ಹಿಂದುತ್ವ ಮತ್ತು ಹಿಂದು ರಾಷ್ಟ್ರದ ಹೆಸರಿನಲ್ಲಿ ಬಿಜೆಪಿ ದೇಶದ ಯುವಕರನ್ನು ದಾರಿ ತಪ್ಪಿಸುತ್ತಿದೆ. ಇದರ ಬದಲು ಅವರಿಗೆ ಉದ್ಯೋಗ ನೀಡುವತ್ತ ಗಮನ ಹರಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅದರ ಭಾಗವಾಗಿ ಯುವ ಶಕ್ತಿಯನ್ನು ಸಜ್ಜುಗೊಳಿಸುವತ್ತ ಪಕ್ಷ ಹೆಚ್ಚಿನ ಗಮನವನ್ನು ಹರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ದೇಶದಲ್ಲಿ ದೊಡ್ಡ ನಿರುದ್ಯೋಗದ ಬಿಕ್ಕಟ್ಟನ್ನು ಸೃಷ್ಟಿಸಿದೆ.14 ತಿಂಗಳ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ರಾಜ್ಯದಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಮೈತ್ರಿ ಸರ್ಕಾರದ ನಿರ್ಧಾರವನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿಗಳು ನಡೆಯುತ್ತಿಲ್ಲ, ಮತ್ತು ಕೋವಿಡ್ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. “ಬಿಜೆಪಿಯ ಮುಖ್ಯ ಪ್ರಚಾರವೆಂದರೆ ಹಿಂದೂ ರಾಷ್ಟ್ರದ ಸೃಷ್ಟಿ. ಅವರು ಹಿಂದುತ್ವದ ಹೆಸರಿನಲ್ಲಿ ದೇಶದ ಯುವಕರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ. ಇಂದು ದೇಶದ ಮತ್ತು ರಾಜ್ಯದ ಯುವಕರಿಗೆ ಬೇಕಾಗಿರುವುದು ಉದ್ಯೋಗ, ಒಬ್ಬರ ಕುಟುಂಬ ಮತ್ತು ಅವಲಂಬಿತರನ್ನು ಬೆಂಬಲಿಸುವ ಶಕ್ತಿ” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಡದಿಯ ತೋಟದಲ್ಲಿ ಜನತಾ ಪರ್ವ 1.O ಹಾಗೂ ʻಮಿಷನ್ 123ʼ ಕಾರ್ಯಗಾರದ ನಾಲ್ಕನೇ ದಿನ ಮಾತನಾಡಿದ ಅವರು, ನಿಗದಿತ ಗುರಿ ಮುಟ್ಟಲು 224 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು ಸರ್ಕಾರ ರಚಿಸುವುದು ಕೇವಲ ಅಧಿಕಾರಕ್ಕಾಗಿ ಅಲ್ಲ, ನಾವು ಪ್ರತಿ ಕುಟುಂಬದ ಯುವಕರಿಗೆ ಉದ್ಯೋಗ ನೀಡಬೇಕೆಂದು ಬಯಸುತ್ತೇವೆ ಎಂದು ಈ ವೇಳೆ ಅವರು ಹೇಳಿದ್ದಾರೆ.
ನಿರುದ್ಯೋಗ ನಿರ್ಮೂಲನೆ ಮತ್ತು ನಮ್ಮ ಯುವಕರನ್ನು ಕೆಲಸ ಮಾಡುವತ್ತ ಗಮನ ಹರಿಸುವಂತೆ ಮಾಡೋಣ. ನಮ್ಮ ಮತ್ತು ನಮ್ಮ ಅವಲಂಬಿತರ ಜೀವನವನ್ನು ರೂಪಿಸಿಉವುದನ್ನು ನೋಡೋಣ ನಂತರ ಹಿಂದುತ್ವ ಮತ್ತು ಹಿಂದು ರಾಷ್ಟ್ರದ ಬಗ್ಗೆ ಯೋಚಿಸೋಣ ಎಂದು ಹೇಳಿದ್ದಾರೆ. ಜೆಡಿಎಸ್ ಜನಪರ ಜನಪರ ಸರ್ಕಾರವನ್ನು ತರಲು ಯುವಕರು ಮತ್ತು ಮಹಿಳಾ ಶಕ್ತಿಯನ್ನು ಸಜ್ಜುಗೊಳಿಸುವತ್ತ ಗಮನ ಹರಿಸುತ್ತಿದೆ ಎಂದು ತಿಳಿಸಿದ್ದಾರೆ.
ಟಿಕೆಟ್ ನೀಡುವಾಗ ಪಕ್ಷವು ಯುವಕರಿಗೆ ಆದ್ಯತೆ ನೀಡಲು ಬಯಸುತ್ತಿದೆ ಎಂದು ಹೇಳಿದ ಅವರು, "ನಮ್ಮ ಮಿಷನ್ 123 ರ ಭಾಗವಾಗಿ ಇದಕ್ಕಾಗಿ ನಾನು ಈಗಾಗಲೇ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದೇನೆ ಮತ್ತು ಯುವಕರು ತಮ್ಮ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡುತ್ತೇನೆ" ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಯುವ ನಾಯಕರ ನಡುವೆ ಉತ್ತಮ ಬಾಂಧವ್ಯವಿದೆ, ಮುಂದಿನ 17 ತಿಂಗಳಲ್ಲಿ 2023 ರ ಚುನಾವಣೆಗೆ ತನ್ನ ಮಗ ನಿಖಿಲ್ ಕುಮಾರಸ್ವಾಮಿ (ಜೆಡಿಎಸ್ ಯುವ ಘಟಕದ ಅಧ್ಯಕ್ಷ) ಮತ್ತು ಪ್ರಜ್ಚಲ್ ರೇವಣ್ಣ ನೇತೃತ್ವದಲ್ಲಿ ಪಕ್ಷವು ಯುವ ಶಕ್ತಿಯನ್ನು ಸಜ್ಜುಗೊಳಿಸುತ್ತದೆ ಎಂದು ಈ ವೇಳೆ ಅವರು ಘೋಷಿಸಿದ್ದಾರೆ.