ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ (Rameswaram Cafe) ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟಿಸಿದ್ದ ಆರೋಪಿಗಳನ್ನು NIA ಬಂಧನ ಮಾಡಿದೆ. ಮುಸಾವಿರ್ ಶಾಝಿದ್ ಹಾಗು ಅಬ್ದುಲ್ ಮತೀನ್ ತಾಹ ಬಂಧಿತ ಆರೋಪಿಗಳು. ಪಶ್ಚಿಮ ಬಂಗಾಳದ (West Bengal) ದಿಘಾ (Dhigha) ಎಂಬಲ್ಲಿ ಇಬ್ಬರ ಬಂಧನ ಮಾಡಲಾಗಿದೆ

ಪೂರ್ವ ಮಿಡ್ನಾಪುರದ ಕರಾವಳಿ ಪ್ರದೇಶ ದಿಘಾ ಎಂಬಲ್ಲಿ ರೂಮ್ ಮಾಡಿಕೊಂಡ7ಉ ಆರೋಪಿಗಳು ತಂಗಿದ್ದರು. ಖಚಿತ ಮಾಹಿತಿ ಆಧರಿಸಿ ಪಶ್ಚಿಮ ಬಂಗಾಳ ಪೊಲೀಸರು ಹಾಗು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧನ ಮಾಡುವ ಕೆಲಸ ಮಾಡಿದ್ದಾರೆ. ಆ ಬಳಿಕ ವಶಕ್ಕೆ ಪಡೆದಿರುವ NIA ಅಧಿಕಾರಿಗಳು ವಿಶೇಷ ಕೋರ್ಟ್‌ಗೆ ಹಾಜರು ಮಾಡಿ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಧಿಘಾದಿಂದ ವಿದೇಶಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಕಲಿ ಐಡೆಂಟಿ ಕಾರ್ಡ್ ಬಳಸಿ ವಾಸವಾಗಿದ್ದರು ಎನ್ನುವ ಮಾಹಿತಿಯೂ ಸಿಕ್ಕಿದೆ. ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಮುಸಾವಿರ್ ಶಾಝಿದ್ ಹಾಗು ಮಾಸ್ಟರ್ ಮೈಂಡ್ ರೀತಿಯಲ್ಲಿ ಕೆಲಸ ಮಾಡಿದ್ದ ಮಾಜ್ ಮುನೀರ್. ಸ್ಫೋಟದ ಉಸ್ತುವಾರಿ ವಹಿಸಿದ್ದ ಅಬ್ದುಲ್ ಮತೀನ್ ತಾಹ.






