ಬಿಗ್ ಬಾಸ್ ಮನೆಯಲ್ಲಿ ಇದೀಗ ಒಟ್ಟು 12 ಸ್ಪರ್ಧಿಗಳಿದ್ದು 11ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ವಾರ ಮತ್ತಷ್ಟು ಸ್ಪೆಷಲ್ ಮಾಡೋದುಕ್ಕೆ ಬಿಗ್ ಮನೆಗೆ ಗೆಸ್ಟ್ಸ್ ಎಂಟ್ರಿ ಕೊಟ್ಟಿದ್ದಾರೆ.. ಸೀಸನ್ ೧೦ರಾಲಿಕ್ ತಮ್ಮದೇ ರೀತಿಯ ಆಟ ಆಡಿ ಪ್ರೇಕ್ಷಕರ ಮನ ಗೆದ್ದ ಹಳೆಯ ಕಂಟೆಸ್ಟೆಂಟ್ಗಳು. ಹೌದು ತನಿಶಾ ಕುಪ್ಪಂದ ,ಪ್ರತಾಪ್ ,ವರ್ತೂರ್ ಸಂತೋಷ್ ,ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಬಿಗ್ ಬಾಸ್ ಹೊಸ ಪ್ರೋಮೋ ಹೊರಬಿದ್ದಿದ್ದು ಸೀನಿಯರ್ ಜೂನಿಯರ್ ಕಂಟೆಸ್ಟೆಂಟ್ ಗಳಿಗೆ ಟಾಸ್ಕ್ ನ ನೀಡಿದ್ದಾರೆ. ಮೊದಲಿಗೆ ಪ್ರತಾಪ್ ಅವರು ಮನೆಯ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ನಾಮಿನೇಷನ್ ಪಾಸ್ ಸಿಗುವ ಒಂದು ಟಾಸ್ಕ್ ಅನ್ನ ಆಡಿಸ್ತಾರೆ ಅದಕ್ಕೆ ತ್ರಿವಿಕ್ರಮ್, ಶಿಶಿರ್ ಹಾಗೂ ರಜತ ಅವರನ್ನು ಆಯ್ಕೆ ಮಾಡುತ್ತಾರೆ.
ಮನೆಯ ಲಿವಿಂಗ್ ಏರಿಯಾದ ತುಂಬಾ ಬಲೂನ್ಗಳನ್ನ ಹಾಕಲಾಗಿರುತ್ತದೆ, ಆ ಬಲೂನ್ಗಳಲ್ಲಿ ಎರಡು ನಾಮಿನೇಷನ್ ಪಾಸ್ ಗಳನ್ನು ಕೂಡ ಇಡಲಾಗಿರುತ್ತೆ ಯಾವ ಸ್ಪರ್ಧಿ ಸಿಗುತ್ತೆ ಈ ಪಾಸ್ ಸಿಗುತ್ತದೆ ಹಾಗೂ ಈ ಪಾಸ್ ನಿಂದ ಏನು ಅಡ್ವಾಂಟೇಜ್ ಎಂಬುದೇ ಕುತೂಹಲ.
ಅದಾದ ಬಳಿಕ ನಾಮಿನೇಷನ್ ಟಾಸ್ಕ್ ನಡೆಯುತ್ತದೆ ಇದೇ ವಿಚಾರವಾಗಿ ರಚಿತ್ ಹಾಗೂ ಹನುಮಂತ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಹಾಗೂ ಶಿಶಿರ್ ಮತ್ತು ಮಂಜು ನಡುವೆ ಸಾಕಷ್ಟು ಮಾತಿನ ಸಮರವೇ ನಡೆಯುತ್ತದೆ ಇವರಿಬ್ಬರ ಜಗಳದಲ್ಲಿ ಗೆಸ್ಟ್ ಆಗಿ ಬಂದ ಪ್ರತಾಪ್ ಅವರು ಸೈಲೆಂಟಾಗಿ ಬಿಡ್ತಾರೆ.
ಒಟ್ಟಿನಲ್ಲಿ ಹಳೆಯ ಸ್ಪರ್ಧೆಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋದು ಒಂದು ರೀತಿಯ ಖುಷಿ ನೀಡುದ್ರೆ ಮತ್ತೊಂದಿದೆ ಕಂಟೆಸ್ಟೆಂಟ್ಗಳ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ.