• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಬಿಹಾರದ ಯುವ ನಾಯಕನಿಗೆ ಕಮಲ ಸಾರಥ್ಯ : ನಿತಿನ್‌ ನಬಿನ್‌ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟ..!

ಪ್ರತಿಧ್ವನಿ by ಪ್ರತಿಧ್ವನಿ
January 19, 2026
in ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಬಿಹಾರದ ಯುವ ನಾಯಕನಿಗೆ ಕಮಲ ಸಾರಥ್ಯ : ನಿತಿನ್‌ ನಬಿನ್‌ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟ..!
Share on WhatsAppShare on FacebookShare on Telegram

ಬೆಂಗಳೂರು : ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಅಧಿಕರಾವಧಿ ಮುಕ್ತಾಯಗೊಂಡ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು.

ADVERTISEMENT

ನಿತಿನ್​ ಅವರನ್ನು ಬೆಂಬಲಿಸಿ, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಾದ ಅರುಣಾಚಲ ಪ್ರದೇಶದ ಪೆಮಾ ಖಂಡು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ, ಹರಿಯಾಣದ ನಯಾಬ್ ಸಿಂಗ್ ಸೈನಿ, ಗೋವಾದ ಪ್ರಮೋದ್ ಸಾವಂತ್ ಸೇರಿದಂತೆ ಹಲವು ರಾಜ್ಯಗಳ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಇನ್ನುಳಿದಂತೆ ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳು 45 ವರ್ಷದ ನಿತಿನ್​ ನಬಿನ್ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಬೆಂಬಲಿಸಿ ನಾಮಪತ್ರಗಳನ್ನು ಸಲ್ಲಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರು ನಿತಿನ್​ ಅವರ ಉಮೇದುವಾರಿಕೆಯ ಅರ್ಜಿಗೆ ಅನುಮೋದನೆ ನೀಡಿದ್ದಾರೆ.  ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರದ ಯುವ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕೃಷಿ ಚಟುವಟಿಕೆಯಲ್ಲೂ ಮಹಿಳೆಯರು ಸಕ್ರಿಯವಾಗಬೇಕು..!!

ಇನ್ನೂ ಪ್ರಮುಖವಾಗಿ ಬಿಜೆಪಿ ಪಕ್ಷದಲ್ಲಿ ರಾಷ್ಟ್ರಾಧ್ಯಕ್ಷರ ಆಯ್ಕೆಯ ವೇಳೆ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಗಳ ಮಂಡಳಿಯ ಪ್ರತಿನಿಧಿಗಳ ಸಮಿತಿಯು ಆಯ್ಕೆಮಾಡುತ್ತದೆ.  ಇದರ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿಯಾದವರು  ವಹಿಸಿಕೊಳ್ಳುತ್ತಾರೆ.

DGP Obscene Video : ರಾಮಚಂದ್ರ ರಾವ್ ರಾಸಲೀಲೆ ಇಲಾಖೆ ಮಾನ ಹರಾಜು..! #pratidhvani

ಬಿಜೆಪ ಪಕ್ಷದ ಸಂವಿಧಾನದ ಪ್ರಕಾರ, ಒಂದು ರಾಜ್ಯದ ಚುನಾವಣಾ ಸಮಿತಿಯ ಯಾವುದೇ 20 ಸದಸ್ಯರು ಜಂಟಿಯಾಗಿ ನಾಲ್ಕು ಅವಧಿಗಳಿಗೆ ಸಕ್ರಿಯ ಸದಸ್ಯರಾಗಿಬೇಕು. ಅಲ್ಲದೆ 15 ವರ್ಷಗಳ ಸದಸ್ಯತ್ವವನ್ನು ಹೊಂದಿರುವ ವ್ಯಕ್ತಿಯ ಹೆಸರನ್ನು ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಪ್ರಸ್ತಾಪಿಸಬಹುದು. ಅಂತಹ ಪ್ರಸ್ತಾವನೆಯನ್ನು ಚುನಾವಣೆಗಳು ಪೂರ್ಣಗೊಂಡ ಕನಿಷ್ಠ ಐದು ರಾಜ್ಯಗಳು ಬೆಂಬಲಿಸಬೇಕು ಎಂಬ ಷರತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಮೈತ್ರಿಯ ಆಡಳಿತವಿದ್ದು, ಆದರೆ ಬಿಜೆಪಿಯ ಅಧಿಕಾರವಿರುವ ರಾಜ್ಯಗಳು ನಿತಿನ್‌ ನಬಿನ್‌ ಅವರಿಗೆ ಬೆಂಬಲ ಸೂಚಿಸಿದ್ದು, ಹೀಗಾಗಿ ಪಕ್ಷ ಬಿಹಾರದ ನಾಯಕನಿಗೆ ಮಣೆ ಹಾಕಿದೆ.

ಇನ್ನೂ ನಿತಿನ್‌ ನಬಿನ್‌ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾಗಿದ್ದಾರೆ. ತಮ್ಮ ತಂದೆಯ ಅಕಾಲಿಕ ಮರಣದ ನಂತರ ನಿತಿನ್ ನಬಿನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವಂತಾಗಿತ್ತು. ಮುಖ್ಯವಾಗಿ ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ಮೈತ್ರಿಯಲ್ಲಿ ನಬಿನ್‌ ಸಮನ್ವಯತೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಅವರಿಗೆ ಮೋದಿ ಹಾಗೂ ಅಮಿತ್‌ ಶಾ ಜೋಡಿ ಪ್ರಮೋಶನ್‌ ನೀಡಿದ್ದು, ನಡ್ಡಾ ಬಳಿಕ ಕೇಸರಿ ಸಾಮ್ರಾಜ್ಯದ ಮಹತ್ವದ ಜವಾಬ್ದಾರಿ ವಹಿಸಿದೆ.

Tags: Amit Shahbihar cm nitish kumarBihar leaderBJPBJP ConstitutionBjp new presidentBjp presidentCM Yogi AdityanathGoa Chief Minister Dr. Pramod SawantHimant Biswa SarmaJDUJP Naddakannada newskarnataka newsNarendra ModiNitin NabinPratidhvanipushkar singh dhami
Previous Post

ಶತಕಗಳ ಸರದಾರ ವಿರಾಟ್‌ : ರನ್‌ ಮಷೀನ್‌ ಕೊಹ್ಲಿ ಮುಂದಿನ ಗುರಿ ಏನು..?

Next Post

ಬಡ ಕುಟುಂಬಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ಹಂಚಿಕೆ ಮಾಡಿದ ಸಂತೋಷ್‌ ಲಾಡ್.‌.!!

Related Posts

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!
ಕರ್ನಾಟಕ

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

by Shivakumar
November 3, 2026
0

ನಟ ದರ್ಶನ್ ಅವರ ಹೆಸರಿನಲ್ಲಿ ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು...

Read moreDetails
ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

November 3, 2026
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

November 3, 2026
Sites to be allotted this year to 5 lakh poor people in the state who do not own a home: CM D.K. Shivakumar announces

ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

November 3, 2026
Congress members have set out to engage in new-style politics after finishing off Siddaramaiah: H.D. Kumaraswamy

ಸಿದ್ದರಾಮಯ್ಯರನ್ನು ಮುಗಿಸಿ ಕಾಂಗ್ರೆಸ್ ನವರು ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ : ಹೆಚ್.ಡಿ. ಕುಮಾರಸ್ವಾಮಿ

November 3, 2026
Next Post
ಬಡ ಕುಟುಂಬಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ಹಂಚಿಕೆ ಮಾಡಿದ ಸಂತೋಷ್‌ ಲಾಡ್.‌.!!

ಬಡ ಕುಟುಂಬಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ಹಂಚಿಕೆ ಮಾಡಿದ ಸಂತೋಷ್‌ ಲಾಡ್.‌.!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada