• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ ರೂ.252 ಕೋಟಿ ಖರ್ಚು ಮಾಡಿದ ಬಿಜೆಪಿ

Shivakumar A by Shivakumar A
November 12, 2021
in ದೇಶ, ರಾಜಕೀಯ
0
ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ ರೂ.252 ಕೋಟಿ ಖರ್ಚು ಮಾಡಿದ ಬಿಜೆಪಿ
Share on WhatsAppShare on FacebookShare on Telegram

ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಪುದುಚೆರಿ ಚುನಾವಣೆ ಎದುರಿಸಲು ಭಾರತೀಯ ಜನತಾ ಪಾರ್ಟಿ ಬರೋಬ್ಬರಿ ರೂ.252 ಕೋಟಿ ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ವರದಿ ನೀಡಿದೆ. ಇದರಲ್ಲಿ ಶೇ.60ರಷ್ಟು ಮೊತ್ತವನ್ನು ಪಶ್ಚಿಮ ಬಂಗಾಳದಲ್ಲಿ ಖರ್ಚು ಮಾಡಲಾಗಿದೆ. 

ADVERTISEMENT

ಪಂಚರಾಜ್ಯಗಳ ಚುನಾವಣೆಗಾಗಿ ಬಿಜೆಪಿ ಒಟ್ಟು ರೂ.252,02,71,753 ವ್ಯಯಿಸಿದೆ. ಇದರಲ್ಲಿ ರೂ.43.81 ಕೋಟಿ ಅಸ್ಸಾಂ ಚುನಾವಣೆಗಾಗಿ ಹಾಗೂ ರೂ.4.79 ಕೋಟಿ ಪುದುಚೆರಿ ಚುನಾವಣೆಗಾಗಿ ಖರ್ಚು ಮಾಡಲಾಗಿದೆ. ಈ ಎರಡೂ ಕಡೆ ಬಿಜೆಪಿ ಮೈತ್ರಿಕೂಟ ಅಧಿಕಾರ ಪಡೆದುಕೊಂಡಿದೆ. 

ತಮಿಳುನಾಡಿನಲ್ಲಿ ಬಿಜೆಪಿಯ ಮೈತ್ರಿಕೂಟವಾದ ಎಐಎಡಿಎಂಕೆಯಿಂದ ಅಧಿಕಾರವನ್ನು ಡಿಎಂಕೆ ಕಸಿದುಕೊಂಡಿದೆ. ಇಲ್ಲಿ ಬಿಜೆಪಿ ಕೇವಲ 2.6% ಮತಗಳನ್ನು ಪಡೆಯಲಷ್ಟೇ ಶಕ್ತವಾಗಿತ್ತು. ಇದಕ್ಕಾಗಿ ತಮಿಳುನಾಡಿನಲ್ಲಿ ಒಟ್ಟು ರೂ. 22.97 ಕೋಟಿ ಖರ್ಚು ಮಾಡಲಾಗಿದೆ. 

ಕೇರಳದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯು ಒಟ್ಟು ರೂ.29.24 ಕೋಟಿ ವ್ಯಯಿಸಿದೆ. ಆದರೆ, ಒಂದು ಸೀಟನ್ನೂ ಪಡೆಯಲು ಶಕ್ತವಾಗಿಲ್ಲ. ಇಲ್ಲಿ ಎಡರಂಗ ಮತ್ತೆ ಅಧಿಕಾರ ಹಿಡಿದಿದೆ. 

ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ ರೂ.151 ಕೋಟಿ ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಚುನಾವಣೆಗೂ ಮೊದಲು ಆಡಳಿತರೂಢ ಟಿಎಂಸಿಗೆ ಭಾರಿ ಪೈಪೋಟಿ ಒಡ್ಡಿದ್ದ ಬಿಜೆಪಿ ಫಲಿತಾಂಶದ ವೇಳಗೆ ಭಾರಿ ನಿರಾಸೆ ಅನುಭವಿಸಿತ್ತು. 

ಆಯೋಗಕ್ಕೆ ಟಿಎಂಸಿ ನೀಡಿರುವ ವರದಿಯಂತೆ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪಕ್ಷವು 154.28 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 

ಎಲ್ಲಾ ರಾಜಕೀಯ ಪಕ್ಷಗಳಿಂದ ಚುನಾವಣಾ ಖರ್ಚುವೆಚ್ಚದ ವರದಿಯನ್ನು ಆಯೊಗಕ್ಕೆ ಸಲ್ಲಿಕೆ ಮಾಡಲಾಗಿದ್ದು, ಆಯೋಗವು ಈ ದಾಖಲೆಗಳನ್ನು ಬಹಿರಂಗಪಡಿಸಿದೆ. 

Tags: AIADMKBJPCongress PartyCovid 19DMKLDF PartyTMC Partyಕರೋನಾಕೋವಿಡ್-19ಬಿಜೆಪಿ
Previous Post

ಸರ್ಕಾರಿ ಸಾಲಪತ್ರಗಳಲ್ಲಿ ಜನಸಾಮಾನ್ಯರಿಗೂ ಹೂಡಿಕೆಯ ಭಾಗ್ಯ

Next Post

ದಣಿವರಿಯದ ಹೋರಾಟಗಾರ ಕಾಗೋಡು ಜೊತೆಗೊಂದು ಸಂವಾದ ಮುಂದುವರಿದ ಭಾಗ 2

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ದಣಿವರಿಯದ ಹೋರಾಟಗಾರ ಕಾಗೋಡು ಜೊತೆಗೊಂದು ಸಂವಾದ ಮುಂದುವರಿದ ಭಾಗ  2

ದಣಿವರಿಯದ ಹೋರಾಟಗಾರ ಕಾಗೋಡು ಜೊತೆಗೊಂದು ಸಂವಾದ ಮುಂದುವರಿದ ಭಾಗ 2

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!