ಲಸಿಕೆ ಖರೀದಿ ವ್ಯವಹಾರದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊನ ವಿರುದ್ಧ ತನಿಖೆ ಆರಂಭಿಸುವಂತೆ ಬ್ರೆಜಿಲ್‌ನ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಭಾರತ ಮೂಲದ ಕೋವಿಡ್ ಲಸಿಕೆ ‘ಕೋವಾಕ್ಸಿನ್’ ಖರೀದಿಸಲು ಭಾರತ್ ಬಯೋಟೆಕ್‌ನ ಕಂಪನಿಯೊಂದಿಗಿನ ಒಪ್ಪಂದದಲ್ಲಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಆರೋಪ ಕೇಳಿ ಬಂದಿದೆ.
COVID-19 ಸಾಂಕ್ರಾಮಿಕ ರೋಗವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬ ತನಿಖೆ ನಡೆಸುತ್ತಿರುವ ಸೆನೆಟ್ ಸಮಿತಿಯೊಂದಕ್ಕೆ ಇತ್ತೀಚೆಗೆ ನೀಡಿದ ಸಾಕ್ಷ್ಯದಿಂದ ತನಿಖೆಯನ್ನು ಬೆಂಬಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರೋಸಾ ವೆಬರ್ ಶುಕ್ರವಾರ ಹೇಳಿದ್ದಾರೆ.
ಜೂನ್ 25 ರಂದು, ಬ್ರೆಜಿಲ್‌ನ ಆರೋಗ್ಯ ಸಚಿವಾಲಯದ ಆಮದು ವಿಭಾಗದ ಮುಖ್ಯಸ್ಥ ಲೂಯಿಸ್ ರಿಕಾರ್ಡೊ ಮಿರಾಂಡಾ ಮತ್ತು ಅವರ ಸಹೋದರ (ಸಂಸದ) ಆರೋಪಗಳ ಬಗ್ಗೆ ಸೆನೆಟ್ ಸಮಿತಿಯ ಮುಂದೆ ಸಾಕ್ಷ್ಯ ನೀಡಿದರು. 20 ಮಿಲಿಯನ್ ಲಸಿಕೆ ಖರೀದಿಸಲು ಭಾರತದ ಕಂಪನಿ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಒತ್ತಡ ಹೇರಿದೆ ಎಂದು ಮಿರಾಂಡಾ ಆರೋಪಿಸಿದ್ದಾರೆ. ಇನ್‌ವಾಯ್ಸ್‌ನಲ್ಲಿನ “ಅಕ್ರಮಗಳನ್ನು” ಅವರು ಗುರುತಿಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರ ವಿಫಲವಾಗಿದೆ ಎಂದು ವ್ಯಾಪಕವಾಗಿ ಟೀಕಿಸಲಾಗುತ್ತಿರುವ ಮತ್ತು ಸೆನೆಟ್ ಸಮಿತಿಯಿಂದ ತನಿಖೆ ನಡೆಸುತ್ತಿರುವ ಇಂತಹ ಸಮಯದಲ್ಲಿಯೇ ಬೋಲ್ಸನಾರೊ ವಿರುದ್ಧದ ಈ ಆರೋಪಗಳು ಬಂದಿದ್ದು ತನಿಖೆಯನ್ನು ಎದುರಿಸಬೇಕಾಗಿದೆ.
ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡದ ಭಾರತ್ ಬಯೋಟೆಕ್;
ಬ್ರೆಜಿಲ್ ಕೋವಾಕ್ಸೈನ್ ಒಪ್ಪಂದದಲ್ಲಿ ಅಕ್ರಮಗಳ ಆರೋಪದ ಎದುರಾಗಿದ್ದು ಇದಕ್ಕೆ ಖುದ್ದು ಭಾರತ್ ಬಯೋಟೆಕ್ ಸ್ಪಷ್ಟೀಕರಣ ನೀಡಿದ್ದು, ಈ ಒಪ್ಪಂದ ಬಗ್ಗೆ “ಯಾವುದೇ ತಪ್ಪು ಗ್ರಹಿಕೆ ಬೇಡ” ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ. “ಬ್ರೆಜಿಲ್ ಆರೋಗ್ಯ ಸಚಿವಾಲಯವು ಕೊವಾಕ್ಸಿನ್ ಖರೀದಿಸುವ ಸಂದರ್ಭದಲ್ಲಿ, ನವೆಂಬರ್ 2020 ರ ಮೊದಲ ಸಭೆಯಿಂದ ಜೂನ್ 29 ರವರೆಗೆ, ಈ ಎಂಟು ತಿಂಗಳ ಪ್ರಕ್ರಿಯೆಯಲ್ಲಿ, ಒಪ್ಪಂದ ಮತ್ತು ನಿಯಂತ್ರಕ ಅನುಮೋದನೆಗಳತ್ತ ಹಂತ ಹಂತವಾಗಿ ಪ್ರಕ್ರಿಯೆಯಾಗಿದೆ”, ನಾವು ಈ ಹಂತ ವಿಧಾನವನ್ನು ಅನುಸರಿಸಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಜೂನ್ 4 ರಂದು ಇಯುಎ (ತುರ್ತು ಬಳಕೆಗೆ ಅನುಮೋದನೆ) ದೊರೆತಿದೆ ಎಂದು ಕಂಪನಿ ಹೇಳಿದೆ, “ಜೂನ್ 29 ರ ಹೊತ್ತಿಗೆ ಭಾರತ್ ಬಯೋಟೆಕ್‌ಗೆ ಯಾವುದೇ ಮುಂಗಡ ಪಾವತಿ ಮಾಡಲಾಗಿಲ್ಲ ಅಥವಾ ಲಸಿಕೆಯನ್ನು ಬ್ರೆಜಿಲ್ ಆರೋಗ್ಯ ಸಚಿವಾಲಯಕ್ಕೆ ಸರಬರಾಜು ಮಾಡಿಲ್ಲ.” ಎಂದಿದೆ.