ದೇಶದಲ್ಲೇ ಚೊಚ್ಚಲ ಬಾರಿಗೆ ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ ಮಾಡಲಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (TRAI) ಪೈಲಟ್ ಪ್ರಾಜೆಕ್ಟ್ ಆಗಿ ಬೆಂಗಳೂರಿನಲ್ಲಿ 5G ನೆಟ್ವರ್ಕ್ ಪರೀಕ್ಷೆ ಮಾಡಿದೆ. ನಗರದ ಎಂಜಿ ರೋಡ್ ಮೆಟ್ರೋ ಸ್ಟೇಷನ್ ನಲ್ಲಿ 5G ನೆಟ್ವರ್ಕ್ ಪರೀಕ್ಷೆಗೆ ಮಾಪನ ಅಳವಡಿಕೆ ಮಾಡಿದ್ದು, 5G ನೆಟ್ವರ್ಕ್ ಪರೀಕ್ಷೆಗೆ ಜಿಯೋ ನೆಟ್ವರ್ ಮಾಪನ ಅಳವಡಿಸಲಾಗಿದೆ. 4G ಗಿಂತ 50 ಪಟ್ಟು ವೇಗದಲ್ಲಿ ತರಂಗಗಳು ಒಳಗೊಂಡ 5G ನೆಟ್ವರ್ಕ್ ಮಾಪನ ಸ್ಥಿತಿ ಮಾಡಲಾಗಿದೆ. ರಿಲಯನ್ಸ್ ಜಿಯೋ ನೆಟ್ವರ್ಕ್ ನಿಂದ MG ರಸ್ತೆ ಮೆಟ್ರೋ ನಿಲ್ದಾಣದ 200 m ವ್ಯಾಪ್ತಿಗೆ 5G ಅಳವಡಿಸಿದ್ದು, ಈ ಮೂಲಕ ನಮ್ಮ ಮೆಟ್ರೋ 5G ಅಳವಡಿಸಿದ ದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.
ಹೌದು, ದೇಶದ ಮೆಟ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ 5ಜಿ ನೆಟ್ವರ್ಕ್ ಅಳವಡಿಕೆಯ ಪೈಲೆಟ್ ಪ್ರೊಜೆಕ್ಟ್ ಪರೀಕ್ಷೆ ಯಶಸ್ವಿಯಾಗಿದೆ ಎಂದು ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ. ಈ ಒಂದು ನಿಲ್ದಾಣದಲ್ಲಿ ಯಶಸ್ವಿಯಾದರೆ ಶೀಘ್ರದಲ್ಲೇ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ 5ಜಿ ಸೇವೆ ಲಭ್ಯವಾಗಲಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೊಬೈಲ್ ನೆಟ್ವರ್ಕ್ ವೇಗದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದೇವೆ ಎಂದು ತಿಳಿಸಿದ್ದಾರೆ. ಎಂ.ಜಿ.ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ರಿಲಾಯನ್ಸ್ ಜಿಯೋ 5ಜಿ ನೆಟ್ವರ್ಕ್ 200 ಮೀಟರ್ ವ್ಯಾಪ್ತಿಯಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಈ ನೆಟ್ವರ್ಕ್ ನಲ್ಲಿ 1.45 Gbps ಡೌನ್ ಲೋಡ್ ವೇಗ ಹಾಗೂ 65 Mbps ಅಪ್ಲೋಡ್ ವೇಗ ದಾಖಲಾಗಿದೆ. 4ಜಿ ನೆಟ್ವರ್ಕ್ ಗಿಂತ 50 ಪಟ್ಟ ವೇಗವನ್ನು ಹೊಂದಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಟೆಲಿಕಾಂ ರೆಗ್ಯೂಲೇಟರಿ ಆಥಾರಿಟಿ ಆಫ್ ಇಂಡಿಯಾದಿಂದ (TRAI) ನಿಂದ ಪೈಲೆಟ್ ಯೋಜನೆ.!!
ಟ್ರಾಯ್ ಸಂಸ್ಥೆಯು ದೇಶಾದ್ಯಂತ ಸರ್ಕಾರದ ಮೂಲಭೂತ ಸೌಕರ್ಯವಿರುವ ಕೆಲವು ವಿಮಾನ ನಿಲ್ದಾಣ, ಬಂದರು, ರೈಲ್ವೆ ನಿಲ್ದಾಣ ಹಾಗೂ ಮೆಟ್ರೊ ಮೊದಲಾದ ಕಡೆಗಳಲ್ಲಿ 5ಜಿ ನೆಟ್ವರ್ಕ್ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲೆಟ್ ಯೋಜನೆ ಕೈಗೆತ್ತಿಕೊಂಡಿದೆ. ಈ ಪೈಕಿ ನಮ್ಮ ಮೆಟ್ರೊ ಎಂ.ಜಿ.ರಸ್ತೆ ನಿಲ್ದಾಣದಲ್ಲೂ 5ಜಿ ನೆಟ್ವರ್ಕ್ ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು ಎಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಮೆಟ್ರೋ ಸ್ಟೇಷನ್ ನಲ್ಲಿ 5ಜಿ ನೆಟ್ ವರ್ಕ್ ಅಳವಡಿಸುವ ತಾಂತ್ರಿಕ ಕೆಲಸಗಳು ನಡೆಯುತ್ತಿತ್ತು. ಈಗ ಅದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದು ಕಂಡು ಬಂದಿದೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

