• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
October 5, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ನಾಡಹಬ್ಬ ಮೈಸೂರು ದಸರಾ ಮೂರನೇ ದಿನಕ್ಕೆ ಕಾಲಿಟ್ಟಿದೆ. ದಸರಾ ಸಂಭ್ರಮಕ್ಕೆ ರೈತ ದಸರಾ ಮೆರಗು ನೀಡಿದೆ. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ರೈತ ದಸರಾ ಮೆರವಣಿಗೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು. ನಂದಿ ಧ್ವಜ ಸ್ಥಂಭಕ್ಕೆ ಪೂಜೆ ಸಲ್ಲಿಸಿ ರೈತ ದಸರೆಗೆ ಚಾಲನೆ ನೀಡಲಾಯ್ತು.

ADVERTISEMENT

ಇದೇ ವೇಳೆ ಜೆಕೆ ಮೈದಾನದಲ್ಲಿರುವ ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಸಭಾಭವನದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ರೈತ ದಸರಾ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ‌ ನೀಡಲಾಯ್ತು. ಕಾರ್ಯಕ್ರಮದಲ್ಲಿ ಸಚಿವ ಕೆ ವೆಂಕಟೇಶ್, ಶಾಸಕ ಹರೀಶ್ ಗೌಡ ಸೇರಿದಂತೆ ಹಲವರು ಭಾಗಿಯಾದರು.

ರೈತ ದಸರಾದಲ್ಲಿ ಹಳ್ಳಿಕಾರ್ ಜೋಡೆತ್ತುಗಳು, ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು ಕಣ್ಮನ ಸೆಳೆದವು. ಇದೇ ವೇಳೆ ವೀರಗಾಸೆ, ದೊಳ್ಳುಕುಣಿತ, ಕಂಸಾಳೆ ಮೊದಲಾದ ಜಾನಪದ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಗಮನ ಸೆಳೆದವು.

ರೈತ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರೈತರು ನಮ್ಮೆಲ್ಲರ ಬೆನ್ನೆಲುಬು ಎಂದು ಹೇಳುತ್ತೇವೆ. ಈಗ ಮೈಸೂರಿನಲ್ಲಿ ದಸರಾ ಮಹೋತ್ಸವ ನಡೆಯುತ್ತಿದೆ. ಇಡೀ ವಿಶ್ವ ಪ್ರಸಿದ್ದಿಯನ್ನು ದಸರಾ ಮಹೋತ್ಸವ ಪಡೆದಿದೆ. ರೈತರು ಬೆಳೆಯುವ ಕೃಷಿ ಉತ್ಪನ್ನ, ರೇಷ್ಮೆ, ಪಶುಸಂಗೋಪನೆ ಬಗ್ಗೆ ರೈತರಿಗೆ ಮಾಹಿತಿ ಇರಬೇಕು. ಯಾವ ರೀತಿ ಹೊಸ ತಂತ್ರಜ್ಞಾನ ಬಳಸಿ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಕೃಷಿ, ರೇಷ್ಮೆ, ಪಶುಸಂಗೋಪನೆ ಬಳಸಿಕೊಂಡು ನಿಮ್ಮ ಜೀವನ ವೃದ್ಧಿಗೊಳಿಸಿಕೊಳ್ಳಬೇಕು ಎಂದರು.

ರೈತರಿಗೆ ಭರವಸೆ.

ಸಿಎಂ, ಡಿಸಿಎಂ, ಸಚಿವರು ಉತ್ತಮವಾಗಿ ದಸರಾ ನಡೆಸುತ್ತಿದ್ದಾರೆ. ಪ್ರಕೃತಿ ನಮ್ಮ ಕೈಯಲ್ಲಿ ಇಲ್ಲ. ಇವರು ಬಂದರೆ ಮಳೆ ಆಗೋದಿಲ್ಲ ಅಂತೆಲ್ಲ ಹೇಳ್ತಾರೆ. ಈಗ ಸಿದ್ದರಾಮಯ್ಯ ಕಾಲ್ಗುಣದಿಂದ ಉತ್ತಮ ಮಳೆಯಾಗಿದೆ. ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿ ಯೋಜನೆ ನಿಲ್ಲಿಸೋದಿಲ್ಲ. ಈ ಯೋಜನೆ ಜೊತೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಿಮ್ಮ ಜೊತೆ ಸರ್ಕಾರ ಸದಾ ಇರುತ್ತದೆ ಎಂದು ರೈತರಿಗೆ ಭರವಸೆ ನೀಡಿದರು.

ರೈತರಿಗೆ ಕೃಷಿ ಆದಾಯಕ್ಕಿಂತ, ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ತಂತ್ರಜ್ಞಾನವನ್ನು ರೈತರು ಅಳವಡಿಕೆ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ರೈತರಿಗೂ ಹೊಸ ತಂತ್ರಜ್ಞಾನ ಯೋಜನೆಯನ್ನು ತಲುಪಿಸಬೇಕು. ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಲಿ. ನಮ್ಮ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ಕೂಡ ರೈತರ ಜೊತೆ ನಮ್ಮ ಸರ್ಕಾರ ಇರುತ್ತದೆ ಎಂದು ಕಾರ್ಯಕ್ರಮದಲ್ಲಿ ಸಚಿವ ಕೆ ವೆಂಕಟೇಶ್ ಹೇಳಿದರು.

Tags: Agriculture Minister Chaluvarayaswamy launched Raita DussehraCM Siddaramaiah‌Congress Party
Previous Post

ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾವು

Next Post

ನಾಲಗೆಗೆ ಕಹಿ – ಆರೋಗ್ಯಕ್ಕೆ ಸಿಹಿ – ಹಾಗಲಕಾಯಿ ಉಪಯೋಗ ಬಹಳ.!

Related Posts

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು
ಕರ್ನಾಟಕ

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

by ಪ್ರತಿಧ್ವನಿ
April 28, 2026
0

ಬೆಂಗಳೂರು ನಗರದ ಹೃದಯಭಾಗದ ಕಬ್ಬನ್ ಪಾರ್ಕ್ ಸಮೀಪ ಸಂಭವಿಸಿದ ವ್ಯಕ್ತಿಯ ನಿಗೂಢ ಸಾವು ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲ್ಪಟ್ಟಿದ್ದರೂ, ಪೊಲೀಸರ ಆಳವಾದ ತನಿಖೆಯಲ್ಲಿ ಆಘಾತಕಾರಿ ಸತ್ಯಗಳು ಬೆಳಕಿಗೆ...

Read moreDetails
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
Next Post
ನಾಲಗೆಗೆ ಕಹಿ – ಆರೋಗ್ಯಕ್ಕೆ ಸಿಹಿ – ಹಾಗಲಕಾಯಿ ಉಪಯೋಗ ಬಹಳ.!

ನಾಲಗೆಗೆ ಕಹಿ - ಆರೋಗ್ಯಕ್ಕೆ ಸಿಹಿ - ಹಾಗಲಕಾಯಿ ಉಪಯೋಗ ಬಹಳ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada