ರಾಹುಲ್ ಗಾಂಧಿ ಬಗ್ಗೆ ಮತ್ತು ದ್ವಿಪತ್ನಿ ಕುರಿತು ಮಾತಾಡಿರುವ ಬಿಜೆಪಿ ಮತ್ತವರ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಬೈಗಮಿ ಎಂದು ಬಿಜೆಪಿ ಟ್ವೀಟ್ ವಿಚಾರಕ್ಕೆ ರಾಮಪುರ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್ಡಿಕೆ, ‘ಆ ಪದ ಬಳಕೆ ಬಿಜೆಪಿ ಅವರಿಗೆ ಅನ್ವಯವಾಗುತ್ತದೆ’. ‘ಪ್ರತಿನಿತ್ಯ ಅದರ ಆಧಾರದ ಮೇಲೆ ಅವರು ನಡೆಯೋದು’. ‘ಬಿಜೆಪಿಯವರ ಮನೆಯಲ್ಲಿ ಹೆಗ್ಗಣವೇ ಸತ್ತು ಬಿದ್ದಿದೆ’. ‘ನಾನು ಯಾವುದನ್ನೂ ಕದ್ದು ಮಾಡಿಲ್ಲ’ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನೂ ನಳಿನ್ ಕುಮಾರ್ ಕಟೀಲ್, ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ಡಿ.ಕೆ, ನಳಿನ್ ಕುಮಾರ್ ಅವರ ಬಂಡವಾಳ ತೆರೆದಿಟ್ಟರೆ ಬಿಜೆಪಿ ಮತ್ತವರ ಸಂಘ RSS ನಾಯಕರು ನಗೆಪಾಟಿಲಿಗೆ ಗುರಿಯಾಗುತ್ತಾರೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿದರೆ ನಾನು ಸುಮ್ಮನಿರಲ್ಲ ಅಧ್ಯಕ್ಷ ಏನೇನೆಲ್ಲ ಮಾಡಿದ್ದಾರೆ ಎಂಬುದನ್ನು ತೆರೆದಿಡುತ್ತೇನೆ ಎಂದು ಹೇಳಿದ್ದಾರೆ.