ಮಹಾರಾಷ್ಟ್ರದ ಮರಾತ್ವಾಡ ಪ್ರದೇಶದ ಆಸ್ಪತ್ರೆಗಳಿಗೆ ಪಿಎಂ ಕೇರ್ ಅಡಿ ಒದಗಿಸಲಾದ 150 ವೆಂಟಿಲೇಟರ್ಗಳಲ್ಲಿ 113 ವೆಂಟಿಲೇಟರ್ಗಳು ದೋಷ ಪೂರಿತವಾಗಿದ್ದು, ಬಾಂಬೆ ಹೈಕೋರ್ಟ್ನ ಔರಂಗಾಬಾದ್ ನ್ಯಾಯಪೀಠದ ನ್ಯಾಯಮೂರ್ತಿಗಳಾದ ರವೀಂದ್ರ ವಿ. ಘುಗೆ ಮತ್ತು ಭಾಲ್ಚಂದ್ರ ಯು. ದೇಬದ್ವಾರ್ ಅವರ ವಿಚಾರಣೆ ನಡೆಸಿದ್ದು, ಸರಬರಾಜುದಾರರ ವಿರುದ್ಧ ಗರಂ ಆಗಿದೆ.
ಪಿಎಂ ಕೇರ್ಸ್ ಫಂಡ್ ಮೂಲಕ ನಿಷ್ಕ್ರೀಯ ವೆಂಟಿಲೇಟರ್ಗಳನ್ನು ಪೂರೈಸಿರುವ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗಳಿಗೆ ಉತ್ತಮ ವೆಂಟಿಲೇಟರ್ಗಳನ್ನು ಪೂರೈಸ ಬೇಕು. ಸರಬರಾಜುದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸರ್ಕಾರದ ಪರ ವಕೀಲರಿಗೆ ತಿಳಿಸಿದೆ. ಈ ಕುರಿತು ಸರ್ಕಾರ ವಿವರಣೆ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ಈ ವೆಂಟಿಲೇಟರ್ಗಳು ಜ್ಯೋತಿ ಸಿಎನ್ಸಿ ಎಂಬ ಕಂಪನಿಯು ಧಾಮನ್- III ಎಂಬ ಹೆಸರಿನೊಂದಿಗೆ ತಯಾರಿಸಿದೆ. ಸಾಕಷ್ಟು ನ್ಯೂನತೆಗಳಿಂದ ಕೂಡಿದೆ. ಮುಖ್ಯವಾಗಿ ‘ನೋ-ಇನ್ಲೆಟ್ ಆಕ್ಸಿಜನ್ (O2) ಒತ್ತಡ ಪ್ರದರ್ಶನ & ವೆಂಟಿಲೇಟರ್ ನಲ್ಲಿರುವಾಗ ರೋಗಿಯು ಹೈಪೋಕ್ಸಿಕ್ ಆಗುವುದು ಇದು ರೋಗಿಯ ಜೀವಕ್ಕೆ ಅಪಾಯಕಾರಿ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದೆ.
ಪಿಎಂ ಕೇರ್ಸ್ ನಿಧಿಯಡಿಯಲ್ಲಿ ಪೂರೈಕೆಯಾದ ದೋಷಯುಕ್ತ ವೆಂಟಿಲೇಟರ್ಗಳ ಬಗ್ಗೆ ಸಾಕಷ್ಟು ಕಡೆ ಆರೋಪ ಕೇಳಿ ಬಂದಿದ್ದು, ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಂವಾದದಲ್ಲಿ, ಜಾರ್ಖಂಡ್ನ ಅತಿದೊಡ್ಡ ಸರ್ಕಾರಿ ಆಸ್ಪತ್ರೆ, ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಐಎಂಎಸ್), ಪಿಎಂ-ಕೇರ್ಸ್ ಅಡಿ ನೀಡಲಾದ ದೋಷಪೂರಿತ ವೆಂಟಿಲೇಟರ್ಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ಮೂಲ ದಿ ವೈರ್