ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ನಾಳೆ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಿಂದ ಎಸ್ ಎಂ ಕೃಷ್ಣ ಅವರ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತೆ.
ಬೆಂಗಳೂರಿನಿಂದ ಕೃಷ್ಣ ಅವರ ಹುಟ್ಟೂರು ಮದ್ದೂರಿಗೆ ಪಾರ್ಥಿವ ಶರೀರ ತೆರಳಲಿರುವ ಮಾರ್ಗ ಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಕಾರ್ಪೊರೇಷನ್ ಮೂಲಕ ಮೃತದೇಹವನ್ನು ಕೊಂಡೊಯ್ಯಲಾಗುತ್ತದೆ. ಬಳಿಕ ಕೆಂಗೇರಿ ಬಳಿ ಕೆಲ ನಿಮಿಷ ಅಂತಿಮದರ್ಶನಕ್ಕೆ ನಿಲ್ಲಿಸಲಾಗತ್ತೆ.
ಅಲ್ಲಿಂದ ನೇರವಾಗಿ ಬಿಡದಿಗೆ ತೆರಳಲಾಗುತ್ತದೆ. ಇನ್ನು ಬಿಡದಿಯಲ್ಲಿಯೂ ಕೆಲ ನಿಮಿಷ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ರಾಮನಗರ ಕೂಡ ದಲ್ಲಿ ಕೆಲ ನಿಮಿಷ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.
ಇದಾದ ಬಳಿಕ ಚನ್ನಪ್ಪಟ್ಟಣ ಮೂಲಕ ಮದ್ದೂರಿಗೆ ತೆರಳಲಿರುವ ಪಾರ್ಥಿವ ಶರೀರವನ್ನು ಅಲ್ಲಿಯೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.