ಹಾಗಲಕಾಯಿಯ ರುಚಿ ತುಂಬಾನೇ ಕಹಿ ಹಾಗಾಗಿ ಯಾರು ಕೂಡ ಇಷ್ಟಪಟ್ಟು ತಿನ್ನೋದಿಲ್ಲ ಆದ್ರೆ ಹಾಗಲಕಾಯಿಯಿಂದ ಮಾಡಿರುವಂತಹ ಪದಾರ್ಥಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಹಾಗಲ ಕಾಯಿಯಲ್ಲಿ ವಿಟಮಿನ್ C, B1, B2, B3, B5 ಮತ್ತು B6 ಗಳಲ್ಲಿ ಸಮೃದ್ಧವಾಗಿದೆ,ಅಷ್ಟೆ ಅಲ್ಲದೆ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಾಂಶಗಳು ಹೆಚ್ಚಿದೆ. ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಉತ್ತಮ.
ಮಧುಮೇಹ ನಿರ್ವಹಣೆ
ಹಾಗಲಕಾಯನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.ಹಾಗೂ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚು ಮಾಡುತ್ತದೆ.ಮುಖ್ಯವಾಗಿ ಡಯಾಬಿಟಿಕ್ ತೊಂದರೆ ಅಥವ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆಗೇ ಉತ್ತಮ
ಗಟ್ ಬ್ಯಾಕ್ಟೀರಿಯವನ್ನು ನಿವಾರಣೆ ಮಾಡುತ್ತದೆ .ಕಾನ್ಸ್ಟಿಪೇಶನ್ ಅಥವಾ ಬ್ಲೂಟಿಂಗ ಸಮಸ್ಯೆ ಇದ್ದರೂ ಕೂಡ ಕಡಿಮೆಯಾಗುತ್ತದೆ ಹಾಗೂ ಜೀರ್ಣಕಾರಿ ಅಸ್ವಸ್ಥತೆಯನ್ನು ಹಾಗೂ ಉರಿಯುತ್ತವನ್ನು ಕಡಿಮೆ ಮಾಡುತ್ತದೆ.
ಇಮ್ಯೂನಿಟಿ ಸಿಸ್ಟಮ್
ದೇಹದಲ್ಲಿ ಇಮ್ಯೂನಿಟಿ ಪವರನ್ನು ಹೆಚ್ಚು ಮಾಡುತ್ತದೆ ಹಾಗೂ ಇನ್ಫೆಕ್ಷನ್ ವಿರುದ್ಧ ಹೋರಾಡುತ್ತದೆ. ಯಾವುದೇ ಕಾಲೆಯಿಂದ ದೂರ ಇಡಲು ತುಂಬಾನೇ ಸಹಾಯಕಾರಿ.