• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸರ್ಕಾರಿ ಶಾಲೆ ಮಾರಾಟಕ್ಕಿಟ್ಟ ಬೊಮ್ಮಾಯಿ ಸರ್ಕಾರ

ಪ್ರತಿಧ್ವನಿ by ಪ್ರತಿಧ್ವನಿ
August 20, 2022
in ಕರ್ನಾಟಕ
0
ಸರ್ಕಾರಿ ಶಾಲೆ ಮಾರಾಟಕ್ಕಿಟ್ಟ ಬೊಮ್ಮಾಯಿ ಸರ್ಕಾರ
Share on WhatsAppShare on FacebookShare on Telegram

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಸರ್ಕಾರಿ ಶಾಲೆ 77 ವರ್ಷಗಳ ನಂತರ ಮಾರಾಟಕ್ಕಿದೆ. ಸರ್ಕಾರಿ ಶಾಲೆಯನ್ನು ಮಾರ್ತಿರೋದು ಕಂದಾಯ ಇಲಾಖೆ. ಹೌದು, ಸರ್ಕಾರಿ ಶಾಲೆಯೊಂದನ್ನು ಮಾರಾಟಕ್ಕಿಟ್ಟು ಜನರ ಕೆಂಗಣ್ಣಿಗೆ ಸರ್ಕಾರ ಈಗ ಗುರಿಯಾಗಿದೆ.

ADVERTISEMENT

ಸರ್ಕಾರಿ ಶಾಲೆಯನ್ನು ಮಾರಾಟಕ್ಕಿಟ್ಟ ಕಂದಾಯ ಇಲಾಖೆ

ಈ ಸರ್ಕಾರಿ ಶಾಲೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ.  ಈ ಜಾಗ ಇರೋದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕೆ.ಆರ್ ಮಾರ್ಕೆಟ್ ರೋಡ್ ಸರ್ಕಲ್ ನಲ್ಲಿ. ಸದ್ಯ ಇದು ಈಗ ರಜತಾದ್ರಿ ಕಾಂಫ್ಲೆಕ್ಸ್ ಆಗಿದೆ. 1945ರಲ್ಲಿ ದಾನಿಗಳು ಈ ಜಾಗವನ್ನು ಶಾಲೆಗಾಗಿ ದಾನವಾಗಿ ಕೊಡ್ತಾರೆ. 1945ರಲ್ಲೇ ಸರ್ಕಾರಿ ಫ್ರೌಡಶಾಲೆಯನ್ನು ಆರಂಭಮಾಡಲಾಗುತ್ತೆ. 77 ವರ್ಷಗಳಷ್ಟು ಹಳೆಯದಾದ ಜಾಗ 13, 735 ಚದರಡಿ ವಿಸ್ತೀರ್ಣದಲ್ಲಿದ್ದು, ಸದ್ಯ ಇಲ್ಲಿ 1 ಚದರಡಿಗೆ 40 ಸಾವಿರ ಬೆಲೆ ಬಾಳುತ್ತಿದ್ದು, ಮಾರುಕಟ್ಟೆ ಮೌಲ್ಯ 50 ಕೋಟಿಗೂ ಹೆಚ್ಚು. ಇದೀಗ ಈ ಜಾಗವನ್ನು ಸರ್ಕಾರದ ಕಂದಾಯ ಇಲಾಖೆ ಮಾರಾಟಕ್ಕಿಟ್ಟಿದೆ ಯಾರು ಬೇಕಾದ್ರು ಕೊಳ್ಳಬಹುದು.

ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಶಾಲೆ 77 ವರ್ಷದ ನಂತರ ಸೇಲ್ 

1979 ರಲ್ಲಿ ರಜತಾ ಎಂಟರ್ ಪ್ರೈಸಸ್  ಶಿಥಿಲಾವಸ್ಥೆಯಲ್ಲಿದ್ದ ಶಾಲೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಸರ್ಕಾರದಿಂದ ಈ ಜಾಗವನ್ನು ಲೀಸ್ ಗೆ ಪಡೆದಿತ್ತು. ತಿಂಗಳಿಗೆ 16,350 ರೂ.ಗೆ 26 ವರ್ಷಕ್ಕೆ ಸರ್ಕಾರ ಲೀಸ್‌ಗೆ ಕೊಟ್ಟಿತ್ತು. 2005 ರಲ್ಲಿ ಗುತ್ತಿಗೆ ಅವದಿ ಮುಕ್ತಾಯವಾಗಿದ್ದರಿಂದ ಕೋರ್ಟ್ ಗುತ್ತಿಗೆಯನ್ನ ಕ್ಲೋಸ್ ಮಾಡಿದೆ. ಮತ್ತೆ 2011 ರಲ್ಲಿ ರಜತಾದ್ರಿ ಕಾಂಫ್ಲೆಕ್ಸ್ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ತಿಂಗಳಿಗೆ  6.41 ಲಕ್ಷಕ್ಕೆ 10 ವರ್ಷ ಗುತ್ತಿಗೆ ನೀಡಲಾಯಿತು. 2021 ರ ಜೂನ್ ತಿಂಗಳಲ್ಲಿ ಈ ಗುತ್ತಿಗೆ ಅವಧಿಯೂ ಮುಕ್ತಾಯವಾಗಿದೆ. ಸರ್ಕಾರಿ ಶಾಲೆ 2 ನೇ ಫ್ಲೋರ್ ನಲ್ಲಿದ್ದು ಈ ಕಟ್ಟಡದಲ್ಲಿ 141 ಮಳಿಗೆಗಳಿವೆ. ಸರ್ಕಾರಿ ಶಾಲೆ ಜಾಗ ಎಂದು ಧೃಡೀಕರಿಸಲು ಇದ್ದ ದಾಖಲೆಗಳೇ ಸದ್ಯ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾಯವಾಗಿದೆ. 

ಎಚ್ಚೆತ್ತ ಶಿಕ್ಷಣ ಇಲಾಖೆ ಶಾಲೆ ಮಾರುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟನೆ

ಈ ಬಗ್ಗೆ ಎಚ್ಚೆತ್ತ  ಶಿಕ್ಷಣ ಇಲಾಖೆ ದಾನಿಗಳು ನೀಡಿದ ಜಾಗದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಜಾಗ ಸರ್ಕಾರದ ವಶದಲ್ಲಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತೆ. ಆ ಜಮೀನು ನಮ್ಮದೇ , ಜಾಗವನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಲು ಸೂಚಿಸಲಾಗಿದೆ. ಶಿಕ್ಷಣ ಇಲಾಖೆ ವತಿಯಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಯಾವುದೇ ಕಾರಣಕ್ಕೂ ಮಾರಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಸ್ಪಷ್ಟಪಡಿಸಿದೆ. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಸ್ವಾತಂತ್ರ್ಯ ಪೂರ್ವದ ಶಾಲೆ ಖಾಸಗಿಯವರ ಪಾಲಾಗುತ್ತಿತ್ತು. ಇದೀಗ ಶಿಕ್ಷಣ ಇಲಾಖೆ ಎಚ್ಚೆತ್ತು‌ ಉಳಿಸಲು ಮುಂದಾಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

‘ನೀ ಕೊಡೆ ನಾ ಬಿಡೆ’ ; ಫ್ಲೈ ಓವರ್ ನಿರ್ಮಾಣಕ್ಕಿಳಿದ BBMP & BMRCL ನಡುವೆ ಕೋಳಿಜಗಳ

Next Post

ಇಂದು ಭಾರತ – ಜಿಂಬಾಬ್ವೆ 2ನೇ ಏಕದಿನ ಪಂದ್ಯ : ಸರಣಿ ವಶಕ್ಕೆ ರಾಹುಲ್ ಪಡೆ ಸಜ್ಜು!

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post
ಇಂದು ಭಾರತ – ಜಿಂಬಾಬ್ವೆ 2ನೇ ಏಕದಿನ ಪಂದ್ಯ : ಸರಣಿ ವಶಕ್ಕೆ ರಾಹುಲ್ ಪಡೆ ಸಜ್ಜು!

ಇಂದು ಭಾರತ - ಜಿಂಬಾಬ್ವೆ 2ನೇ ಏಕದಿನ ಪಂದ್ಯ : ಸರಣಿ ವಶಕ್ಕೆ ರಾಹುಲ್ ಪಡೆ ಸಜ್ಜು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada