ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಫಲಾನುಭವಿಗಳು ಇದ್ದೇವೆ ಸಾಕಷ್ಟು ಸಂಪನ್ಮೂಲ ಮಾಡಿಕೊಂಡಿದ್ದೇವೆ ಉತ್ತಮ ಸ್ಥಾನಕ್ಕೇರಿದೆ ದೊಡ್ಡ ದೊಡ್ಡ ಹುದ್ದೆಗಳನ್ನು ಅನುಭವಿಸಿದ್ದೇವೆ ಸಾಮನ್ಯ ಕುಟುಂಬದಿಂದ ಬಂದ ನಾನು ಮಂತ್ರಿ ಹಾಗೂ ಸಭಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಕೋಲಾರದ ಗಾಂಧಿ ಭವನದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ರಮೇಶ್ ಕುಮಾರ್ ಈ ಎಲ್ಲಾ ಸಾಧನೆಗೆ ಜನ, ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಕಾರಣ ಅವರ ಋಣ ತೀರಿಸಬೇಕು ಎಂದು ಗುರುವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹೇಳಿದ್ದೆ. ಆದರೆ, ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ನನಗೆ ಹಲವು ನಾಯಕರು ಹಲವಾರು ಬಿರುದಾಂಕಿತಗಳನ್ನು ನೀಡಿದ್ದಾರೆ ನಾಯಿ, ನರಿ, ಶಕುನಿ, ಉತ್ತರ ಕುಮಾರ, ದುರ್ಯೋಧನ ಎಂದೆಲ್ಲ ಕರೆದಿದ್ದಾರೆ ಅವರಿಗೆಲ್ಲ ನನ್ನ ದೀರ್ಘ ದಂಡ ನಮಸ್ಕಾರಗಳು ಮುಂದಿನ ದಿನಗಳಲ್ಲಿ ಇದೆ ರೀತಿಯ ಬಿರುದಾಂಕಿತಗಳನ್ನೂ ನೀಡಿದ್ದಾರೆ ತುಂಬಾ ಸಂತೋಷ ಎಂದು ವಿರೋಧಿ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.
