ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (congress) ಅಧಿಕಾರಕ್ಕೆ ಬಂದು, ನೂತನ ಸರ್ಕಾರ ರಚನೆಯ ನಂತರ, ಚುನಾವಣೆಗೂ ಮುನ್ನ ಘೋಷಿಸಿದ್ದ ಗ್ಯಾರಂಟಿ (congress Gurantee) ಯೋಜನೆಗಳನ್ನ ಜಾರಿಗೆ ತಂದಿದೆ. ಈ ವಿಚಾರ ಇದೀಗ ರಾಜ್ಯದಲ್ಲಿ ಪರ ವಿರೋಧದ ಚರ್ಚೆಗಳ ಜೊತೆಗೆ ಹಲವು ವಿವಾದಕ್ಕೆ ಕೂಡ ಕಾರಣವಾಗಿದೆ. ಇನ್ನು ಈ ಘೋಷಣೆ ತಡವಾಗಿದ್ದಕ್ಕೆ ಬಿಜೆಪಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ (bjp protest) ನಡೆಸೋದಕ್ಕೆ ಕೂಡ ತಯಾರಾಗಿತ್ತು.
ಆದ್ರೆ ಈಗ ಈ ಗ್ಯಾರಂಟಿ ಯೋಜನೆಯಲ್ಲಿ ಕೆಲವು ಕಂಡಿಷನ್ಸ್ಗಳನ್ನ (Conditions) ಕಾಂಗ್ರೆಸ್ ಹಾಕಿದೆ ಅನ್ನೋ ವಿಚಾರವನ್ನ ಹೊತ್ತುಕೊಂಡು ಬಿಜೆಪಿ ಪ್ರತಿಭಟಿಸುವ ಸಾಧ್ಯತೆ ಕೂಡ ಇದೆ. ಹೀಗಾಗಿ ಗ್ಯಾರಂಟಿ ಯೋಜನೆ ಅನ್ನೋದು ಕಾಂಗ್ರೆಸ್ಗೆ ಒಂದು ರೀತಿಯಲ್ಲಿ ತಲೆನೋವಿನ ಹಾಗೆ ಕಾಡ್ತಾ ಇದೆ. ಇದರ ಮಧ್ಯದಲ್ಲಿ ಇದೀಗ ಕಾಂಗ್ರೆಸ್ಗೆ ಮತ್ತೊಂದು ಭರವಸೆಯ ತಲೆನೋವು ಕಾಡುವ ಸಾಧ್ಯತೆ ಇದೆ.

ಹೌದು.. ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ವಿವಿಧ ಭರವಸೆಗಳನ್ನ ಕಾರ್ಮಿಕ ವರ್ಗ (labor) ಹಾಗೂ ರೈತ ವರ್ಗಕ್ಕೆ (farmer) ನೀಡಿತ್ತು ಅದರಲ್ಲಿ ಪ್ರಮುಖವಾಗಿ ಅಂಗನಾಡಿ ಕಾರ್ಯಕರ್ತರಿಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ (Anganwadi) ಕಾರ್ಯಕರ್ತರಿಗೆ ಎಲ್ಲಾ ರೀತಿಯಾದ ಸಹಕಾರವನ್ನ ನೀಡುವ ಭರವಸೆಯನ್ನ ಕೂಡ ಕಾಂಗ್ರೆಸ್ ನೀಡಿತ್ತು ಇದೀಗ ಇದೇ ವಿಚಾರ ಕಾಂಗ್ರೆಸ್ಗೆ ಹೊಸದೊಂದು ಸಂಕಷ್ಟವನ್ನ ತಂದಿದೆ.

ಹೌದು.. ಗ್ಯಾರಂಟಿ ಭರವಸೆಯನ್ನ ಈಡೇರಿಸಿದ ಬೆನ್ನಲ್ಲೇ ಸರ್ಕಾರಕ್ಕೆ ಇದೀಗ ಅಂಗನವಾಡಿ (Anganwadi) ಕಾರ್ಯಕರ್ತರ ಬೇಡಿಕೆ ಈಡೇರಿಸುವ ಕೆಲಸಕ್ಕೆ ಕೈ ಹಾಕಬೇಕಾಗಿದೆ. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರವನ್ನ ಮನವಿ ಮಾಡಿಕೊಂಡಿದ್ದು, ನಮ್ಮ ಬೇಡಿಕೆಯನ್ನ ಸರ್ಕಾರ ಈಡೇರಿಸಬೇಕು, ಈ ಹಿಂದೆ ಖಾನಪುರದಲ್ಲಿ ನಡೆದ ಸಮಾವೇಷದಲ್ಲಿ ಕಾಂಗ್ರೆಸ್ ನಮ್ಮ ಭರವಸೆಗಳನ್ನ ಈಡೇರಿಸುವುದಾಗಿ ಹೇಳಿತ್ತು, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆ ಮಾಡುತ್ತೇವೆ ಅಂತ ಹೇಳಿತ್ತು. ಅದರಲ್ಲೂ ಗೌರವಧನ 11,500 ರಿಂದ 15 ಸಾವಿರಕ್ಕೆ ಏರಿಕೆ ಮಾಡುವ ಭರವಸೆಯನ್ನ ಸ್ವತಃ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರೇ ಘೋಷಣೆ ಮಾಡಿದ್ರು ಹಾಗಾಗಿ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರ ನಮ್ಮ ಬೇಡಿಕೆಯನ್ನ ಈಡೇರಿಸ ಬೇಕು, ಅಂತ ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇದೀಗ ಗ್ಯಾರಂಟಿ ಯೋಜನೆಗಳನ್ನ ಘೋಷಿಸಿದ್ದ ಕಾಂಗ್ರೆಸ್ಗೆ, ಇದೀಗ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಹಲವು ವಿವಿಧ ಯೋಜನೆಗಳನ್ನ ಜಾರಿಗೆ ತರುವ ತಲೆಬಿಸಿ ಕೂಡ ಆರಂಭವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಯಾವ ರೀತಿಯಾದ ನಡೆಯನ್ನ ಅನುಸರಿಸಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.