ಬೆಂಗಳೂರಿನ ರೌಡಿಶೀಟರ್ (Rowdysheetar) ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (Biklu shiva) ಕೊಲೆ ಕೇಸ್ ನ ಎ1 ಜಗದೀಶ್ (jagadeesh) ಅಲಿಯಾಸ್ ಜಗ್ಗನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು ಇದುವರೆಗೂ ಆತನ ಸುಳಿವ ಪತ್ತೆಯಾಗಿರಲಿಲ್ಲ.

ಆದರೆ ಇದೀಗ ಪೊಲೀಸರು ಈತನ ಜಾಡು ಹಿಡಿದಿದ್ದು ಜಗ್ಗ ಅಲಿಯಾಸ್ ಜಗದೀಶ ದುಬೈಗೆ (Dubai) ಪರಾರಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಜುಲೈ 15ರಂದು ಬಿಕ್ಲು ಶಿವನ ಕೊಲೆಯಲ್ಲಿ ಭಾಗಿಯಾಗಿದ್ದ ಎ1 ಜಗದೀಶ್, ಆ ಬಳಿಕ ಜುಲೈ 16ರಂದು ಬೆಂಗಳೂರಿನಿಂದ ಕಾರಿನಲ್ಲಿ ಚೆನ್ನೈಗೆ ಪರಾರಿಯಾಗಿದ್ದಾನೆ. ಮತ್ತೆ ಜುಲೈ16ರಂದು ರಾತ್ರಿ ಚೆನ್ನೈನಿಂದ ದುಬೈಗೆ ಪರಾರಿಯಾಗಿರೋ ಮಾಹಿತಿ ಸಿಕ್ಕಿದ್ದು, ಚೆನ್ನೈನಿಂದ ದುಬೈಗೆ ತೆರಳಿರುವ ಟಿಕೆಟ್, ಪಾಸ್‌ಪೋರ್ಟ್ ಬಗ್ಗೆ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ.

ಇನ್ನು ಆರೋಪಿ ಜಗ್ಗ ದುಬೈಗೆ ಹೋಗಿರೋದ್ರಿಂದ ದುಬೈನಲ್ಲಿ ಆತ ಎಲ್ಲಿದ್ದಾನೆ ಎಂಬ ಬಗ್ಗೆಯೂ ಭಾರತಿನಗರ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ ಹಾಗೂ ಆತನನ್ನ ಭಾರತಕ್ಕೆ ಕರೆತರಲು ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಕೇಂದ್ರಕ್ಕೆ ಮನವಿ ಮಾಡಲು ಸಿದ್ಧತೆ ನಡೆಸ್ತಿದ್ದಾರೆ ಎನ್ನಲಾಗಿದೆ.