Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ದೇಶದಲ್ಲೇ ಚೊಚ್ಚಲ ಬಾರಿಗೆ ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

ಕರ್ಣ

ಕರ್ಣ

July 22, 2022
Share on FacebookShare on Twitter

ದೇಶದಲ್ಲೇ ಚೊಚ್ಚಲ ಬಾರಿಗೆ ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ ಮಾಡಲಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (TRAI) ಪೈಲಟ್ ಪ್ರಾಜೆಕ್ಟ್‌ ಆಗಿ ಬೆಂಗಳೂರಿನಲ್ಲಿ 5G ನೆಟ್ವರ್ಕ್ ಪರೀಕ್ಷೆ ಮಾಡಿದೆ. ನಗರದ ಎಂಜಿ ರೋಡ್ ಮೆಟ್ರೋ ಸ್ಟೇಷನ್ ನಲ್ಲಿ 5G ನೆಟ್ವರ್ಕ್ ಪರೀಕ್ಷೆಗೆ ಮಾಪನ ಅಳವಡಿಕೆ ಮಾಡಿದ್ದು, 5G ನೆಟ್ವರ್ಕ್ ಪರೀಕ್ಷೆಗೆ ಜಿಯೋ ನೆಟ್ವರ್ ಮಾಪನ ಅಳವಡಿಸಲಾಗಿದೆ. 4G ಗಿಂತ 50 ಪಟ್ಟು ವೇಗದಲ್ಲಿ ತರಂಗಗಳು ಒಳಗೊಂಡ 5G ನೆಟ್ವರ್ಕ್ ಮಾಪನ ಸ್ಥಿತಿ ಮಾಡಲಾಗಿದೆ. ರಿಲಯನ್ಸ್ ಜಿಯೋ ನೆಟ್ವರ್ಕ್ ನಿಂದ MG ರಸ್ತೆ ಮೆಟ್ರೋ ನಿಲ್ದಾಣದ 200 m ವ್ಯಾಪ್ತಿಗೆ 5G ಅಳವಡಿಸಿದ್ದು, ಈ ಮೂಲಕ ನಮ್ಮ ಮೆಟ್ರೋ 5G ಅಳವಡಿಸಿದ ದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ನೀರಿನ ಬಾಟಲ್‌ ಗಾಗಿ ಜಗಳ: ಚಲಿಸುವ ರೈಲಿನಿಂದ ಪ್ರಯಾಣಿಕನ್ನು ಹೊರಗೆ ಎಸೆದ ಸಿಬ್ಬಂದಿ!

ಬಿಜೆಪಿ ಜೊತೆಗಿನ ಮೈತ್ರಿ: ನಿತೀಶ್‌ ಕುಮಾರ್ ನಾಳೆ ನಿರ್ಧಾರ ಪ್ರಕಟ!

ಚಾಮರಾಜಪೇಟೆ ಮೈದಾನದ ಈದ್ಗಾ ಟವರ್ ತೆರವುಗೊಳಿಸಲು ಸರ್ಕಾರಕ್ಕೆ ಗಡುವು ನೀಡಿದ ಹಿಂದೂಪರ ಸಂಘಟನೆಗಳು

ಹೌದು, ದೇಶದ ಮೆಟ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ 5ಜಿ ನೆಟ್ವರ್ಕ್ ಅಳವಡಿಕೆಯ ಪೈಲೆಟ್ ಪ್ರೊಜೆಕ್ಟ್ ಪರೀಕ್ಷೆ ಯಶಸ್ವಿಯಾಗಿದೆ ಎಂದು ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ. ಈ ಒಂದು ನಿಲ್ದಾಣದಲ್ಲಿ ಯಶಸ್ವಿಯಾದರೆ ಶೀಘ್ರದಲ್ಲೇ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ 5ಜಿ ಸೇವೆ ಲಭ್ಯವಾಗಲಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೊಬೈಲ್ ನೆಟ್ವರ್ಕ್ ವೇಗದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದೇವೆ ಎಂದು ತಿಳಿಸಿದ್ದಾರೆ. ಎಂ.ಜಿ.ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ರಿಲಾಯನ್ಸ್ ಜಿಯೋ 5ಜಿ ನೆಟ್ವರ್ಕ್ 200 ಮೀಟರ್ ವ್ಯಾಪ್ತಿಯಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಈ ನೆಟ್ವರ್ಕ್ ನಲ್ಲಿ 1.45 Gbps ಡೌನ್ ಲೋಡ್ ವೇಗ ಹಾಗೂ 65 Mbps ಅಪ್ಲೋಡ್ ವೇಗ ದಾಖಲಾಗಿದೆ. 4ಜಿ ನೆಟ್ವರ್ಕ್ ಗಿಂತ 50 ಪಟ್ಟ ವೇಗವನ್ನು ಹೊಂದಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಟೆಲಿಕಾಂ ರೆಗ್ಯೂಲೇಟರಿ ಆಥಾರಿಟಿ ಆಫ್ ಇಂಡಿಯಾದಿಂದ (TRAI) ನಿಂದ ಪೈಲೆಟ್ ಯೋಜನೆ.!!

ಟ್ರಾಯ್ ಸಂಸ್ಥೆಯು ದೇಶಾದ್ಯಂತ ಸರ್ಕಾರದ ಮೂಲಭೂತ ಸೌಕರ್ಯವಿರುವ ಕೆಲವು ವಿಮಾನ ನಿಲ್ದಾಣ, ಬಂದರು, ರೈಲ್ವೆ ನಿಲ್ದಾಣ ಹಾಗೂ ಮೆಟ್ರೊ ಮೊದಲಾದ ಕಡೆಗಳಲ್ಲಿ 5ಜಿ ನೆಟ್ವರ್ಕ್ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲೆಟ್ ಯೋಜನೆ ಕೈಗೆತ್ತಿಕೊಂಡಿದೆ. ಈ ಪೈಕಿ ನಮ್ಮ ಮೆಟ್ರೊ ಎಂ.ಜಿ.ರಸ್ತೆ ನಿಲ್ದಾಣದಲ್ಲೂ 5ಜಿ ನೆಟ್ವರ್ಕ್ ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು ಎಂದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಮೆಟ್ರೋ ಸ್ಟೇಷನ್ ನಲ್ಲಿ 5ಜಿ ನೆಟ್ ವರ್ಕ್ ಅಳವಡಿಸುವ ತಾಂತ್ರಿಕ ಕೆಲಸಗಳು ನಡೆಯುತ್ತಿತ್ತು. ಈಗ ಅದು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದು ಕಂಡು ಬಂದಿದೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

RS 500
RS 1500

SCAN HERE

don't miss it !

ಸಿದ್ದರಾಮೋತ್ಸವಕ್ಕೆ ರಾಹುಲ್‌ ಗಾಂಧಿ ಆಗಮನ!
ಕರ್ನಾಟಕ

ಸಿದ್ದರಾಮೋತ್ಸವಕ್ಕೆ ರಾಹುಲ್‌ ಗಾಂಧಿ ಆಗಮನ!

by ಪ್ರತಿಧ್ವನಿ
August 2, 2022
ಕಾಮನ್‌ ವೆಲ್ತ್‌ ಸಮಾರೋಪ: ಜರೀನ್‌, ಶರತ್‌ ಕಮಲ್‌ ಗೆ ಧ್ವಜ ಗೌರವ!
ಕ್ರೀಡೆ

ಕಾಮನ್‌ ವೆಲ್ತ್‌ ಸಮಾರೋಪ: ಜರೀನ್‌, ಶರತ್‌ ಕಮಲ್‌ ಗೆ ಧ್ವಜ ಗೌರವ!

by ಪ್ರತಿಧ್ವನಿ
August 8, 2022
ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ
ದೇಶ

ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್‌ ನಾಯಕರಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ : ಅಮಿತ್‌ ಶಾ

by ಪ್ರತಿಧ್ವನಿ
August 6, 2022
ಬೆಂಗಳೂರಿನ ಕೆರೆ ಒತ್ತುವರಿ ತೆರವು ಮರೆತ ಬಿಬಿಎಂಪಿಗೆ NGT ಚಾಟಿ : ಮಾಹಿತಿ ಕೊಡುವಂತೆ ನೋಟೀಸ್!
ಕರ್ನಾಟಕ

ಮಳೆಯಿಂದ ಹಾನಿಯಾದವರಿಗೆ ಬಿಬಿಎಂಪಿಯಿಂದ‌ 10 ಸಾವಿರ ಪರಿಹಾರ ಘೋಷಣೆ!

by ಪ್ರತಿಧ್ವನಿ
August 3, 2022
ಸರ್ಕಾರಿ ಸಂಸ್ಥೆಗಳ ದುರ್ಬಳಕೆ; ಖರ್ಗೆ – ಗೋಯಲ್ ನಡುವೆ ಮಾತಿನ ಚಕಮಕಿ
ದೇಶ

ಸರ್ಕಾರಿ ಸಂಸ್ಥೆಗಳ ದುರ್ಬಳಕೆ; ಖರ್ಗೆ – ಗೋಯಲ್ ನಡುವೆ ಮಾತಿನ ಚಕಮಕಿ

by ಪ್ರತಿಧ್ವನಿ
August 4, 2022
Next Post
ಶಿಖರ್ ಧವನ್ 97 ರನ್: ವೆಸ್ಟ್ ಇಂಡೀಸ್ ಗೆ 309 ರನ್ ಗುರಿ

ಶಿಖರ್ ಧವನ್ 97 ರನ್: ವೆಸ್ಟ್ ಇಂಡೀಸ್ ಗೆ 309 ರನ್ ಗುರಿ

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ : 20 ಕೋಟಿ ನಗದು ವಶ

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ : 20 ಕೋಟಿ ನಗದು ವಶ

ವಿಜ್ಞಾನ ಉಪಕರಣಗಳ ಮೇಲೆ GST : ಸಂಶೋಧನೆಯ ಭವಿಷ್ಯದ ಬಗ್ಗೆ ವಿಜ್ಞಾನಿಗಳ ಆತಂಕ!

ವಿಜ್ಞಾನ ಉಪಕರಣಗಳ ಮೇಲೆ GST : ಸಂಶೋಧನೆಯ ಭವಿಷ್ಯದ ಬಗ್ಗೆ ವಿಜ್ಞಾನಿಗಳ ಆತಂಕ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist