ಇತ್ತೀಚಿಗೆ ಜಗತ್ತು ಅತ್ಯಾಧುನಿಕರಣ ಗೊಳ್ಳುತ್ತಿದೆ, ಯಾಂತ್ರಿಕ ಬದುಕಿಗೆ ಮಾನವ ಒಗ್ಗಿಕೊಳ್ಳುತ್ತಿರುವುದು ಹೊಸದೇನು ಅಲ್ಲ, ಈಗಾಗಲೇ ಯಾಂತ್ರಿಕ ವಿಚಾರದಲ್ಲಿ ಮಾನವ 10 ಹೆಜ್ಜೆ ಮುಂದಕ್ಕೆ ಹೋಗಿದ್ದಾನೆ ಎನ್ನಬಹುದು, ಆದರೂ ಯಾಂತ್ರಿಕತೆಯ ಬಗ್ಗೆ ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಮಾನವನಿಗೆ ಪರಿಚಯ ಆದಾಗಿನಿಂದ ಒಂದಲ್ಲ ಒಂದು ರೀತಿಯ ಹೊಸ ಆವಿಷ್ಕಾರಗಳು ಯಾಂತ್ರಿಕತೆಯಲ್ಲಿ ಆಗುತ್ತಿವೆ.
ಈಗಾಗಲೇ ಕೃತಕ ಬುದ್ಧಿಮತ್ತೆ (artificial intelligence) ಮಾನವನಿಗಿಂತಲೂ ಅತಿ ಹೆಚ್ಚು ಬುದ್ಧಿವಂತಿಕೆಯ (mechanical life) ಆವಿಷ್ಕಾರವನ್ನು ಮಾನವನೇ ನಿರ್ಮಿಸಿಕೊಂಡಿದ್ದಾನೆ ಅಂತ ಹೇಳಲಾಗುತ್ತೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ಇವತ್ತು (artificial intelligence) ಮಾನವನಿಗೆ ಬೇಕಾದ ಎಲ್ಲಾ ತರಹದ ಮಾಹಿತಿಗಳನ್ನು ಒದಗಿಸುತ್ತದೆ ಜೊತೆಗೆ ಮಾನವ ಹೇಳುವ ಎಲ್ಲಾ ಕೆಲಸಗಳನ್ನು ಯಂತ್ರಗಳ (machines) ಮೂಲಕ ಮಾಡುವ ಸಾಮರ್ಥ್ಯವನ್ನ ಈ ಕೃತಕ ಬುದ್ಧಿಮತ್ತೆ ಹೊಂದಿದೆ ಹೀಗಾಗಿನೇ ಕೃತಕ ಬುದ್ಧಿಮತ್ತೆ ಜಗತ್ತಿನ ಅತಿ ಭಯಾನಕ ಆವಿಷ್ಕಾರ ಅಂತ ಸಾಕಷ್ಟು ಮಂದಿ ಸಂಶೋಧಕರು ಹೇಳ್ತಾ ಇದ್ದಾರೆ.

ಅದರಲ್ಲೂ ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ಗಳು ಒಂದಾದರೆ ಈ ಜಗತ್ತಿನ ಅಳಿವನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಸಂಶೋಧಕರು ಅಭಿಪ್ರಾಯ ಪಡುತ್ತಿದ್ದಾರೆ. ಈಗಾಗಲೇ ಕೃತಕ ಬುದ್ಧಿಮತ್ತೆಯನ್ನ ಬಳಸಿಕೊಂಡು ವಿವಿಧ ರೀತಿಯ ಯಂತ್ರಗಳನ್ನು ಆವಿಷ್ಕಾರ ಮಾಡಲಾಗಿದೆ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗೋದು ಸಹಜವಾಗಿದೆ ಇದೀಗ ಇತ್ತೀಚಿಗೆ ಉದ್ಯಮಿ ಹರ್ಷ್ ಗೋಯಂಕ ಅವರು ಮಾಡಿರುವ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಟ್ವಿಟ್ ನೋಡಿದ ನೆಟ್ಟಿಗರು ಅಕ್ಷರಶಹ ಬೆಚ್ಚಿಬಿದ್ದಿದ್ದಾರೆ ಸಾಧಾರಣವಾಗಿ ಜಗತ್ತಿನಲ್ಲಿ ಮಗುವನ್ನ ಮರದ ಅಥವಾ ಕಬ್ಬಿಣದ್ದ ತೊಟ್ಟಿನಲ್ಲಿ ಆಡಿಸುವುದನ್ನ ನಾವು ನೀವು ಎಲ್ಲರೂ ನೋಡಿರುತ್ತೇವೆ ಆದರೆ ಇಲ್ಲೊಂದು ಮಹಾದಂಪತಿಗಳು ತಮ್ಮ ಮಗುವನ್ನು ಎಲೆಕ್ಟ್ರಿಕ್ ತೊಟ್ಟಿಲಿನಲ್ಲಿ (electronic cradle) ಮಲಗಿಸಿದ್ದಾರೆ ಇದೀಗ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದು ಈ ದಂಪತಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಟ್ವಿಟ್ ಅನ್ನ ಹಂಚಿಕೊಂಡಿರುವ ಉದ್ಯಮಿ ಹರ್ಷ್ ಗೋಯಂಕ ಈ ಮಗುವಿನ ಪೋಷಕರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಕಳೆದ ಎರಡು ದಿನಗಳ ಹಿಂದೆ ಹರ್ಷ ಗೋಯಂಕ್ ಈ ಟ್ವೀಟ್ ಮಾಡಿದ್ದರು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ವಿಡಿಯೋವನ್ನು ಕಂಡ ನೆಟ್ಟಿಗರು ಛಿಮಾರಿ ಹಾಕುತ್ತಿದ್ದಾರೆ.