಭ ಅನ್ನೋದು ಇನ್ನೂ ಗೊತ್ತಾಗಿಲ್ಲ. ಯಾವೆಲ್ಲಾ ಕ್ಷೇತ್ರಗಳಿಗೆ ಬಿಎಸ್‌ವೈ ಭೇಟಿ ಕೊಡ್ತಾರೆ? ನಿಗಾವಹಿಸುತ್ತಾರೆ? ಎಂಬ ಬಗ್ಗೆಯೂ ಶಾಸಕರಿಗೆ ಸ್ಪಷ್ಟತೆ ಇಲ್ಲ. ಇದರ ನಡುವೆ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯತ್ತ ನಿಗಾವಹಿಸುವುದಾ? ಅಥವಾ ರಾಜ್ಯ ಪ್ರವಾಸದ ವೇಳೆ ಬಿಎಸ್‌ವೈ ನಮ್ಮ ಕ್ಷೇತ್ರಕ್ಕೇನಾದ್ರೂ ಬರುತ್ತಾರಾ? ಒಂದು ವೇಳೆ ಬಂದರೆ ನಾವು ಪ್ರವಾಸದಲ್ಲಿ ಭಾಗಿಯಾಗಬೇಕಾ? ಬೇಡವಾ? ಎನ್ನುವ ಗೊಂದಲ ಶಾಸಕರನ್ನು ಕಾಡುತ್ತಿದೆ.

ಹೀಗೆ ಬಿಎಸ್‌ವೈ ರಾಜ್ಯ ಪ್ರವಾಸದಿಂದ ಎದ್ದಿರುವ ಸಾಲು ಸಾಲು ಪ್ರಶ್ನೆಗಳಿಗೆ ಈವರೆಗೂ ಸಮರ್ಪಕವಾದ ಉತ್ತರ ಸಿಗದೆ ಬಿಜೆಪಿ ನಾಯಕರು ಹಾಗೂ ಶಾಸಕರು ಆತಂಕದಲ್ಲಿದ್ದಾರೆ. ಅತ್ತ ಹೈಕಮಾಂಡ್ ಏನೋ ಬಿಎಸ್‌ವೈ ಪ್ರವಾಸಕ್ಕೆ ನಮ್ಮ ಗ್ರೀನ್ ಸಿಗ್ನಲ್ ಬೇಡ ಅಂತ ಕೈ ತೊಳೆದುಕೊಂಡಿದೆ. ಇತ್ತ ಬಿಎಸ್‌ವೈ ಮಾತ್ರ ಯಾರಿಗೂ ಹೇಳದೆ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಇದರ ಹಿಂದೆ ತನ್ನ ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯದ ವಿಚಾರ ಇದ್ಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿದೆ. 

Tags: BJPKarnataka Stateನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ರೈತರ ಭಾರತ್ ಬಂದ್ ಬೆಂಬಲಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸೈಕಲ್ ಜಾಥ – ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ನಲಪಾಡ್ ಕಿಡಿ

Next Post

ಸದಾ ಸುಳ್ಳಿನೆಡೆಗೆ ಮುಖ ಮಾಡಿವ ʼಸಿದ್ದಹಸ್ತರಿಗೆʼ JDS ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ: ಅವರಿವರ ಜತೆ ಹೋಗುವ ಪಕ್ಷ ಎಂದ ಸಿದ್ದರಾಮಯ್ಯ ಹೇಳಿಕೆಗೆ HDK ತಿರುಗೇಟು

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
Next Post
ಸದಾ ಸುಳ್ಳಿನೆಡೆಗೆ ಮುಖ ಮಾಡಿವ ʼಸಿದ್ದಹಸ್ತರಿಗೆʼ JDS ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ: ಅವರಿವರ ಜತೆ ಹೋಗುವ ಪಕ್ಷ ಎಂದ ಸಿದ್ದರಾಮಯ್ಯ ಹೇಳಿಕೆಗೆ HDK ತಿರುಗೇಟು

ಸದಾ ಸುಳ್ಳಿನೆಡೆಗೆ ಮುಖ ಮಾಡಿವ ʼಸಿದ್ದಹಸ್ತರಿಗೆʼ JDS ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ: ಅವರಿವರ ಜತೆ ಹೋಗುವ ಪಕ್ಷ ಎಂದ ಸಿದ್ದರಾಮಯ್ಯ ಹೇಳಿಕೆಗೆ HDK ತಿರುಗೇಟು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!