• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ಪಟ್ಟಿ ಪ್ರಕಟ​​: DK ಶಿವಕುಮಾರ್, ಸಿದ್ದರಾಮಯ್ಯಗೆ ಸಚಿವರೇ​​ ಎದುರಾಳಿ..

ಕೃಷ್ಣ ಮಣಿ by ಕೃಷ್ಣ ಮಣಿ
April 11, 2023
in Top Story, ಕರ್ನಾಟಕ, ರಾಜಕೀಯ
0
ಬಿಜೆಪಿ ಪಟ್ಟಿ ಪ್ರಕಟ​​: DK ಶಿವಕುಮಾರ್, ಸಿದ್ದರಾಮಯ್ಯಗೆ ಸಚಿವರೇ​​ ಎದುರಾಳಿ..
Share on WhatsAppShare on FacebookShare on Telegram

ಬಿಜೆಪಿ ಅಳೆದು ತೂಗಿ ಟಿಕೆಟ್​ ಘೋಷಣೆ ಮಾಡಿದೆ. ಟಿಕೆಟ್​ ಹಂಚಿಕೆಯಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕಿರುವ ಭಾರತೀಯ ಜನತಾ ಪಾರ್ಟಿ ನಾಯಕರು 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳ ಪಟ್ಟಿ ರಿಲೀಸ್​ ಮಾಡಿದ್ದಾರೆ. ಟಿಕೆಟ್​​ ಹಂಚಿಕೆ ವಿಶೇಷ ಅಂದ್ರೆ ಆರ್​ ಅಶೋಕ್​ ಹಾಗು ಸೋಮಣ್ಣ ಅವರಿಗೆ 2 ಕ್ಷೇತ್ರಗಳಿಂದ ಟಿಕೆಟ್​​ ಕೊಡಲಾಗಿದೆ. ಅದರಲ್ಲೂ ಕಾಂಗ್ರೆಸ್​ ಅಧ್ಯಕ್ಷ ಸ್ಪರ್ಧೆ ಮಾಡುವ ಕನಕಪುರ ಕ್ಷೇತ್ರದಿಂದ ಹಾಗು ಹಾಲಿ ಶಾಸಕರಾಗಿರುವ ಪದ್ಮನಾಭನಗರದಿಂದ ಆರ್​ ಅಶೋಕ್​ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವರುಣಾ ಕ್ಷೇತ್ರ ಹಾಗು ಚಾಮರಾಜನಗರ ಕ್ಷೇತ್ರದಿಂದ ವಿ ಸೋಮಣ್ಣ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಆದರೆ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್​​ ಬಗ್ಗೆ ಬಿಜೆಪಿ ಇನ್ನೂ ಕೂಡ ಸಸ್ಪೆನ್ಸ್​ ಉಳಿಸಿಕೊಂಡಿದೆ. ಸೋಮಣ್ಣ ಎರಡೂ ಕಡೆ ಹೊಸ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಮಾಡಬೇಕಿದೆ.

ADVERTISEMENT

ಯಡಿಯೂರಪ್ಪ ಮಗನಿಗೆ ಖುಷ್​, ಇನ್ನುಳಿದವರಿಗೆ ಮಿಸ್​..!

ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಅಂತಿಮವಾಗಿ ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್​​ ಘೋಷಣೆ ಆಗಿದೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವಂತೆ ಸೂಚನೆ ಕೊಡಲಾಗಿದೆ ಎನ್ನುವ ಸುದ್ಧಿ ಭಾರೀ ಪ್ರಚಾರ ಪಡೆದಿತ್ತು. ಅಂತಿಮವಾಗಿ ಬಿ.ಎಸ್​ ಯಡಿಯೂರಪ್ಪ ವರುಣಾದಿಂದ ಸ್ಪರ್ಧೆ ಮಾಡಲ್ಲ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಂತಿಮವಾಗಿ ಶಿಕಾರಿಪುರದಿಂದಲೇ ಟಿಕೆಟ್​​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಚಿವ ಎಂಟಿಬಿ ನಾಗರಾಜ್​​ ಹೊಸಕೋಟೆ ಕ್ಷೇತ್ರದಿಂದ ಮಗನಿಗೆ ಟಿಕೆಟ್​ ಕೇಳಿದ್ದರು. ಭಾರತೀಯ ಜನತಾ ಪಾರ್ಟಿ ಸ್ವತಃ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​ಗೆ ಮಣೆ ಹಾಕಿದೆ. ಚಿತ್ರದುರ್ಗ ಕ್ಷೇತ್ರದಿಂದ ಜಿ.ಹೆಚ್​ ತಿಪ್ಪಾರೆಡಿ ತಮ್ಮ ಮಗನಿಗೆ ಟಿಕೆಟ್​ ಕೊಡಿ ಎಂದು ಮನವಿ ಮಾಡಿದ್ದರು. ಅಂತಿಮವಾಗಿ ತಿಪ್ಪಾರೆಡ್ಡಿಗೇ ಬಿಜೆಪಿ ಟಿಕೆಟ್​ ಕೊಟ್ಟಿದೆ. ಈಶ್ವರಪ್ಪ ಕೂಡ ಶಿವಮೊಗ್ಗ ಕ್ಷೇತ್ರದಿಂದ ಮಗನಿಗೆ ಟಿಕೆಟ್​ ಕೇಳಿದ್ದು, ಇಲ್ಲಿ ಟಿಕೆಟ್​ ಘೋಷಣೆಯನ್ನು ಕಾಯ್ದಿರಿಸಿದೆ.

ವಲಸೆ ಶಾಸಕರಿಗೆ ಮಣೆ, ಹಾಲಿ ಶಾಸಕರಿಗೇ ಕೊಕ್​..!

ಕಾಂಗ್ರೆಸ್​​, ಜೆಡಿಎಸ್​​ನಿಂದ ಈ ಹಿಂದೆ ಆಪರೇಷನ್​ ಕಮಲಕ್ಕೆ ಒಳಗಾಗಿದ್ದ ಎಲ್ಲಾ ಶಾಸಕರಿಗೂ ಟಿಕೆಟ್​​ ಕೊಡಲಾಗಿದೆ. ಅಥಣಿಯಲ್ಲಿ ಮಹೇಶ್​ ಕುಮಟಳ್ಳಿ ಟಿಕೆಟ್​​ ಮಿಸ್​​ ಆಗಲಿದೆ ಎನ್ನುವ ಸುದ್ಧಿ ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಅಂತಿಮವಾಗಿ ಟಿಕೆಟ್​​ ಕೊಡಿಸಲು ರಮೇಶ್​​ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್​​ ಸೇರಲಿದ್ದಾರೆ ಎನ್ನಲಾಗ್ತಿದ್ದ ಎಸ್​ಟಿ ಸೋಮಶೇಖರ್​ ಹಾಗು ಕೆ.ಸಿ ನಾರಾಯಣಗೌಡಗೂ ಬಿಜೆಪಿ ಟಿಕೆಟ್​​ ಘೋಷಣೆ ಆಗಿದೆ. ವಿಶೇಷ ಅಂದ್ರೆ ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್​ಗೆ ಟಿಕೆಟ್​ ಕೈತಪ್ಪಿದ್ದು, ಹಿಜಾಬ್​ ವಿವಾದವನ್ನು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದ ಯಶ್​​ಪಾಲ್​ ಸುವರ್ಣಗೆ ಟಿಕೆಟ್​ ನೀಡಲಾಗಿದೆ. ಇನ್ನೂ ಕೂಡ ಜಗದೀಶ್​ ಶೆಟ್ಟರ್​ ಸ್ಪರ್ಧೆ ಮಾಡುವ ಹುಬ್ಬಳ್ಳಿ ಸೆಂಟ್ರಲ್​ ಕ್ಷೇತ್ರದ ಟಿಕೆಟ್​ ಘೋಷಣೆ ಆಗಿಲ್ಲ. ದೆಹಲಿಗೆ ಬರುವಂತೆ ಜಗದೀಶ್​ ಶೆಟ್ಟರ್​​ಗೆ ಬುಲಾವ್​ ಬಂದಿದ್ದು, ನಾನು ದೆಹಲಿಗೆ ಬರಲ್ಲ ಎಂದು ಸಡ್ಡು ಹೊಡೆದಿದ್ದಾರೆ ಎನ್ನಲಾಗಿದೆ.

ಕುಟುಂಬಗಳಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್​..!

ಭಾರತೀಯ ಜನತಾ ಪಾರ್ಟಿ ನಾಯಕರು ಬಾಯಿ ಬಿಟ್ಟರೆ ಸದಾ ಕಾಲ ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಆದರೆ ಬಿಜೆಪಿ ಕೂಡ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ ಎನ್ನುವುದನ್ನು ಟಿಕೆಟ್​​ ಪಟ್ಟಿ ಸಾಬೀತು ಮಾಡಿದೆ. ದಿವಂಗತ ಉಮೇಶ್​ ಕತ್ತಿ ಸಹೋದರನಿಗೆ ಚಿಕ್ಕೋಡಿ – ಸದಲಗಾ ಕ್ಷೇತ್ರದಿಂದ ರಮೇಶ್​ ಕತ್ತಿ ಹಾಗು ಪುತ್ರನಿಗೆ ಹುಕ್ಕೇರಿ ಕ್ಷೇತ್ರದಿಂದ ನಿಖಿಲ್​ ಕತ್ತಿಗೆ ಟಿಕೆಟ್​ ಘೋಷಣೆ ಆಗಿದೆ. ಇನ್ನು ಬೆಳಗಾವಿಯ ಅರಭಾವಿ ಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ ಹಾಗು ಗೋಕಾಕ್ ಕ್ಷೇತ್ರದಿಂದ​ ರಮೇಶ್​ ಜಾರಕಿಹೊಳಿಗೆ ಟಿಕೆಟ್​ ಸಿಕ್ಕಿದೆ. ಅತ್ತ ಸವದತ್ತಿ ಕ್ಷೇತ್ರದಿಂದ ದಿವಂಗತ ಶಾಸಕ ಆನಂದ ಮಾಮನಿ ಪತ್ನಿ ರತ್ನ ವಿ ಮಾಮನಿ, ಕಲಬುರಗಿಯ ಚಿಂಚೋಳಿ ಕ್ಷೇತ್ರದಿಂದ ಸಂಸದ ಉಮೇಶ್ ಜಾಧವ್​ ಪುತ್ರ​ ಡಾ ಅವಿನಾಶ್​ ಜಾಧವ್​, ಹಾಲಿ ಸಚಿವ ಆನಂದ್​ ಸಿಂಗ್​ ಪುತ್ರ ಸಿದ್ದಾರ್ಥ್​​ ಸಿಂಗ್​ಗೆ ವಿಜಯನಗರ ಕ್ಷೇತ್ರದ ಟಿಕೆಟ್​ ಕೊಟ್ಟಿದ್ದು, ಮಾಜಿ ಸಚಿವ ವಿ ರಾಮಚಂದ್ರಗೌಡ ಅವರ ಪುತ್ರ A.R​ ಸಪ್ತಗಿರಿಗೌಡಗೆ ಗಾಂಧಿನಗರ ಕ್ಷೇತ್ರದ ಟಿಕೆಟ್​​ ನೀಡಲಾಗಿದೆ.

Tags: BJPCongress Partyಬಿಜೆಪಿಸಿದ್ದರಾಮಯ್ಯ
Previous Post

ಈಶ್ವರಪ್ಪ, ಶೆಟ್ಟರ್‌ರನ್ನು ತೆಗೀತೀವಿ: ನಳಿನ್‌ ಕುಮಾರ್‌ ಹಳೆ ಆಡಿಯೋ ವೈರಲ್

Next Post

ಟಿಕೆಟ್​ಗಾಗಿ ಜೆಡಿಎಸ್​ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ ಭಾರಿ ನಿರಾಸೆ..!

Related Posts

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?
Top Story

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

by ಪ್ರತಿಧ್ವನಿ
May 2, 2026
0

ಖ್ಯಾತ ನಟ-ನಿರ್ದೇಶಕ ರಿಷಭ್ ಶೆಟ್ಟಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಸಿನಿ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಬಗ್ಗೆ...

Read moreDetails
ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

May 2, 2026
ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

May 2, 2026
ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

May 2, 2026
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
Next Post
ಟಿಕೆಟ್​ಗಾಗಿ ಜೆಡಿಎಸ್​ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ ಭಾರಿ ನಿರಾಸೆ..!

ಟಿಕೆಟ್​ಗಾಗಿ ಜೆಡಿಎಸ್​ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ ಭಾರಿ ನಿರಾಸೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada