ಬಿಎಸ್ವೈ ಸಚಿವ ಸಂಪುಟಕ್ಕೆ ಕೆಲವು ದಿನಗಳ ಹಿಂದೆ ಹೊಸದಾಗಿ ಏಳು ಸಚಿವರಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇತ್ತ ನೇಮಕಗೊಂಡ ಸಚಿವರುಗಳಿಗೆ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರ ಚಿತ್ತ ಖಾತೆ ಹಂಚಿಕೆಯತ್ತ ವಾಲಿತ್ತು. ಜನವರಿ21 ರಂದು ಹೊಸದಾಗಿ ನೇಮಕಗೊಂಡ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವುದಲ್ಲದೆ, ಹಾಲಿ ಸಚಿವರ ಖಾತೆ ಬದಲಾವಣೆಗೊಂಡಿದೆ.
ತೀವ್ರ ಕುತೂಹಲಕ್ಕೆ ಕಾರಣವಾದ ಖಾತೆ ಹಂಚಿಕೆ ವಿಚಾರ ಹಾಲಿ ಸಚಿವರುಗಳಿಗೆ ಅಸಮಾಧಾನ ಉಂಟುಮಾಡಿದೆ. ಜೆ.ಸಿ ಮಾಧುಸ್ವಾಮಿ, ಕೆ, ಸುಧಾರ್, ಗೋಪಾಲಯ್ಯ ಅವರು ಖಾತೆ ಹಂಚಿಕೆಯ ಕುರಿತು ಸಿಎಂ ಯಡಿಯೂರಪ್ಪ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೊಂದ ಹಾಲಿ ಸಚಿವರುಗಳಿಂದ ರಾಜೀನಾಮೆ ನೀಡುತ್ತೇವೆಂಬ ಮಾತುಗಳು ಕೇಳಿಬರುತ್ತಿವೆ.
7 ಜನ ಹೊಸ ಸಚಿವರುಗಳಿಗೆ ನೀಡಿದ ಖಾತೆಗಳ ವಿವರ
ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ
ಮುರುಗೇಶ್ ನಿರಾಣಿ – ಗಣಿ ಮತ್ತು ಭೂ ವಿಜ್ಞಾನ
ಎಂಟಿಬಿ ನಾಗರಾಜ್ – ಅಬಕಾರಿ
ಅರವಿಂದ ಲಿಂಬಾವಳಿ – ಅರಣ್ಯ
ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಸರಬರಾಜು
ಎಸ್ ಅಂಗಾರ ಮೀನುಗಾರಿಕೆ ಮತ್ತು ಬಂದರು
ಸಿ.ಪಿ ಯೋಗೇಶ್ವರ್ – ಸಣ್ಣ ನಿರಾವರಿ
ಹೊಸದಾಗಿ ಸಿದ್ಧಗೊಂಡ ಸಚಿವರ ಪಟ್ಟಿ
ಬದಲಾವಣೆಗೊಂಡ ಹಾಲಿ ಸಚಿವರ ಖಾತೆ
ಇದೀಗ ಸಿಎಂ ಯಡಿಯೂರಪ್ಪಾಗೆ ಮತ್ತೊಂದು ತಲೆನೋವು ಶುರುವಾಗಿದೆ. ಹೊಸದಾಗಿ ನೇಮಕಗೊಂಡ ಸಚಿವರು ಖಾತೆಯಲ್ಲಿ ಬದಲಾವಣೆ ಮಾಡುವಂತೆ ಒತ್ತಾಯ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಇತ್ತ ಹಾಲಿ ಸಚಿವರುಗಳು ಕೂಡ ಖಾತೆ ಬದಲಾವಣೆ ಮಾಡಿರುವಂತಹ ಸಿಎಂ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸುಧಾಕರ್ರವರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಕೊಡಲಾಗಿತ್ತು. ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆಯಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗು ಸಣ್ಣ ನೀರಾವರಿ ಸಚಿವರಾಗಿದ್ದ ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಬ್ದಾರಿ ನೀಡಲಾಗಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಗೋಪಾಲಯ್ಯ ಅವರಿಗೆ ತೋಟಕಾರಿಕೆ ಮತ್ತು ಸಕ್ಕರೆ ಕಾರ್ಖಾನೆ ನೀಡಲಾಗಿದೆ.