ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16 ರಂದು ಐದು ನಿಮಿಷಗಳ ಮಧ್ಯಂತರದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ನೀಡಲಾಗಿದೆ. ಅವರು ವೈದ್ಯಕೀಯ ನಿಗದಲ್ಲಿದ್ದಾರೆ (Doctor observation) ಮತ್ತು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತದೆ.

ಪಾಟ್ನಾ ಜಿಲ್ಲೆಯ ಪುನ್‌ಪುನ್ ಬ್ಲಾಕ್‌ನ ನಲ್ಲಿ ಬರುವ ಅವಧ್‌ಪುರ ಗ್ರಾಮದ ನಿವಾಸಿ ರವೀಂದ್ರ ಮಹತೋ ಅವರ ಪತ್ನಿ ಎಂ.ಎಸ್.ದೇವಿ (63) ಅವರನ್ನು ಜೂನ್ 16 ರಂದು ಬೆಲ್ದಾರಿಚಕ್ ಮಧ್ಯಮ ಶಾಲಾಯ ವ್ಯಾಕ್ಸಿನೇಷನ್ ಶಿಬಿರದಲ್ಲಿ ಎರಡು ಬಾರಿ ಲಸಿಕೆ ಹಾಕಲಾಗಿದೆ

ಎರಡು ವಯಸ್ಸಿನ ಜನರಿಗೆ ಲಸಿಕೆ ನೀಡಲು ಸರ್ಕಾರಿ ಶಾಲೆಯಲ್ಲಿ ಒಂದೇ ಕೋಣೆಯಲ್ಲಿ ಎರಡು ಕೌಂಟರ್‌ಗಳನ್ನು ಸ್ಥಾಪಿಸಲಾಯಿತು – ಒಂದು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಎರಡನೆಯದು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ.

ಸುನೀಲಾ ದೇವಿಯ ಸರದಿ ಬಂದಾಗ, ಅವರಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ನ ಮೊದಲು ನೀಡಲಾಯಿತು – ಮತ್ತು ಆಕೆಗೆ ಏನಾದರೂ ತೊಂದರೆಗಳಿವೆಯೇ ಎಂದು ನೋಡಲು ಸ್ವಲ್ಪ ಸಮಯ ಕಾಯುವಂತೆ ಸಿಬ್ಬಂದಿ ಹೇಳಿದರು.

ಆದಾಗ್ಯೂ, ಸ್ವಲ್ಪ ಸಮಯದ ನಂತರ, ಎರಡೂ ಕೌಂಟರ್ಗಳಲ್ಲಿ ಪ್ರತಿಯೊಬ್ಬರೂ ಲಸಿಕೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯವೆಂದು ಭಾವಿಸಿ ಮಹಿಳೆ ಮತ್ತೊಂದು ಸರತಿಯಲ್ಲಿ ನಿಂತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಅಂದರೆ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು ಏನನ್ನು ವಿಚಾರಿಸದೆ ಲಸಿಕೆಯನ್ನು ದೇವಿಯವರಿಗೆ ನೀಡಿದ್ದಾರೆ.

ಕೋಪಗೊಂಡ ಗ್ರಾಮಸ್ಥರು ಲಸಿಕಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸುನಿಲಾ ದೇವಿ ಆರೋಗ್ಯ ಸ್ಥಿತಿ:

ಎರಡು ಲಸಿಕೆ ಪಡೆದಿರುವ ವಿಷಯ ತಿಳಿದ ಕುಟುಂಬ ಸದಸ್ಯರು ಮತ್ತು ಇತರ ಗ್ರಾಮಸ್ಥರು ಲಸಿಕೆ ಶಿಬಿರವನ್ನು ತಲುಪಿ ಅಲ್ಲಿದ್ದ ಆರೋಗ್ಯ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ. ವೈದ್ಯಕೀಯ ಅಧಿಕಾರಿಗೆ ಮಾಹಿತಿ ನೀಡಿದ ತಕ್ಷಣವೇ ದೇವಿಯನ್ನು ವೀಕ್ಷಿಸಲು ಒಂದು ತಂಡವನ್ನು ರಚಿಸಿದರು.

ಮಾಹಿತಿ ದೊರೆತ ಕೂಡಲೇ ಆರೋಗ್ಯ ಅಧಿಕಾರಿ ಸಂಜಯ್ ಕುಮಾರ್ ಅವರು ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ತಂಡವನ್ನು ಮಹಿಳೆಯ ಮನೆಗೆ ಕರೆದೊಯ್ದರು. ಮಹಿಳೆ ಚೆನ್ನಾಗಿದ್ದಾಳೆಂದು ಹೇಳಲಾಗಿದ್ದರೂ ವೀಕ್ಷಣೆಯಲ್ಲಿದೆ. ತೀವ್ರ ನಿರ್ಲಕ್ಷ್ಯಕ್ಕಾಗಿ ವೈದ್ಯಕೀಯ ಅಧಿಕಾರಿ ಇಬ್ಬರು ದಾದಿಯರಾದ ಚಂಚಲ ಕುಮಾರಿ ಮತ್ತು ಸುನೀತಾ ಕುಮಾರಿ ಅವರಿಗೆ ಶೋ-ಕಾಸ್ ನೋಟಿಸ್ ನೀಡಿದ್ದಾರೆ.

ಹಿರಿಯ ಆರೋಗ್ಯ ಅಧಿಕಾರಿ ಮತ್ತು ಏಮ್ಸ್-ಪಾಟ್ನಾದ ಕರೋನ ನೋಡಲ್ ಅಧಿಕಾರಿ ಡಾ. ಸಂಜೀವ್ ಕುಮಾರ್, ಮಹಿಳೆ ಯಾವುದೇ ಪ್ರತಿಕ್ರಿಯೆಯನ್ನು ತೋರಿಸದಿದ್ದರೆ 14 ದಿನಗಳ ನಂತರ ಪ್ರತಿಕಾಯಗಳಿಗೆ ( Antibody test) ಪರೀಕ್ಷಿಸಲಾಗುವುದು ಎಂದು ಹೇಳಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಚನ್ನಾಗಿದೆ ಎಂದಿದ್ದಾರೆ.

COVID-19 ವ್ಯಾಕ್ಸಿನೇಷನ್‌ನಲ್ಲಿ ಬಿಹಾರ ಕಳಪೆ ಸಾಧನೆ ಮಾಡಿದ್ದು ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಜ್ಯವು ತನ್ನ ಅರ್ಹ ಜನಸಂಖ್ಯೆಯ ಶೇಕಡಾ 15.11 ರಷ್ಟು ಮಾತ್ರ ಮೊದಲ ಲಸಿಕೆ ನೀಡಿದೆ.

Please follow and like us:

Related articles

Share article

Stay connected

Latest articles

Please follow and like us: