ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ, ನಮ್ಮ ಆಹಾರದ ಬಗ್ಗೆ ಕಾನ್ಸನ್ಟ್ರೇಟ್ ಮಾಡಬೇಕಾಗುತ್ತದೆ , ಮೆಡಿಕೇಶನ್ ಇಂದ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುವಂತ ಚಾನ್ಸಸ್ ಹೆಚ್ಚಿರುತ್ತದೆ ನಾವು ತೆಗೆದುಕೊಳ್ಳುವಂತಹ ಇನ್ಸುಲಿನ್ ಹಾಗೂ ಮಾತ್ರೆಗಳು ಇದಕ್ಕೆ ಪ್ರಮುಖ ಕಾರಣ.ದೇಹಕ್ಕೆ ಬೇಕಾದಷ್ಟು ಆಹಾರವನ್ನ ಸೇವಿಸದೆ ಇರುವುದು ,ಅಥವಾ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದೆ ,ಊಟವನ್ನು ಸ್ಕಿಪ್ ಮಾಡುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಇದೆಲ್ಲವೂ ಸರಿ ಆದರ ಜೊತೆಗೆ ಯಾವ ರೀತಿಯ ಆಹಾರ ಸೇವಿಸುವುದು ಉತ್ತಮ ಅನ್ನೋದರ ಡಿಟೇಲ್ಸ್ ಇಲ್ಲಿದೆ.

ಹಣ್ಣುಗಳು
ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದಾಗ ತಲೆ ಸುತ್ತು ಕಣ್ಣು ಮಂಜಾದಂತಾಗುವುದು ವಾಕರಿಕೆ ಇವೆಲ್ಲವೂ ಕೂಡ ಶುರುವಾಗುತ್ತದೆ ಅಂತ ಸಂದರ್ಭದಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಅದ್ರಲ್ಲೂ ಕೂಡಬಾಳೆಹಣ್ಣುಗಳು ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ.ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ರುಚಿ ಹಾಗೂ ಆರೋಗ್ಯಕ್ಕೂ ಕೂಡ ಉತ್ತಮ. ಹೇಗೆ ಅನಾನಸ್ ದ್ರಾಕ್ಷಿ ಹಣ್ಣನ್ನ ತಿನ್ನುವುದು ಕೂಡ ಒಳ್ಳೆಯದು.

ಡ್ರೈ ಫ್ರೂಟ್ಸ್
ಹಣ್ಣುಗಳ ಬದಲು ಡ್ರೈ ಫ್ರೂಟ್ಸ್ ಗಳನ್ನ ಕೂಡ ನೀವು ಸೇವಿಸಬಹುದು ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಖರ್ಜೂರಗಳು,ಏಪ್ರಿಕಾಟ್ಗಳು ,ಒಣದ್ರಾಕ್ಷಿ- ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಲ್ಲಿ ಅಧಿಕ.

ತರಕಾರಿ
ತರಕಾರಿ ಸೇವಿಸುವುದು ಕೂಡ ಉತ್ತಮ ಆದರೆ ಆ ತರಕಾರಿಯಲ್ಲಿ ಸಿಹಿ ಅಂಶ ಹೆಚ್ಚಿರಬೇಕು ಅಂತ ತರಕಾರಿಗಳು ಯಾವುದು ಎಂಬುದರ ಮಾಹಿತಿ ಹೀಗಿದೆಆಲೂಗಡ್ಡೆ ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಇದರಲ್ಲಿದೆ,ಸಿಹಿ ಆಲೂಗಡ್ಡೆ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆಕಾರ್ನ್ ನ್ಯಾಚುರಲ್ ಸಕ್ಕರೆಗಳನ್ನು ಅಂಶಾ ಹೊಂದಿರುತ್ತದೆ.

ಸ್ವೀಟ್
ತಕ್ಷಣಕ್ಕೆ ತಲೆ ಸುತ್ತು ಅಥವಾ ಕಣ್ಮಂಜಾಗಿ ಬೆವರಿಲಿಕ್ಕೆ ಶುರುವಾದಾಗ ಒಂದು ಸ್ಪೂನ್ ಸಕ್ಕರೆಯನ್ನ ಸೇವಿಸುವುದು ಉತ್ತಮ ಇಲ್ಲವಾದರೆ ಒಂದು ಸ್ಪೂನ್ ಜೇನುತುಪ್ಪ ಅಥವಾ ಮನೆಯಲ್ಲಿರುವಂತಹ ಸ್ವೀಟ್ ಚಾಕಲೇಟ್ ಅನ್ನ ಸೇವಿಸಬಹುದು ಇದು ಸಕ್ಕರೆ ಮಟ್ಟವನ್ನ ಸುಲಭವಾಗಿ ಏರಿಸುತ್ತದೆ.











